Advertisement

ಶೀಘ್ರದಲ್ಲಿ ತೆರೆ ಮೇಲೆ ಲುಂಗಿ

11:35 AM Apr 30, 2018 | |

ಮುಖೇಶ್‌ ಹೆಗ್ಡೆ ನಿರ್ಮಿಸುತ್ತಿರುವ, ಅಕ್ಷಿತ್‌ ಶೆಟ್ಟಿ ನಿರ್ದೇಶನದ “ಲುಂಗಿ’ ಚಿತ್ರ ಮೊದಲ ಹಂತದ ಚಿತ್ರೀಕರಣ ಪೂರೈಸಿ ಎರಡನೇ ಹಂತದ ಚಿತ್ರೀಕರಣದಲ್ಲಿ ತೊಡಗಿದೆ. ಚಿತ್ರದ ತಾಂತ್ರಿಕ ಕೆಲಸಗಳು ಭರದಿಂದ ಸಾಗುತ್ತಿದ್ದು ಜುಲೈ ಅಥವಾ ಆಗಸ್ಟ್‌ ತಿಂಗಳಲ್ಲಿ ತೆರೆ ಮೇಲೆ ಬರುವ ಯೋಜನೆ ಚಿತ್ರ ತಂಡಕ್ಕಿದೆ.

Advertisement

 ಚಿತ್ರದ ನಾಯಕನಾಗಿ ಪ್ರಣವ್‌ ಹೆಗ್ಡೆ, ನಾಯಕಿಯರು ಅಹಲ್ಯಾ ಸುರೇಶ್‌ ಮತ್ತು ರಾಧಿಕ ರಾವ್‌ ಇನ್ನುಳಿದಂತೆ ಪ್ರಕಾಶ್‌, ರೂಪ ವರ್ಕಾಡಿ, ದೀಪಕ್‌ ರೈ ಪಾಣಜೆ,  ಕಾರ್ತಿಕ್‌, ವಿ.ಜೆ.ವಿನೀತ್‌, ಮೈಮ್‌ ರಾಮದಾಸ್‌, ಸಂದೀಪ್‌ ಶೆಟ್ಟಿ ತಾರಾಗಣದಲ್ಲಿದ್ದಾರೆ.

 ಅರ್ಜುನ್‌ ಲೂಯಿಸ್‌ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಿಂಪಲ್‌ ಸುನಿ, ಅರ್ಜುನ್‌ ಲೂಯಿಸ್‌ ಮತ್ತು ವಿಲ್ಸನ್‌ ಕಟೀಲ್‌ ಹಾಡುಗಳನ್ನು ರಚಿಸಿದ್ದಾರೆ. ಚಿತ್ರಕ್ಕೆ ರಿಜೊ ಪಿ ಜಾನ್‌ ಕ್ಯಾಮೆರಾ, ಪ್ರಸಾದ್‌ ಕೆ ಶೆಟ್ಟಿ ಸಂಗೀತ, ಮನು ಶೆಡ್ಗಾರ್‌ ಸಂಕಲನ, ಸತೀಶ್‌ ಬ್ರಹ್ಮಾವರ್‌ ನಿರ್ಮಾಣ ನಿರ್ವಹಣೆ, ರಕ್ಷಿತ್‌ ರೈ ಸಹ-ನಿರ್ದೇಶನ ಮತ್ತು ಮಹೇಶ್‌ ಯೆನ್ಮೂರು ಕಲಾ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next