Advertisement

ಮಂಗಳೂರು: ಸೌಂಡ್‌ ಸ್ಪೀಕರ್‌ ಆರ್ಡರ್‌… ಒಂದು ಲಕ್ಷ ರೂ. ವಂಚನೆ

11:44 PM May 04, 2023 | Team Udayavani |

ಮಂಗಳೂರು: ವ್ಯಕ್ತಿಯೋರ್ವರು ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿ ಸೌಂಡ್‌ ಸ್ಪೀಕರ್‌ ಆರ್ಡರ್‌ ಮಾಡಿ 1 ಲ.ರೂ. ಕಳೆದುಕೊಂಡಿದ್ದಾರೆ.

Advertisement

ದೂರುದಾರರು ಎ. 22ರಂದು ಫೇಸ್‌ಬುಕ್‌ನಲ್ಲಿ ಸೌಂಡ್‌ ಸ್ಪೀಕರ್‌ ಜಾಹೀರಾತು ನೋಡಿ ಅದನ್ನು ಆರ್ಡರ್‌ ಮಾಡಿದ್ದರು. ಎ. 29ರಂದು ಯಾರೋ ಅಪರಿಚಿತ ವ್ಯಕ್ತಿ 7029263985ರಿಂದ ಕರೆ ಮಾಡಿ ಕೊರಿಯರ್‌ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನೀವು ಸೌಂಡ್‌ ಸ್ಪೀಕರ್‌ ಅನ್ನು ಆರ್ಡರ್‌ ಮಾಡಿದ್ದು ಅದರ ಕೊರಿಯರ್‌ ಚಾರ್ಜ್‌ 5 ರೂ. ಆಗುತ್ತದೆ. ಆ ಹಣವನ್ನು ಪಾವತಿಸುವಂತೆ ತಿಳಿಸಿ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ. ಆ ಲಿಂಕ್‌ನ್ನು 9717465555ಗೆ ಕಳುಹಿಸುವಂತೆ ತಿಳಿಸಿದ. ಅದರಂತೆ ದೂರುದಾರರು ಲಿಂಕ್‌ನ್ನು ಕಳುಹಿಸಿದರು. ಅನಂತರ ಅವರ ಮೊಬೈಲ್‌ಗೆ ಒಟಿಪಿ ಬಂತು. ಆ ಒಟಿಪಿಯನ್ನು ಅಪರಿಚಿತ ವ್ಯಕ್ತಿಗೆ ತಿಳಿಸಿದರು. ಕೂಡಲೇ ಅವರ ಖಾತೆಯಿಂದ 5 ರೂ. ಕಡಿತಗೊಂಡಿದೆ. ಬಳಿಕ ಮೇ 1ರಂದು ಅವರ ಖಾತೆಯಿಂದ 99,990 ರೂ. ವರ್ಗಾವಣೆಯಾಗಿದೆ. ಅಪರಿಚಿತ ವ್ಯಕ್ತಿ ಒಟಿಪಿ ಪಡೆದುಕೊಂಡು ಒಟ್ಟು 1,00,004 ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂಬುದಾಗಿ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next