Advertisement

ಶೀಘ್ರವೇ ಹೈಟೆಕ್‌ ಸಿಟಿ ಬಸ್‌ ನಿಲ್ದಾಣ ನಿರ್ಮಾಣ: ಡಿಸಿ

10:22 AM Sep 02, 2017 | Team Udayavani |

ಕಲಬುರಗಿ: ಬಹುದಿನಗಳ ಸಾರ್ವಜನಿಕರ ಬೇಡಿಕೆಯಂತೆ ನಗರದ ಸೂಪರ್‌ ಮಾರುಕಟ್ಟೆಯ ಸಿಟಿಬಸ್‌ ನಿಲ್ದಾಣ ಹಾಗೂ ಅದರ ಪಕ್ಕದಲ್ಲಿರುವ ಗ್ರಾಮೀಣ ಬಸ್‌ ನಿಲ್ದಾಣಗಳನ್ನು ಹೈಟೆಕ್‌ ಆಗಿ ನಿರ್ಮಿಸಿ ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದರು.

Advertisement

ಶುಕ್ರವಾರ ಉಭಯ ಬಸ್‌ ನಿಲ್ದಾಣ ಪ್ರದೇಶವನ್ನು ವೀಕ್ಷಿಸಿದ ಅವರು, ಹೈಟೆಕ್‌ ಬಸ್‌ ನಿಲ್ದಾಣಕ್ಕಾಗಿ ಒಟ್ಟು 15 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಇದಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ 10 ಕೋಟಿಗಳನ್ನು ಹಾಗೂ ಎಚ್‌ ಕೆಆರ್‌ಡಿಬಿ ಯಿಂದ 5 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದರು.

ಈಗಾಗಲೇ ಅನುದಾನ ಲಭ್ಯವಾಗಿದ್ದು, ಕೂಡಲೇ ಕಾಮಗಾರಿ ಆರಂಭವಾಗಲಿದೆ. ಸಿಟಿ ಬಸ್‌ ನಿಲ್ದಾಣದ ಕಟ್ಟಡವನ್ನು ಎರಡು ಅಂತಸ್ತಿಗೆ ವಿಸ್ತರಣೆ ಮಾಡಲಾಗಿದೆ. ಸೂಪರ್‌ ಮಾರ್ಕೆಟ್‌ ನಲ್ಲಿ ಸಿಟಿ ಬಸ್‌ ನಿಲ್ದಾಣಕ್ಕಾಗಿ ಈಗಾಗಲೇ 1.36 ಎಕರೆ ಭೂಮಿ ಲಭ್ಯವಿದೆ. ಇದೇ ಪ್ರದೇಶದಲ್ಲಿ ಅಂದರೆ ಬಿ.ಎಸ್‌.ಎನ್‌.ಎಲ್‌. ಕಚೇರಿ ಪಕ್ಕದಲ್ಲಿ 10 ಗುಂಟೆ ಭೂಮಿ ಹೆಚ್ಚುವರಿಯಾಗಿ ಬೇಕೆಂಬ ಬೇಡಿಕೆ ಕೆ.ಆರ್‌.ಟಿ.ಸಿ. ಸಂಸ್ಥೆಯವರದ್ದಾಗಿದೆ. 10 ಗುಂಟೆ ಭೂಮಿಯನ್ನು ನೀಡಿ ಬಸ್‌ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸೂಪರ್‌ ಮಾರ್ಕೆಟ್‌ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಬಹಳಷ್ಟು ಭೂಮಿ ಲಭ್ಯವಿದ್ದು, ಅದು ಅತಿಕ್ರಮಣವಾಗುತ್ತಿದೆ. ಸೂಪರ್‌ ಮಾರ್ಕೆಟ್‌ ಪ್ರದೇಶದ ಸಂಪೂರ್ಣ ಆಸ್ತಿಯನ್ನು ಮರು ಸರ್ವೇ ಕೈಗೊಂಡು ನಿಖರ ಮಾಹಿತಿ ಸಂಗ್ರಹಿಸುವಂತೆ ಸಂಬಂ ಧಿಸಿದ ಅ ಧಿಕಾರಿಗಳಿಗೆ
ಜಿಲ್ಲಾಧಿಕಾರಿಗಳು ಸೂಚಿಸಿದರು.

ಸದ್ಯದ ಸಿಟಿ ಬಸ್‌ನಿಲ್ದಾಣ ಹಾಗೂ ಸಬ್‌ ಅರ್ಬನ್‌ ಬಸ್‌ನಿಲ್ದಾಣದ ಮಧ್ಯದಿಂದ ಎಸ್‌.ಬಿ.ಐ. ಬ್ಯಾಂಕ್‌ವರೆಗೆ ರ್‍ಯಾಂಪ್‌ ನಿರ್ಮಿಸಿಕೊಂಡು ಎಸ್‌.ಬಿ.ಐ. ಬ್ಯಾಂಕ್‌ ಮುಂದಿನ ರಸ್ತೆ ಬಳಸಿಕೊಳ್ಳಲಾಗುವುದು. ಇದರಿಂದಾಗಿ ಎರಡು ಮಹಡಿಯ ಬಸ್‌ ನಿಲ್ದಾಣ ನಿರ್ಮಿಸಿದಂತೆ ಆಗುವುದು. ಇದರಿಂದ ಬಸ್‌ ಸಂಚಾರ ಸುಗಮವಾಗುವುದು. ನೂತನ ಬಸ್‌ನಿಲ್ದಾಣ ನಿರ್ಮಿಸಲು ಟೆಂಡರ್‌ ಕರೆದು ಡಿಸೆಂಬರ್‌ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಇಂಜಿನಿಯರ್‌ ಪಿ. ಮೂರ್ತಿ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.

Advertisement

ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್‌ ಆರ್‌.ಪಿ. ಜಾಧವ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಅಜೀಜುದ್ದೀನ್‌, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ಇಂಜಿನಿಯರ್‌ ಮೆಹಬೂಬ್‌ಸಾಬ್‌, ಸಹಾಯಕ ಕಾರ್ಯ
ನಿರ್ವಾಹಕ ಇಂಜಿನಿಯರ್‌ ಶಾಹೀನ್‌ ಮತ್ತಿತರ ಅ ಧಿಕಾರಿಗಳು ಈ ಸಂದರ್ಭದಲ್ಲಿದ್ದರು.  38 ಮಳಿಗೆ ನಿರ್ಮಾಣ ಕಲಬುರಗಿ ನಗರದಲ್ಲಿರುವ ಮಾಂಸ ಮಾರಾಟ ಮಾಡುವವರಿಗೆ ಅನುಕೂಲ ಕಲ್ಪಿಸಲು ಸೂಪರ್‌ ಮಾರ್ಕೆಟ್‌ ಪ್ರದೇಶದ ಸದ್ಯದ ಮಟನ್‌ ಮಾರ್ಕೆಟ್‌ ಹತ್ತಿರ 94.6 ಲಕ್ಷ ರೂ. ವೆಚ್ಚದಲ್ಲಿ 38 ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಲ್ಲಿ 30 ಮಟನ್‌, 4 ಫಿಶ್‌ ಹಾಗೂ 4 ಚಿಕನ್‌ ಮಾರಾಟ ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ಈಗಿರುವ ಮಟನ್‌ ಮಾರ್ಕೆಟ್‌ ಹತ್ತಿರ
6000 ಚದರ ಅಡಿ ಪ್ರದೇಶ ಲಭ್ಯವಿದೆ. ಈ ಹಿಂದೆ ಚಪ್ಪಲ್‌ ಬಜಾರ್‌ ಹತ್ತಿರ ಹಳೆಯ ಮಟನ್‌ ಮಾರ್ಕೆಟ್‌ ನಿರ್ಮಿಸಲು ಒಂದು ಅಂತಸ್ತಿನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಕಾರಣಾಂತರಗಳಿಂದ ಕಟ್ಟಡ ಪೂರ್ಣಗೊಂಡಿಲ್ಲ. ಈ ಕಟ್ಟಡ ಪೂರ್ಣಗೊಳಿಸಲು ಒಂದು ಕೋಟಿ ರೂ. ಕಾಯ್ದಿರಿಸಲಾಗಿದೆ.

ಪಿ. ಸುನೀಲಕುಮಾರ ಮಹಾನಗರ ಪಾಲಿಕೆ ಆಯುಕ

Advertisement

Udayavani is now on Telegram. Click here to join our channel and stay updated with the latest news.

Next