Advertisement
ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಡರೋಗಿಗಳ ಮೃತದೇಹ ಮನೆಗೆ ರವಾನಿಸುವುದು ಅಥವಾ ಮನೆಯಲ್ಲೇ ಮೃತಪಟ್ಟ ಸಂದರ್ಭಗಳಲ್ಲಿ ಅಂತ್ಯಕ್ರಿಯೆಗಾಗಿ ಚಿತಾಗಾರ ಅಥವಾ ರುದ್ರಭೂಮಿಗೆ ಸಾಗಿಸಲು ಈ “ಶ್ರದ್ಧಾಂಜಲಿ’ ಸೇವೆ ಬಳಕೆ ಮಾಡಿಕೊಳ್ಳಬಹುದು. ಇದು ಉಚಿತ ಸೇವೆಯಾಗಿದೆ.
Related Articles
Advertisement
ಇದೀಗ, ಶ್ರದ್ಧಾಂಜಲಿ ವಾಹನಕ್ಕೆ ಬೇಕಾಗುವ ಒಬ್ಬ ಚಾಲಕನನ್ನು ಹೊರ ಗುತ್ತಿಗೆ ಆಧಾರದಲ್ಲಿ ಆಯಾ ಜಿಲ್ಲೆಗಳಲ್ಲಿ ನೇಮಕ ಮಾಡಿಕೊಳ್ಳಲು ಹಾಗೂ ಈ ವಾಹನಗಳ ಚಾಲಕರಿಗೆ ಒಂದು ಜತೆ ಸಮವಸ್ತ್ರ ಮತ್ತು ಕಪ್ಪು ಶೂಗಳನ್ನು ಖರೀದಿಸಿ ಕೊಡಲು, ವಾಹನದಲ್ಲಿ ಮೃತರ ಸಂಬಂಧಿಕರಿಗೆ ಕುಳಿತುಕೊಳ್ಳುವುದಕ್ಕೆ ಸೂಕ್ತ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಶ್ರದ್ಧಾಂಜಲಿ ವಾಹನವು ಆಯಾ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿಲುಗಡೆಗೊಂಡಿರುತ್ತದೆ. ಸಾರ್ವಜನಿಕರು, 108 ಸಹಾಯವಾಣಿ ಮೂಲಕ ಕರೆ ಮಾಡಿದರೆ, ತಕ್ಷಣ ವಾಹನವು ಮೃತ ದೇಹವಿರುವ ಸ್ಥಳಕ್ಕೆ ಆಗಮಿಸಿ, ಮನೆ ಅಥವಾ ಚಿತಾಗಾರಕ್ಕೆ ಉಚಿತವಾಗಿ ಸಾಗಿಸುತ್ತದೆ. ಹೀಗಾಗಿ, ಶ್ರದ್ಧಾಂಜಲಿ ವಾಹನದಲ್ಲಿ ಕನಿಷ್ಟ 200 ಕಿಮೀ. ದೂರ ಕ್ರಮಿಸುವುದಕ್ಕೆ ಬೇಕಾಗುವಷ್ಟು ಇಂಧನ ಶೇಖರಣೆಯಾಗಿರುವಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ.
*ಬಡ ವರ್ಗದವರಿಗೆ ಅನುಕೂಲವಾಗುವಂತೆ, “ಶ್ರದ್ಧಾಂಜಲಿ’ ವಾಹನ ಸೇವೆ ಚಾಲನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು 108 ಆ್ಯಂಬುಲೆನ್ಸ್ ಸಹಾಯವಾಣಿ ಮೂಲಕ ಶ್ರದ್ಧಾಂಜಲಿ ವಾಹನ ಸೌಲಭ್ಯ ಪಡೆದುಕೊಳ್ಳುವುದಕ್ಕೂ ಸಂಪರ್ಕ ಮಾಡಬಹುದು.– ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ