Advertisement

ಬರಲಿದೆ ಮೋದಿಗಾಗಿ ಅತ್ಯಾಧುನಿಕ ವಿಮಾನ

11:10 AM Oct 07, 2019 | sudhir |

ಹೊಸದಿಲ್ಲಿ: ಕ್ಷಿಪಣಿ ದಾಳಿಯನ್ನೂ ಹಿಮ್ಮೆಟ್ಟಿಸುವಂಥ ವಿಮಾನವೊಂದನ್ನು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ವಿಶೇಷವಾಗಿ ರೂಪಿಸಲಾಗುತ್ತಿದ್ದು, 2020ರ ಜನವರಿ ವೇಳೆಗೆ ಅದು ಸೇವೆಗೆ ಲಭ್ಯವಾಗಲಿದೆ. ಆ ವಿಮಾನಕ್ಕೆ “ಏರ್‌ ಇಂಡಿಯಾ ವನ್‌’ ಎಂದು ಕರೆಯಲು ತೀರ್ಮಾನಿಸಲಾಗಿದೆ.

Advertisement

ಅಮೆರಿಕದ ಡಲ್ಲಾಸ್‌ನಲ್ಲಿ ವಿಮಾನ ತಯಾರಾಗುತ್ತಿದ್ದು, ಅದು ಅಮೆರಿಕ ಅಧ್ಯಕ್ಷರು ಬಳಸುವ ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿನ ತಂತ್ರಜ್ಞಾನಗಳನ್ನು ಬಹುತೇಕ ಹೋಲಲಿದೆ. ಈ ವಿಮಾನವನ್ನು ಅಮೆರಿಕದಿಂದ ಭಾರತದವರೆಗೆ ನೇರವಾಗಿ ಚಲಾಯಿಸಬಹುದು.

ಭಾರತ ಈ ಮಾದರಿಯ 3 ವಿಮಾನ ಪಡೆಯಲು ನಿರ್ಧರಿಸಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರ ಸೇವೆಗೆ ನಿಯೋಜಿಸಲಾಗುತ್ತದೆ. ಸದ್ಯಕ್ಕೆ ಈ ಮೂವರೂ ಏರ್‌ ಇಂಡಿಯಾದ ಬೋಯಿಂಗ್‌ ಬಿ747 ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ.

ಅಮೆರಿಕ ಅಧ್ಯಕ್ಷರ ವಿಮಾನದಂಥ ವ್ಯವಸ್ಥೆಯುಳ್ಳ ಏರ್‌ ಇಂಡಿಯಾ ವನ್‌

ವಿಮಾನದ ವಿಶೇಷ
– ಕ್ಷಿಪಣಿ ದಾಳಿ ನಿಗ್ರಹಿಸುವ ವ್ಯವಸ್ಥೆ
– ಶತ್ರುಗಳ ರಾಡಾರ್‌ ಕಿರಣಗಳನ್ನು ತಟಸ್ಥಗೊಳಿಸುವ ವ್ಯವಸ್ಥೆ
– ಸೆಲ್ಫ್ ಪ್ರೊಟೆಕ್ಷನ್‌ ಸೂಟ್ಸ್‌ (ಎಸ್‌ಪಿಎಸ್‌)
– ಇನಾ#†ರೆಡ್‌ ಕೌಂಟರ್‌ ಮೆಸರ್ಸ್‌
– ಇಂಟಿಗ್ರೇಟೆಡ್‌ ಡಿಫೆನ್ಸಿವ್‌ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸೂಟ್‌
– ಕೌಂಟರ್‌ ಮೆಶರ್‌ ಡಿಸ್ಪೆಂನ್ಸಿಂಗ್‌ ಸಿಸ್ಟಂ

Advertisement

ಹೆಸರು: ಏರ್‌ ಇಂಡಿಯಾ ವನ್‌
ಮಾಡೆಲ್‌: ಬೋಯಿಂಗ್‌ 777
ವಿಶೇಷತೆ: ಕ್ಷಿಪಣಿ ದಾಳಿ ಹಿಮ್ಮೆಟ್ಟಿಸುವ ಛಾತಿ
ಭಾರತ ಖರೀದಿಸುವ ಒಟ್ಟು ವಿಮಾನ: 3
ಪ್ರತಿ ವಿಮಾನದ ಬೆಲೆ: 1,345 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next