Advertisement

ಕೋವಿಡ್ ಜಾಗೃತಿಗಾಗಿ “ಹಿತ್ಲಮನೆ’ಕಿರುಚಿತ್ರ

06:01 PM May 29, 2020 | Naveen |

ಸೊರಬ: ಮಲೆನಾಡಿನ ಸಂಸ್ಕೃತಿಯ ಸೊಗಡಿನೊಂದಿಗೆ ಕೋವಿಡ್ ಜಾಗೃತಿ ಮೂಡಿಸುವ “ಹಿತ್ಲಮನೆ’ ಕಿರುಚಿತ್ರವೊಂದು ರಚನೆಯಾಗಿದ್ದು, ಜನರಲ್ಲಿ ಅರಿವು ಮೂಡಿಸುವ ಕೋವಿಡ್ ಯೋಧರ ವಿಭಿನ್ನ ಯತ್ನ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಸ್ಥಳೀಯರೇ ನಟಿಸುವ ಕಿರುಚಿತ್ರದಲ್ಲಿ ಅಭಿನಯದ ಯಾವುದೇ ತರಬೇತಿ ಹೊಂದದವರು ನಟಿಸಿರುವುದು ಮತ್ತೊಂದು ವಿಶೇಷತೆಯಾಗಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ವೈದ್ಯರು, ಪೊಲೀಸ್ ಸಿಬ್ಬಂದಿ ನಟಿಸಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ| ಅಕ್ಷತಾ ಖಾನಾಪುರ ನೇತೃತ್ವದ ತಂಡದ ಕಾರ್ಯಕ್ಕೆ ಶಾಸಕ ಕುಮಾರ್‌ ಬಂಗಾರಪ್ಪ ಸಾಥ್‌ ನೀಡಿದ್ದು, ಕಥೆ-ಚಿತ್ರಕಥೆಯೊಂದಿಗೆ ಸ್ವರೂಪ್‌ ಯಶವಂತ್‌ ಕ್ಯಾಮೆರಾ ಕೈಚಳಕ ತೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next