Advertisement

6 ರಂಗಾಯಣಗಳಿಗೆ ನಿರ್ದೇಶಕರ ನೇಮಕ: ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಅಕ್ಷತಾ ಎಂ. ನಾಯಕ್‌

11:25 PM Aug 12, 2024 | Team Udayavani |

ಬೆಂಗಳೂರು: ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದ್ದ ಸರಕಾರ ಇದೀಗ ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

Advertisement

ಮೈಸೂರು ರಂಗಾಯಣದ ನಿರ್ದೇಶಕರಾಗಿ ಸತೀಶ್‌ ಟಿ.ಎಚ್‌. ತಿಪಟೂರು, ಧಾರವಾಡ ರಂಗಾಯಣದ ನಿರ್ದೇಶಕರಾಗಿ ರಾಜು ತಾಳಿಕೋಟೆ, ಶಿವಮೊಗ್ಗ ರಂಗಾಯಣದ ನಿರ್ದೇಶಕರಾಗಿ ಪ್ರಸನ್ನ ಡಿ ಸಾಗರ, ಕಲಬುರ್ಗಿ ರಂಗಾಯಣದ ನಿರ್ದೇಶಕರಾಗಿ ಡಾ| ಸುಜಾತ ಜಂಗಮ ಶೆಟ್ಟಿ, ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕಡಕೋಳ ಮತ್ತು ಕಾರ್ಕಳದ ಯಕ್ಷ ರಂಗಾಯಣದ‌ ನಿರ್ದೇಶಕರಾಗಿ ವೆಂಕಟರಮಣ ಐತಾಳ (ಶಿವಮೊಗ್ಗ) ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ವಿವಿಧ ಅಕಾಡೆಮಿಗಳಿಗೆ ಸದಸ್ಯರುಗಳ ಆಯ್ಕೆ
ವಿವಿಧ ಅಕಾಡೆಮಿಗಳಿಗೆ ಸದಸ್ಯರ ಆಯ್ಕೆ ಮಾಡಲಾಗಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ- ಅಕ್ಷತಾ ಎಂ. ನಾಯಕ್‌ (ಮಂಗಳೂರು), ಕರ್ನಾಟಕ ರಾಜ್ಯ ಅರೆಭಾಷಾ ಸಂಸ್ಕತಿ ಮತ್ತು ಸಾಹಿತ್ಯ ಅಕಾಡೆಮಿ- ವಿನೋದ್‌ ಮೂಡಗಡದ್ದೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ- ರಾಘವೇಂದ್ರ ಕಿನ್ನಾಳ ( ಕೊಪ್ಪಳ), ಶಿವಪ್ರಸಾದ (ಚನ್ನಪಟ್ಟಣ), ಕರ್ನಾಟಕ ಲಲಿತಕಲಾ ಅಕಾಡೆಮಿ -ಎಚ್‌.ಎಸ್‌. ಮಂಜುನಾಥ್‌ (ಹಾಸನ), ಕರ್ನಾಟಕ ಬಯಲಾಟ ಅಕಾಡೆಮಿ- ಲಕ್ಷ್ಮಣ ಹಣಮಂತ ದೇಸಾರಟ್ಟಿ (ಬಾಗಲಕೋಟೆ).

Advertisement

Udayavani is now on Telegram. Click here to join our channel and stay updated with the latest news.

Next