ಬೆಂಗಳೂರು: ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುವ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಹೊಸ ವರ್ಷದ ರೆಸಲ್ಯೂಷನ್ ಬಗ್ಗೆ ಮಾಡಿರುವ ವಿಡಿಯೋ ಸದ್ದು ಮಾಡುತ್ತಿದೆ.
ನಾಲ್ಕೂವರೆ ಲಕ್ಷಕ್ಕೂ ಅಧಿಕ ಸಬ್ ಸ್ಕೈಬರ್ಸ್‌ಗಳನ್ನು ಒಳಗೊಂಡಿರುವ ಸೋನು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ವಾರಕ್ಕೊಂದರಂತೆ ಹೊಸ ಹೊಸ ವ್ಲಾಗ್ಸ್ ವಿಡಿಯೋಗಳು ಅಪ್ಲೋಡ್ ಆಗುತ್ತಲೇ ಇರುತ್ತದೆ.
ಸೋನು ಅವರು ಹೊಸ ವರ್ಷ ತಾನು ಏನೆಲ್ಲ ಮಾಡಬೇಕು ಅಂದುಕೊಂಡಿದ್ದರೋ ಅದರ ಬಗ್ಗೆ ಮಾತನಾಡಿದ್ದಾರೆ.
ಕಳೆದ ವರ್ಷ ನಾನು ಅನ್ಕೊಂಡದ್ದು ಏನೂ ಆಗಿಲ್ಲ. ಈ ವರ್ಷ ನಾನು ಅನ್ಕೊಂಡದ್ದು ಆಗುತ್ತದೆ ಅನ್ನುವ ನಿರೀಕ್ಷೆಯಿದೆ. ಕಳೆದ ವರ್ಷ ನಾನು ಬೇರೆ ದೇಶಕ್ಕೆ ಟ್ರಿಪ್ ಹೋಗಬೇಕು ಅಂದುಕೊಂಡಿದ್ದೆ. ಲ್ಯಾಟ್ ಟಾಪ್ ತಕ್ಕೊಳಬೇಕೆಂದುಕೊಂಡಿದ್ದೆ. ನನ್ನ ಅಮ್ಮನಿಗೆ ಬಳೆ ತೆಗೆಸಿಕೊಡಬೇಕೆಂದುಕೊಂಡಿದ್ದೆ. ಅದೇನೂ ಆಗಿಲ್ಲ. 2024 ದರಿದ್ರ ಅನ್ಕೊಂಡು ಬಿಟ್ಟೆ. ಐ ವಾಚ್ ತಕ್ಕೊಳಬೇಕೆಂದುಕೊಂಡಿದ್ದೆ ಅದು ಮಾತ್ರ ಆಗಿರುವುದು ಅಂಥ ಹೇಳಿದ್ದಾರೆ.
2025ರ ರೆಸಲ್ಯೂಷನ್ ಏನೆಂದರೆ ನನಗೆ ಬೇರೆ ದೇಶಕ್ಕೆ ಟ್ರಿಪ್ ಹೋಗಬೇಕು. ಕೇಸ್ ಎಲ್ಲ ಮುಗಿಸಿಕೊಂಡು 15 ದಿನ ಟ್ರಿಪ್‌ಗೆ ಹೋಗಬೇಕು. ಚೆನ್ನಾಗಿ ಎಂಜಾಯ್ ಮಾಡಬೇಕು. ಆ ನಂತ್ರ ಲ್ಯಾಪ್ ಟಾಪ್ ಹಾಗೂ 17 ಪ್ರೋ ಮ್ಯಾಕ್ಸ್ ತಕ್ಕೋಬೇಕು. ನಾನು ಕೂಡಿಟ್ಟಿರುವ ಹಣದಿಂದ ಎರಡು ಸೈಟ್ ತಕ್ಕೊಂಡಿದ್ದೀನಿ. ಮನೆ ಕಟ್ಟಿಸುವ ಪ್ಲ್ಯಾನ್ ಇದೆ. ನನ್ನ ಅಮ್ಮನಿಗೆ ಚೈನ್ ತೆಗೆಸಿಕೊಡಬೇಕು ಎಂದು ಹೇಳಿದ್ದಾರೆ.
ಇನ್ನು ಕೊನೆಯದಾಗಿ ಸೋನು ಹೇಳಿರುವ ರೆಸಲ್ಯೂಷನ್ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸೋನು ಅವರ ಮನೆಯಲ್ಲಿ ಅವರು ಪ್ರೀತಿಯಿಂದ ಸಾಕಿರುವ ಕಿಯಾ – ಬ್ರೀಜು ಎನ್ನುವ ನಾಯಿಗಳಿವೆ. ಇದನ್ನು ಸೋನು ಅತ್ಯಂತ ಪ್ರೀತಿಯಿಂದ ಸಾಕಿದ್ದಾರೆ.
ಡಾಕ್ಟರ್ ಹೇಳುತ್ತಾರೆ ನಾಯಿಗಳು ತುಂಬಾ ವರ್ಷ ಬದುಕಲ್ಲ. ಅವುಗಳಿಗೆ ಕ್ರಾಸಿಂಗ್ ಮಾಡಿಸಬೇಕೆಂಥ. ಆ ಪಾಪ ಸುತ್ತಿಕೊಳ್ಳಬಾರದು ಕ್ರಾಸಿಂಗ್ ಮಾಡಿಸಬೇಕು ಅಂಥ ಹೇಳ್ತಾರೆ. 2025 ಅಲ್ಲಿ ಕಿಯಾ – ಬ್ರೀಜಾ ಇಬ್ಬರಿಗೂ ಕ್ರಾಸಿಂಗ್ ಮಾಡಿಸೋಣ ಅನ್ಕೊಂಡಿದ್ದೀನಿ. ಇದೊಂದು ನನಗೆ ಡ್ರೀಮ್. ನಾನು ನನ್ನ ನಾಯಿಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದೀನಿ ಎಂದು ಸೋನು ಹೇಳಿದ್ದಾರೆ.
ನನ್ನ ಮಗ ಕ್ಯೂಟ್ ಆಗಿ ಕಾಣಿಸ್ತಾ ಇದ್ದಾನೆ. ನನಗೆ ನಾಯಿಗಳ ವಾಸನೆ ಎಂದರೆ ತುಂಬಾ ಇಷ್ಟ ಎಂದು ಸೋನು ಪ್ರೀತಿಯ ನಾಯಿಯನ್ನು ಮುದ್ದಾಡಿದ್ದಾರೆ. ಇವರಿಬ್ಬರೇ ನನ್ನ ಜೀವನ, ನನ್ನ ಸರ್ವಸ್ವ ಎಂದು ಹೇಳಿದ್ದಾರೆ.
2025ರಲ್ಲಿ ನಾನು ಮದುವೆ ಆಗ್ತಾ ಇದ್ದೇನೆ. ಅದು ಕೂಡ ನನ್ನ ಡ್ರೀಮ್ ಎಂದು ಸೋನು ಹೇಳಿದ್ದಾರೆ. ಇದಲ್ಲದೆ ನನಗೆ ಏನೇ ಆದರೂ ಈ ವರ್ಷ ಕಾರು ಖರೀದಿ ಮಾಡಬೇಕೆಂದು ಸೋನು ಹೇಳಿದ್ದಾರೆ.