Advertisement

ಶೀಘ್ರದಲೇ ಉದ್ಯಮಗಳು ಪುನಶೇತನಗೊಂಡು ಯಥಾಸ್ಥಿತಿಗೆ ಬರಲಿದೆ: ಕೆ. ಸಿ. ಶೆಟ್ಟಿ

12:59 PM Aug 09, 2021 | Team Udayavani |

ಮುಂಬಯಿ: ಜಾಗತಿಕವಾಗಿ ಪಸರಿಸಿರುವ ಕೋವಿಡ್‌ ಸಾಂಕ್ರಾಮಿಕ ವಿಶ್ವದ ಉದ್ಯಮ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದೆ.
ಭಾರತೀಯ ಉದ್ಯಮದಲ್ಲೂ ಕರಿಛಾಯೆ ಆವರಿಸಿದೆ. ಆದರೂ ಐಬಿಸಿಸಿಐ ಪರಿವಾರ ಸದಸ್ಯರ ಸ್ಥಿತಿಗತಿಗಳನ್ನು ತಿಳಿದು ಮನೋಬಲ
ತುಂಬುತ್ತಿದೆ. ಸರಕಾರದ ಆದೇಶಾನುಸಾರ ಜತೆಗೂಡುವುದು ಕಷ್ಟಕರವಾದರೂ ಆನ್‌ಲೈನ್‌ ವೆಬಿನಾರ್‌ ಮುಖೇನ ಭೇಟಿ ಮಾಡಿ ಕಾರ್ಯಕ್ರಮ
ನಡೆಸಿದೆ.

Advertisement

ಕೋವಿಡ್‌ ಅನ್ನುವುದು ಹೊಸತಕ್ಕೆ ನಾಂದಿಯಾಗಿದ್ದು ಉದ್ಯಮಸ್ಥರು ನಿಶ್ಚಿಂತರಾಗಿದ್ದು ಫಲವತ್ತತೆಯ ಉದ್ಯಮ ಯುಗದ ಆಗಮನಕ್ಕೆ
ಸಿದ್ಧತರಾಗುವ ಅಗತ್ಯವಿದೆ. ಉದ್ಯಮಗಳು ಪುನಶ್ಚೇತನಗೊಂಡು ಮತ್ತೆ ಹಿಂದಿನಂತಾಗಲಿದೆ. ಆದ್ದರಿಂದ ಉದ್ಯಮಿಗಳಲ್ಲಿ ಆತಂಕ ಬೇಡ.
ಶೀಘ್ರವಾಗಿ ಎಲ್ಲವೂ ತಿಳಿಯಾಗಿ ಮತ್ತೆ ನಾವೆಲ್ಲರೂ ಹೊಸ ಚೈತ್ಯನ್ಯತೆಯೊಂದಿಗೆ ಉದ್ಯಮವನ್ನು ಮುನ್ನಡುಸುವ ವಿಶ್ವಾಸ ನಮಗಿದೆ. ನಾವಂತೂ ಬಂಟರಾಗಿದ್ದು ಶೆಟ್ಟಿ ಅಂದರೆ ಶಕ್ತಿ ಎಂದರ್ಥ ಅಂದಮೇಲೆ ಎದೆಗುಂದುವ ಪ್ರಶ್ನೆ ಬರಬಾರದು ಎಂದು ಇಂಡಿಯನ್‌ ಬಂಟ್ಸ್‌ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ (ಐಬಿಸಿಸಿಐ) ಅಧ್ಯಕ್ಷ ಕೆ. ಸಿ. ಶೆಟ್ಟಿ ಅವರು ತಿಳಿಸಿದರು.

ಇಂಡಿಯನ್‌ ಬಂಟ್ಸ್‌ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ (ಐಬಿಸಿಸಿಐ) ಆ.7ರಂದು ಸಂಜೆ ಅಂಧೇರಿ ಪೂರ್ವದ ಸಹಾರ್‌
ನಲ್ಲಿನ ಹೊಟೇಲ್‌ ಲೀಲಾ ಕೆಂಪೆನ್‌ಸ್ಕಿಯ ಬಾಲ್‌ ರೂಮ್‌ ಸಭಾಗೃಹದಲ್ಲಿ ಆಯೋಜಿಸಿದ್ದ ವಾರ್ಷಿಕ ಐಬಿಸಿಸಿಐ ಕುಟುಂಬದ ಫ್ಯಾಮಿಲಿ ಫನ್‌ ಫಿಯೆಸ್ಟಾ ಕಾರ್ಯಕ್ರಮವನ್ನುದ್ದೇಶಿಸಿ ಕೆ. ಸಿ. ಶೆಟ್ಟಿ ಅವರು ಆಶಯ ವ್ಯಕ್ತಪಡಿಸಿ ಶಭಹಾರೈಸಿದರು.

ಇದನ್ನೂ ಓದಿ:ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ: ಸಚಿವೆ ಶಶಿಕಲಾ ಜೊಲ್ಲೆ

ಕಾರ್ಯಕ್ರದಲ್ಲಿ ತುಂಗಾ ಹೊಟೇಲು ಸಮೂಹದ ಕಾರ್ಯಾಧ್ಯಕ್ಷ ಸುಧಾಕರ್‌ ಎಸ್‌. ಹೆಗ್ಡೆ ಮತ್ತು ಫೈಬರ್‌ ಪೊ„ಲ್ಸ್‌ ಸಂಸ್ಥೆಯ ಕಾರ್ಯಾಧ್ಯಕ್ಷ ಡಿ. ಕೆ. ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಯಾಗಿ ಪಾಲ್ಗೊಂಡ ಮುಂಬಯಿ ಮೆಟ್ರೋ ಪ್ರಾಜೆಕ್ಟ್ ಇಂಜಿನಿಯರ್‌ ಉಮೇಶ್‌ ರೈ ಬಿಳಿಯೂರು ಮತ್ತು ರತಿಕಾ ಯು. ರೈ ದಂಪತಿಯನ್ನು ಅಧ್ಯಕ್ಷ ಕೆ. ಸಿ. ಶೆಟ್ಟಿ ಗೌರವಿಸಿದರು.

Advertisement

ಕಾರ್ಯಕ್ರಮದಲ್ಲಿ ಐಬಿಸಿಸಿಐ ಉಪಾಧ್ಯಕ್ಷ ಎಸ್‌. ಬಿ. ಶೆಟ್ಟಿ, ಗೌರವ ಕಾರ್ಯದರ್ಶಿ ಕೆ. ಜಯ ಸೂಡಾ, ಕೋಶಾಧಿಕಾರಿ ದುರ್ಗಾ ಪ್ರಸಾದ್‌ ಬಿ.
ರೈ, ಜತೆ ಕಾರ್ಯದರ್ಶಿ ಪ್ರಭಾಕರ ಕೆ. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್‌ ಪಿ. ಶೆಟ್ಟಿ, ನಿರ್ದೇಶಕರಾದ ಪಾಂಡುರಂಗ ಎಲ್‌. ಶೆಟ್ಟಿ, ಬಿ. ಬಿ. ಶೆಟ್ಟಿ, ಶ್ರೀನಾಥ್‌ ಬಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಾಂಬೇ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಮುರಳಿ ಕೆ. ಶೆಟ್ಟಿ, ನ್ಯಾಯವಾದಿ ಉಪ್ಪೂರು ಶೇಖರ್‌ ಶೆಟ್ಟಿ, ಬಂಟ್ಸ್‌ ನ್ಯಾಯ ಮಂಡಳಿಯ ಡಿ. ಕೆ. ಶೆಟ್ಟಿ, ಆರ್‌.ಸಿ. ಶೆಟ್ಟಿ, ಸಿಎ ಎನ್‌. ಬಿ. ಶೆಟ್ಟಿ, ಜವಾಬ್‌ ಅಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ, ಬೊಳ್ಯಗುತ್ತು ವಿವೇಕ್‌ ಶೆಟ್ಟಿ, ಕಾರ್ತಿಕ್‌ ಸಿ. ಶೆಟ್ಟಿ, ಐಬಿಸಿಸಿಐ ಕಾರ್ಯಚರಣಾ ವ್ಯವಸ್ಥಾಪಕಿ ನಮಿತಾ ಆರ್‌. ಶೆಟ್ಟಿ ಸೇರಿದಂತೆ ಬಂಟ ಉದ್ಯಮಿಗಳು, ಗಣ್ಯರು, ಐಬಿಸಿಸಿ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಐಬಿಸಿಸಿಐ ಅಧ್ಯಕ್ಷ ಕೆ. ಸಿ. ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಬಂಟರ ಸಂಘ ಮುಂಬಯಿ ಯುವ ವಿಭಾಗದ ಕೋಶಾಧಿಕಾರಿ ನಿಲೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಮಿತ್‌ ಶಿಂಧೆ ಹಾಸ್ಯ ಪ್ರಹಸನ ಪ್ರಸ್ತುತಪಡಿಸಿದರು. ಕೆ. ಜಯ ಸೂಡಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next