Advertisement

ನಟ ಸೋನುಸೂದ್‌ಗೆ ಭಾರತೀಯ ರೈಲ್ವೆಯಿಂದ ಸಂಚಾರ ನಿಯಮದ ಪಾಠ!

08:03 PM Jan 05, 2023 | Team Udayavani |

ಮುಂಬೈ : ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಸಹಾಯದ ಮೂಲಕವೇ ಹಲವರಿಗೆ ಮಾದರಿಯಾಗಿದ್ದ ನಟ ಸೋನುಸೂದ್‌ಗೆ ಭಾರತೀಯ ರೈಲ್ವೆ, ಸಂಚಾರ ನಿಯಮದ ಪಾಠ ಮಾಡಿದ್ದು, ತಮ್ಮ ಎಡವಟ್ಟಿನ ಮೂಲಕ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸಿದ್ದ ಸೋನು, ಉತ್ತರ ರೈಲ್ವೆ ಬಳಿ ಕ್ಷಮೆಯಾಚಿಸಿದ್ದಾರೆ.

Advertisement

ಡಿ.13ರಂದು ನಟ ಸೋನುಸೂದ್‌ ರೈಲಿನ ಮೆಟ್ಟಿಲಿನ ಬಳಿ ಕುಳಿತು ಪ್ರಯಾಣಿಸುತ್ತಿರುವ ವಿಡಿಯೋವನ್ನು ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಅದಕ್ಕೆ ಆಕ್ಷೇಪ ಮಾಡಿದ ಉತ್ತರ ರೈಲ್ವೇ “ಇತರರಿಗೆ ಮಾದರಿಯಾಗಿರುವ ನೀವು ರೈಲಿನ ಮೆಟ್ಟಿಲ ಮೇಲೆ ಕುಳಿತು ಪ್ರಯಾಣಿಸುವುದು ಅಪಾಯಕಾರಿ. ನಿಮ್ಮ ಅಭಿಮಾನಿಗಳು ಇದನ್ನೇ ಅನುಸರಿಸುವ ರೀತಿ ತಪ್ಪು ಸಂದೇಶ ರವಾನೆಯಾಗುಬಹುದು ಈ ಬಗ್ಗೆ ಎಚ್ಚರವಹಿಸಿ ಎಂದು ಟ್ವೀಟ್‌ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next