ಕೊಚ್ಚಿ: ಶುಕ್ರವಾರ ಕೊಚ್ಚಿಯಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಗ್ಲೆಂಡ್ ನ ಪ್ರತಿಭಾನ್ವಿತ ಯುವ ಆಟಗಾರ ವಿಲ್ ಜ್ಯಾಕ್ಸ್ ಅವರನ್ನು ಖರೀದಿ ಮಾಡಿದೆ.
ಯುವ ಆಟಗಾರನನ್ನು 3.2 ಕೋಟಿ ರೂ ಗೆ ಖರೀದಿ ಮಾಡಿದ ಆರ್ ಸಿಬಿ ತಂಡವು ಮ್ಯಾಕ್ಸ್ ವೆಲ್, ಕೊಹ್ಲಿ, ಫಾಫ್ ಜತೆಗೆ ಮತ್ತೊಬ್ಬ ಬಿಗ್ ಹಿಟ್ಟರ್ ನನ್ನು ತಂಡಕ್ಕೆ ಕರೆಸಿಕೊಂಡಿದೆ. ಅಲ್ಲದೆ ಆರಂಭಿಕ ಆಟಗಾರನಾಗಿಯೂ ಜ್ಯಾಕ್ಸ್ ತಂಡಕ್ಕೆ ನೆರವಾಗಬಲ್ಲರು.
ಅವರು ತಮ್ಮ ಖಾತೆಯಲ್ಲಿ ಆರ್ ಸಿಬಿಯ ವೆಲ್ ಕಮ್ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಅವರ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ಆರ್ ಸಿಬಿ ಫ್ರಾಂಚೈಸಿಯು ಟ್ವೀಟ್ ನಲ್ಲಿ ಹಾಕಲು ಆಯ್ಕೆ ಮಾಡಿದ ಫೋಟೋವನ್ನು ಅವರು ಟ್ರೋಲ್ ಮಾಡಿದ್ದಾರೆ. ಜ್ಯಾಕ್ಸ್ ತನ್ನ ಚಿತ್ರವನ್ನು ತುಂಬಾ ತಮಾಷೆಯಾಗಿ ಕಂಡು “ಅವಕಾಶಕ್ಕಾಗಿ ಕೃತಜ್ಞರಾಗಿರುತ್ತೇನೆ ಮತ್ತು ಇದಕ್ಕಾಗಿ ಉತ್ಸುಕನಾಗಿದ್ದೇನೆ! ಆದರೆ ಈ ಫೋಟೊ ಬಗ್ಗೆ ಖಚಿತತೆಯಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ದುಬೈಯಲ್ಲಿ 33 ಕೋಟಿ ರೂ. ಜಾಕ್ ಪಾಟ್ ಲಾಟರಿ ಗೆದ್ದ ಭಾರತ ಮೂಲದ ಚಾಲಕ
ವಿಲ್ಸ್ ಜ್ಯಾಕ್ಸ್ ಇಂಗ್ಲೆಂಡ್ ನ ಸರ್ರೆ ಆಟಗಾರರಾಗಿದ್ದು, ಟಿ10 ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 100 ರನ್ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು U-19 ವಿಶ್ವಕಪ್ ನಲ್ಲಿ ಉಪನಾಯಕರಾಗಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದ್ದಾರೆ. ಅವರು ಪವರ್-ಹಿಟ್ಟಿಂಗ್ ಮಾಡುವ ಜ್ಯಾಕ್ಸ್, ಆಫ್-ಸ್ಪಿನ್ ಬೌಲ್ ಕೂಡಾ ಮಾಡುತ್ತಾರೆ.