Advertisement
ವಾಕಿಂಗ್, ಓಟದಲ್ಲಿ ತೊಡಗಿರುವವರು, ಸಾಂಪ್ರದಾಯಿಕ ಇಯರ್ ಬಡ್, ನೆಕ್ ಬ್ಯಾಂಡ್ ಧರಿಸಿದ್ದರೆ, ಸುತ್ತಮುತ್ತಲ ಶಬ್ದ ಕೇಳದೇ ಅವಘಡಗಳಾಗಿರುವ ಘಟನೆಗಳನ್ನು ನೋಡಿದ್ದೇವೆ. ಅಂಥವರಿಗಾಗಿಯೇ ಕಿವಿಯ ಕೊಳವೆಯ ಒಳಗೆ ಹೋಗದೇ ಒಂದು ಅಂತರದಲ್ಲೇ ಇರುವಂತೆ ವಿನ್ಯಾಸ ಮಾಡಲಾದ ನೂತನ ಶೈಲಿಯ ಹೆಡ್ ಫೋನ್ ಇದು. ಇದರ ದರ 10,990 ರೂ. ಇದ್ದು, ಪ್ರಸ್ತುತ ಅಮೆಜಾನ್ನಲ್ಲಿ 9,990 ರೂ. ಗೆ ಲಭ್ಯ.
ಓಟಗಾರರು ಮತ್ತು ಜಿಮ್ ಪ್ರಿಯರಿಗೆ ಅನುಕೂಲವಾಗುವಂತೆ ಫ್ಲೋಟ್ ರನ್ IPX4 ರೇಟಿಂಗ್ ಅನ್ನು ಬೆಂಬಲಿಸುತ್ತದೆ, ನೀರಿನ ಮತ್ತು ಬೆವರುವಿಕೆಯನ್ನು ತಡೆದುಕೊಳ್ಳುತ್ತದೆ.
Related Articles
Advertisement
ಧ್ವನಿ ಗುಣಮಟ್ಟ
ಇದು ಓಟಗಾರರ ಅನುಕೂಲಕ್ಕಾಗಿಯೇ ರೂಪಿಸಲಾಗಿರುವ ಹೆಡ್ ಫೋನ್. ಹೊರಗಿನ ಶಬ್ದವೂ ಕೇಳಿಸಬೇಕು. ಸಂಗೀತವನ್ನೂ ಆಲಿಸಬೇಕು ಎಂಬ ಉದ್ದೇಶದಿಂದ ತಯಾರಿಸಲಾಗಿದೆ. ಕಿವಿಯ ಕಾಲುವೆ ಒಳಗೆ ಕೂರುವ ಬಡ್ಗಳಲ್ಲಿ ಬರುವ ಸಂಗೀತ ಆಲಿಕೆಯ ಗುಣಮಟ್ಟವನ್ನು ನಿರೀಕ್ಷಿಸುವಂತಿಲ್ಲ. ಆದರೂ ಒಂದು ಮಟ್ಟಕ್ಕೆ ಸಂಗೀತ ಹಾಡು ಎಫ್ ಎಂ ಇತ್ಯಾದಿ ಕೇಳಲು ಸಾಕು. ಸೌಂಡ್ ಸಿಗ್ನೇಚರ್ ಅಕಾಸ್ಟಿಕ್, ಕ್ಲಾಸಿಕಲ್, ಜಾಝ್ ಮತ್ತು ಪಾಡ್ಕಾಸ್ಟ್ ಗಳಂತಹವುಗಳನ್ನು ಕೇಳಬಹುದು.
ಮೈಕ್ರೊಫೋನ್
ಇದರಲ್ಲಿ ಮೈಕ್ರೊಫೋನ್ ಚೆನ್ನಾಗಿದೆ. ಅತ್ತ ಕಡೆಯವರಿಗೆ ನಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ. ಕಿವಿಯೊಳಗೆ ಬಡ್ಗಳಿದ್ದರೆ ಕಿರಿಕಿರಿಯಾಗುತ್ತದೆ ಎನ್ನುವವರಿಗೆ ಇದು ಸೂಕ್ತವಾಗಿದೆ. ನಾವು ಇತರ ಕೆಲಸಗಳಲ್ಲಿ ತೊಡಗಿರುವಾಗ ಹ್ಯಾಂಡ್ಸ್ ಫ್ರೀ ಆಗಿ ಮಾತನಾಡಲು ಬಳಸಬಹುದು.
ಬ್ಯಾಟರಿ: ಸರಿಸುಮಾರು 10 ಗಂಟೆಗಳ ನಿರಂತರ ಪ್ಲೇಬ್ಯಾಕ್ ಮಾಡಬಹುದು.USB-C ತ್ವರಿತ ಚಾರ್ಜ್ ಮಾಡಬಹುದು. ಪೂರ್ಣ ಚಾರ್ಜಾಗಲು ಸುಮಾರು 1.5 ಗಂಟೆ ತೆಗೆದುಕೊಳ್ಳುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ