Advertisement

ದುರ್ಗಾಪರಮೇಶ್ವರಿ-ಭೂತೇಶ್ವರ ಸ್ವಾಮಿ ಪ್ರತಿಷ್ಠಾಪನೆ

03:20 PM Nov 14, 2021 | Adarsha |

ಸೊರಬ: ಶ್ರೀ ಭೂತೇಶ್ವರ ಸೇವಾ ಟ್ರಸ್ಟ್‌, ಓಂ ಶ್ರೀಮಹಾಗಣಪತಿ ಸೇವಾ ಟ್ರಸ್ಟ್‌ ವತಿಯಿಂದ ಪಟ್ಟಣದಕಾನುಕೇರಿಯಲ್ಲಿ ನ. 14ರಿಂದ 15ರವರೆಗೆ ಶ್ರೀ ಜಗನ್ಮಾತೆದುರ್ಗಾಪರಮೇಶ್ವರಿ ಮತ್ತು ಶ್ರೀ ಭೂತೇಶ್ವರ ಸ್ವಾಮಿಯಪ್ರತಿಷ್ಠಾಪನಾ ಕಾರ್ಯಕ್ರಮ ವಿವಿಧ ಧಾರ್ಮಿಕ ವಿ ಧಿ-ವಿಧಾನಗಳೊಂದಿಗೆ ಜರುಗಲಿದೆ.

Advertisement

ಜಡೆ ಸಂಸ್ಥಾನ ಮಠದ ಶ್ರೀ ಡಾ| ಮಹಾಂತಸ್ವಾಮೀಜಿ ಹಾಗೂ ಜಡೆ ಹಿರೇಮಠದ ಶ್ರೀ ಘನಬಸವಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾಕಾರ್ಯಕ್ರಮ ನಡೆಯಲಿದೆ. ನ. 14ರಂದು ಶ್ರೀಮಲ್ಲಿಕಾರ್ಜುನ ಸ್ವಾಮಿ ಅರಮನೆ ಮಠದ ಮತ್ತು ಸಂಗಡಿಗರ ಆಚಾರ್ಯತ್ವದಲ್ಲಿ ಆಲಯ ಶುದ್ಧೀಕರಣ, ನ. 15ರಂದುಬೆಳಗ್ಗೆ 6.55ರಿಂದ 7.20ರ ಶುಭ ಮುಹೂರ್ತದಲ್ಲಿ ಆಲಯಪ್ರವೇಶ, ನಂತರ ಗಂಗಾ ಕಳಶ, ಗಣಪತಿ ಪುಣ್ಯನಾಂದಿ ,ಪಂಚಕಳಶ ನಂತರ ಗಣಹೋಮ ಮತ್ತು ರಾಕ್ಷೊàಜ್ಞ ಜರುಗಲಿದೆ.

ನ. 16ರಂದು ಗಂಗಾ ಪೂಜೆ, ಗಣಪತಿ ಪುಣ್ಯನಾಂ ದಿ,ಸೇರಿದಂತೆ ವಿವಿಧ ಧಾರ್ಮಿಕ ವಿವಿಧ ವಿಧಾನಗಳೊಂದಿಗೆಶ್ರೀ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾ ಹೋಮ,ಶ್ರೀ ದೇವಿಗೆ ಪಂಚಾಮೃತ, ಎಳನೀರ ಅಭಿಷೇಕ,ಕ್ಷೀರಾಭಿಷೇಕ, ಶಕ್ತಿ ಅಭಿಷೇಕ, ಹರಿದ್ರಾ ಚೂರಣ ಕುಂಕುಮಅಭಿಷೇಕ ಅಲಂಕಾರ, ಅಷ್ಟೋತ್ತರ ಮಹಾಪೂಜೆ,ಕುಂಕುಮ ಅರ್ಚನೆ ಮತ್ತು ಪೂಜಾ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12ಕ್ಕೆ ಶ್ರೀ ಘನಬಸವಅಮರೇಶ್ವರ ಸ್ವಾಮೀಜಿ ಅವರಿಂದ ಪ್ರಾಣ ಪ್ರತಿಷ್ಠಾಮಂತ್ರೋಪದೇಶ, ನೇತ್ರಮಿಲನ, ಬಲಿದಾನಮತ್ತು ಮಹಾಮಂಗಳಾರತಿ ನಡೆಯಲಿದೆ. ನಂತರತೀರ್ಥಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಇರುತ್ತದೆ.ಸಂಜೆ 6ಕ್ಕೆ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮನಡೆಯಲಿದ್ದು, ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸುವಂತೆ ಶ್ರೀ ಭೂತೇಶ್ವರ ಸೇವಾ ಟ್ರಸ್ಟ್‌ ಅಧ್ಯಕ್ಷ ಜಿ.ಕೆರಿಯಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next