Advertisement

ಸೊರಬ: ಸಾವರ್ಕರ್ ಭಾವಚಿತ್ರದೊಂದಿಗೆ ಗಣೇಶ ಮೂರ್ತಿಯ ಮೆರವಣಿಗೆ

04:07 PM Sep 01, 2022 | Vishnudas Patil |

ಸೊರಬ: ವಿಶ್ವ ಹಿಂದೂ ಪರಿಷತ್-ಬಜರಂಗದಳದ ವತಿಯಿಂದ ಗಣೇಶೋತ್ಸವ ಹಿನ್ನೆಲೆಯಲ್ಲಿ ವೀರ ಸಾವರ್ಕರ್ ಭಾವಚಿತ್ರದೊಂದಿಗೆ ಹಿಂದೂ ಮಹಾಸಭಾದ ಸಿಂಹಾಸನಾರೂಢ ಗಣೇಶ ಮೂರ್ತಿಯ ಮೆರವಣಿಗೆಯನ್ನು ಪಟ್ಟಣದಲ್ಲಿ ಬುಧವಾರ ವಿಜೃಂಭಣೆಯಿಂದ ಶಾಂತಿಯುತವಾಗಿ ನಡೆಸಲಾಯಿತು.

Advertisement

ಪಟ್ಟಣದ ಮುಖ್ಯರಸ್ತೆಯ ಕರ್ನಾಟಕ ಬ್ಯಾಂಕ್ ಮುಂಭಾಗದಿಂದ ಮುಖ್ಯರಸ್ತೆಯ ಮಾರ್ಗವಾಗಿ ಶ್ರೀ ರಂಗನಾಥ ದೇವಸ್ಥಾನ, ಚಿಕ್ಕಪೇಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪನಾ ಪೂಜೆ ಸಲ್ಲಿಸಿ, ಚಿಕ್ಕಪೇಟೆ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ ವೃತ್ತ, ಮುಖ್ಯರಸ್ತೆ, ಹೊಸಪೇಟೆ ಬಡಾವಣೆಯಲ್ಲಿ ಮೆರವಣಿಗೆ ನಡೆಸಲಾಯಿತು. ಭಗವಾಧ್ವಜಗಳ ಹಾರಾಟ, ಕೇಸರಿ ತೊಟ್ಟ ಯುವಕರ ದಂಡು, ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು.

ವೀರ ಸಾವರ್ಕರ್ ಗೀತೆ, ವಿಹಿಂಪ, ಬಜರಂಗದಳ ಗೀತೆಯ ಜೊತೆಗೆ ರಾಷ್ಟ್ರ ಪ್ರೇಮದ ಘೋಷಣೆಗಳನ್ನು ಮೊಳಗಿಸಲಾಯಿತು. ಹಾದಿಯುದ್ದಕ್ಕೂ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು. ನಂತರ ಸಂಜೆ 5.30ರ ವೇಳೆಗೆ ಪಟ್ಟಣದ ಪವಿತ್ರ ನದಿ ದಂಡಾವತಿ ನದಿಯಲ್ಲಿ ಗಣೇಶ ಮೂರ್ತಿಯ ನಿಮಜ್ಜನ ಕಾರ್ಯ ಸಕಲ ಧಾರ್ಮಿಕ-ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ಪೊಲೀಸ್ ಇಲಾಖೆಯಿಂದ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಹಿಂಪ ತಾಲೂಕು ಸಹ ಕಾರ್ಯದರ್ಶಿ ಬಿ. ಶಶಿಕುಮಾರ್, ನಗರ ಉಪಾಧ್ಯಕ್ಷ ಲೋಕೇಶ್, ನಗರ ಕಾರ್ಯದರ್ಶಿ ಎಸ್.ಎನ್. ಶರತ್, ಬಜರಂಗದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ನಗರ ಸಂಚಾಲಕ ರಾಘು ಗಜಮುಖ, ಪ್ರಮುಖರಾದ ಸಿ.ಪಿ. ವೀರೇಶ್ ಗೌಡ, ಬಿ. ವಿನುತ್, ವೈ.ಬಿ. ಭರತ್, ಕೆ.ವಿ. ವಿನಾಯಕ, ಗಣೇಶ ಮೂರ್ತಿ ಕಲಾವಿದ ಸೂರಜ್, ಕಾರ್ಯಕರ್ತರಾದ ವಿನಾಯಕ, ರಮೇಶ, ಶಶಿಕುಮಾರ್, ಮಣಿಕಂಠ, ರಾಘು, ಕಾರ್ತಿಕ, ಸುಬ್ರಹ್ಮಣ್ಯ ಆಚಾರ್, ಪ್ರತೀಕ್, ಅರುಣ, ಆನಂದ, ಸಂತೋಷ್, ಅಭಿ ಹೊಯ್ಸಳ, ವಿಶ್ವ, ಪ್ರವೀಣ್ ಆಚಾರ್, ಶರತ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next