ನವದೆಹಲಿ: ಹೊಸ ಕಾರು ಖರೀದಿಸುವ ಚಿಂತನೆಯಲ್ಲಿದ್ದು, ಸುರಕ್ಷತೆಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದೀರೇ? ಹಾಗಾದರೆ ಇನ್ನು ಸ್ವಲ್ಪ ಕಾಲ ಕಾಯಿರಿ. ಏಕೆಂದರೆ ಕಾರಿನಲ್ಲಿ ಸುರಕ್ಷತೆ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ಸರ್ಕಾರ, ಸೀಟ್ ಸೀಟ್‌ಬೆಲ್ಟ್ ನಲ್ಲೂ ಹೊಸ ನಿಯಮ ಜಾರಿ ಮಾಡಲು ಸಿದ್ಧವಾಗಿದೆ.
ಹೌದು. ಕಾರಿನ ಹಿಂಬದಿಯ ಮಧ್ಯದ ಸೀಟಿನಲ್ಲಿ ಕೂರುವವರಿಗೆ ಈವರೆಗೆ ಬರುತ್ತಿದ್ದ 2 ಪಾಯಿಂಟ್ ಸೀಟ್‌ಬೆಲ್ಟ್ ಅಥವಾ ಲ್ಯಾಪ್ ಸೀಟ್‌ಬೆಲ್ಟ್ ಹೆಚ್ಚು ಸುರಕ್ಷಿತವಲ್ಲ. ಹೀಗಾಗಿ ಮಧ್ಯದ ಆಸನಕ್ಕೂ 3 ಪಾಯಿಂಟ್ ಅಥವಾ ವೈ ಶೇಪಡ್ ಸೀಟ್‌ಬೆಲ್ಟ್ ಅನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದೆ.
ಇದನ್ನೂ ಓದಿ:ರೌಡಿಶೀಟರ್ ಶಾಂತಿ ಕದಡಿದರೆ ಕಠಿಣ ಕ್ರಮ : ಪೊಲೀಸ್ ವರಿಷ್ಠಾಧಿಕಾರಿ ಖಡಕ್ ಸೂಚನೆ
ಈ ಬಗ್ಗೆ ಸದ್ಯದಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಘೋಷಣೆ ಹೊರಡಿಸುವ ಸಾಧ್ಯತೆಯಿದೆ ಎಂದು “ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದೆ.
ಈಗ ಬರುತ್ತಿರುವ ಕಾರುಗಳಲ್ಲಿ ಮುಂದಿನ ಎರಡು ಸೀಟು ಹಾಗೂ ಹಿಂಬದಿಯ ಎರಡು ಸೀಟಿಗೆ ತ್ರಿ ಪಾಯಿಂಟ್ ಸೀಟ್‌ಬೆಲ್ಟ್ ಇದ್ದು, ಮಧ್ಯದ ಸೀಟಿಗೆ ವಿಮಾನಗಳಲ್ಲಿರುವಂತೆ ಲ್ಯಾಪ್ ಸೀಟ್‌ಬೆಲ್ಟ್ ಮಾತ್ರ ಇದೆ.