Advertisement

ಕ್ಯಾ|ಗೋಪಿನಾಥ್‌ ಜೀವ ನ ಆಧರಿತ ಚಿತ್ರ ಆಸ್ಕರ್‌ ರೇಸ್‌ಗೆ

01:02 AM Jan 28, 2021 | Team Udayavani |

ಚೆನ್ನೈ: ಕನ್ನಡಿಗ ಕ್ಯಾಪ್ಟನ್‌ ಗೋಪಿನಾಥ್‌ ಜೀವನಾಧಾರಿತ ತಮಿಳು ಸಿನೆಮಾ ಈಗ ಆಸ್ಕರ್‌ ಪ್ರಶಸ್ತಿಯ ರೇಸ್‌ನಲ್ಲಿದೆ. ಸುಧಾ ಕೊಂಗರಾ ನಿರ್ದೇಶನದ, ಖ್ಯಾತ ನಟ ಸೂರ್ಯ ಮುಖ್ಯಪಾತ್ರದಲ್ಲಿರುವ “ಸೂರಾರೈ ಪೊಟ್ರಾ’, ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನ­ಗೊಂಡಿದೆ.

Advertisement

ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ನಟ, ಶ್ರೇಷ್ಠ ನಟಿ, ಶ್ರೇಷ್ಠ ಮೂಲಾಂಕವೂ ಸೇರಿ ಇತರ ವಿಭಾಗಗಳಲ್ಲಿ  ಆಸ್ಕರ್‌ಗೆ ಆಯ್ಕೆ ಯಾಗಿದೆ. ಜನರು ಕಡಿಮೆ ವೆಚ್ಚದಲ್ಲಿ  ವಿಮಾನ­ಯಾನ ಮಾಡಲು ಅನುಕೂಲವಾಗುವಂತೆ ಏರ್‌ಡೆಕ್ಕನ್‌ ಆರಂಭಿಸಿದ ಕ್ಯಾಪ್ಟನ್‌ ಗೋಪಿನಾಥ್‌ ಅವರ ಜೀವನವ ನ್ನಾಧರಿಸಿ, ಸೂರಾರೈ ಪೊಟ್ರಾವನ್ನು ನಿರ್ಮಿಸಲಾಗಿದೆ. ಈ ಚಿತ್ರ ಕಳೆದ ವರ್ಷ ಲಾಕ್‌ಡೌನ್‌ ಇದ್ದಾಗ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿತ್ತು. ಹೀಗೆ ಬಿಡುಗಡೆಯಾದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆ ಪಡೆದಿತ್ತು. ವಿಶೇಷವೆಂದರೆ ಈ ವರ್ಷದ ಆಸ್ಕರ್‌ಗೆ ಒಟಿಟಿಯಲ್ಲಿ ಬಿಡುಗಡೆಯಾದ ಸಿನೆಮಾಗಳು ಮಾತ್ರ ಸ್ಪರ್ಧಿಸಲು ಸಾಧ್ಯ­ವೆಂದು ಆಸ್ಕರ್‌ ಸಂಘಟಕರು ನಿಯಮ ಬದಲಾವಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next