ಬೆಂಗಳೂರು : ಬೆಂಗಳೂರು : ತಮಿಳಿನ ಪ್ರಖ್ಯಾತ ನಟ ಸೂರ್ಯ ಅವರು ಶುಕ್ರವಾರ ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿ ನಟ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಪುಷ್ಮ ನಮನ ಸಲ್ಲಿಸಿ ಕನ್ನೇರಿಟ್ಟಿದ್ದಾರೆ. ಈ ವೇಳೆ ನಟ ಶಿವರಾಜ್ ಕುಮಾರ್ ಅವರು ಜೊತೆಯಲ್ಲಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯ ,’ ಡಾ.ರಾಜ್ ಕುಟುಂಬದೊಂದಿಗೆ ನಮಗೆ ಅವಿನಾಭಾವ ಸಂಬಂಧವಿತ್ತು. ಪುನೀತ್ ಅವರು
ಸದಾ ಹಸನ್ಮುಖಿಯಾಗಿದ್ದರು. ಯಾವಾಗಲೂ ನಗುಮುಖದಿಂದ ಸ್ವಾಗತಿಸುತ್ತಿದ್ದರು’ ಎಂದು ನೆಚ್ಚಿನ ಗೆಳೆಯನನ್ನು ನೆನೆದರು.
ನನ್ನ ಅಮ್ಮ ನನ್ನ ಬಾರಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ, ಪಾರ್ವತಮ್ಮ ಅವರು ಪುನೀತ್ ಅವರನ್ನು ಹೊತ್ತಿದ್ದರು. ನನ್ನ ತಾಯಿ ಸದಾ ಪುನೀತ್ ಅವರನ್ನು ನೆನಪು ಮಾಡುತ್ತಿದ್ದರು, ಪುನೀತ್ ನನಗಿಂತ ಮೂರು ತಿಂಗಳು ದೊಡ್ಡವರು ಅವರು ಇಷ್ಟು ಬೇಗ ಅಗಲಿದ್ದು ತುಂಬಾ ನೋವು ತಂದಿದೆ ಎಂದರು.
ಪುನೀತ್ ಅವರು ನಗುವಿನೊಂದಿಗೆ ಸದಾ ನಮ್ಮ ಹೃದಯದಲ್ಲಿ ಇರುತ್ತಾರೆ ಎಂದರು.
ಕುಟುಂಬಕ್ಕೆ , ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿದರು.