ಗಾಂಧೀಜಿ ಪ್ರತಿಮೆಗೆ ಸಂಸದ ಬಿ.ವಿ.ನಾಯಕ, ಜಿಲ್ಲಾಧಿಕಾರಿ ಡಾ|ಬಗಾದಿ ಗೌತಮ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಗರಸಭೆ ಅಧ್ಯಕ್ಷೆ ಹೇಮಲತಾ ಪಿ.ಬೂದೆಪ್ಪ, ಜಿಪಂ ಸಿಇಒ ಅಭಿರಾಮ್ ಜಿ. ಶಂಕರ, ಎಸ್‌ಪಿ ನಿಶಾ ಜೇಮ್ಸ್ ಸೇರಿ ಇತರೆ ಅಧಿಕಾರಿಗಳು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
Advertisement
ಇದೇ ವೇಳೆ ಸರ್ವ ಧರ್ಮ ಪ್ರಾರ್ಥನೆ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಜಿಟಿ ಜಿಟಿ ಮಳೆ ಇದ್ದರೂಲೆಕ್ಕಿಸದೆ ಕೊಡೆಗಳನ್ನು ಹಿಡಿದು ಪ್ರಾರ್ಥನೆ ಸಲ್ಲಿಸಲಾಯಿತು. ಭಾರತ ಸೇವಾದಳ ಸೇರಿ ವಿವಿಧ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ವೃತ್ತದ ಬಳಿಯ ಪ್ರತಿಮೆಗೆ ಗೌರವ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲೂ ಗಾಂಧಿ ಜಯಂತಿ ಆಚರಿಸಲಾಯಿತುಸಂಸದ ಬಿ.ವಿ.ನಾಯಕ ಗೌರವ ಸಮರ್ಪಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣಿ ಸೇರಿ ಇತರೆ ಮುಖಂಡರು ಪಾಲ್ಗೊಂಡಿದ್ದರು. ಛಾಯಾಚಿತ್ರಗಳ ಪ್ರದರ್ಶನ: ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕರ್ನಾಟಕದಲ್ಲಿ ಗಾಂಧೀಜಿ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಗ್ರಾಮೀಣ ಶಾಸಕ ತಿಪ್ಪರಾಜ ಹವಾಲ್ದಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗಾಂಧೀಜಿ ಅಹಿಂಸಾ ಮಾರ್ಗದಿಂದ ರಾಮರಾಜ್ಯ ಕಟ್ಟುವ ಕನಸು ಕಂಡಿದ್ದರು. ಗ್ರಾಮದ ಸ್ವತ್ಛತೆ, ಅಭಿವೃದ್ಧಿಯಿಂದಲೇ ನಮ್ಮ ದೇಶ ಸುಭಿಕ್ಷೆ ಆಗಲು ಸಾಧ್ಯ ಎಂಬ ಅವರ ನುಡಿ ಇಂದಿಗೂ ಪ್ರಸ್ತುತ. ಹಳ್ಳಿಗಳ ಸ್ವತ್ಛತೆಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂಬ ಅವರ ಆಶಯ ಈಡೇರಿಸಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಹಳ್ಳಿಗಳು ಅಭಿವೃದ್ಧಿಗೊಂಡರೆ ಇಡೀ ದೇಶ ಅಭಿವೃದ್ಧಿ ಪಥದಲ್ಲಿ ಚಲಿಸುತ್ತದೆ ಎಂಬ ಪರಿಕಲ್ಪನೆ ಹೊಂದಿದ ಮಹಾನ್ ವ್ಯಕ್ತಿ ಗಾಂಧೀಜಿ ಆದರ್ಶ ಇಂದಿಗೂ ಸೂಕ್ತ. ನಾವೆಲ್ಲರೂ ಗಾಂಧೀಜಿ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
Related Articles
Advertisement
ಕುಷ್ಠರೋಗಿಗಳಿಂದ ಜಯಂತಿ: ಕುಷ್ಠರೋಗಿಗಳು ವಾಸಿಸುವ ಶಾಂತಿ ಸದನ ಕಾಲೋನಿಯಲ್ಲಿ ಎಂ.ನಾಗಪ್ಪ ವಕೀಲರು ಪ್ರತಿಷ್ಠಾನ, ಆಸಿಸ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾ ಕಚೇರಿಯಿಂದ ಗಾಂ ಧೀಜಿ ಜಯಂತಿ ಆಚರಿಸಲಾಯಿತು. ಡಿಟಿಒ ಡಾ| ಸುರೆಂದ್ರ ಬಾಬು ಮಾತನಾಡಿ, ಕುಷ್ಠರೋಗ ಯಾವ ರೀತಿ ಹರಡುತ್ತದೆ. ಇದಕ್ಕೆ ಏನು ಮುಂಜಾಗ್ರತೆ ವಹಿಸಬೇಕು ಎಂದು ವಿವರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಶಬ್ಬೀರ್ ಮಳ್ಳಿ ಮಾತನಾಡಿದರು. ಎಂ.ನಾಗಪ್ಪ ಪ್ರತಿಷ್ಠಾನದ ಚನ್ನಬಸಮ್ಮ, ಮಲ್ಲಿಖಾರ್ಜುನ,ವಿಜಯಕುಮಾರ, ಮಹೇಶ, ಡಾ| ಮುಸ್ತಫಾ, ಡಾ| ರಾಜಶೇಖರ ಸೇರಿ ಇತರರಿದ್ದರು. ನಂತರ ಫಲಾನುಭವಿಗಳಿಗೆ ಹಣ್ಣು ಮತ್ತು ಬ್ರೆಡ್, ನಿತ್ಯೋಪಯೋಗಿ ಪಾತ್ರೆ ವಿತರಿಸಲಾಯಿತು.