Advertisement

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ ಸೋನು ಸೂದ್.!

10:55 AM Aug 27, 2021 | Team Udayavani |

ನವ ದೆಹಲಿ : ಕೋವಿಡ್ 19 ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದಲ್ಲದೇ, ದೇಶದಲ್ಲಿ ಜೈವಿಕ ಆಮ್ಲಜನಕದ ಕೊರತೆ ಇದ್ದಾಗ ಪೂರೈಸಿದ ಬಾಲಿವುಡ್ ಸಿನಿ ಅಂಗಳದ ಪ್ರಚಲಿತದ ಹೆಸರು, ನಟ  ಸೋನು ಸೂದ್ ಇಂದು(ಶುಕ್ರವಾರ, ಆಗಸ್ಟ್ 27) ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದಾರೆ.

Advertisement

ಕೆಜ್ರಿವಾಲ್ ಜೊತೆ ಮಾತುಕತೆ ನಡೆಸಿದ ಸೋನು, ದೇಶದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿರುವ ವಿಚಾಋಗಳನ್ನು ಹಂಚಿಕೊಂಡಿದ್ದು, ಮತ್ತು ವಲಸೆ ಕಾರ್ಮಿಕರಿಗಾಗಿಯೇ ಆರಂಭಿಸಿದ ಆ0ನ್ ಲೈನ್ ಜಾಬ್ ಪೋರ್ಟಲ್ ‘ಪ್ರವಾಸಿ ರೋಜ್ ಗರ್’ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ : ಐಸಿಸ್ ಕೆ ದಾಳಿಗೆ ದೇಹಗಳು ಛಿದ್ರ, ಛಿದ್ರ…ಎಲ್ಲೇ ಅಡಗಿದ್ದರೂ ಉಗ್ರರನ್ನು ಬಿಡಲ್ಲ: ಬೈಡೆನ್

ಸುಮಾರು 7, 50,000 ಮಂದಿ ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸುವಲ್ಲಿ ಕಾರ್ಯ ನಿರ್ವಹಿಸಿದ ಬಗ್ಗೆ ನನಗೆ ಹೆಮ್ಮೆ ಇದೆ. ಮಾತ್ರವಲ್ಲದೇ, ಎಲ್ಲಾ ವಲಸೆ ಕಾರ್ಮಿಕರ ಡೇಟಾ ನನ್ನಲ್ಲಿದೆ. ಅದರ ಆಧಾರದ ಮೇಲೆ ಸುಮಾರು 3,00,000 ಮಂದಿಗೆ ಉದ್ಯೋಗ ಅವಕಾಶವನ್ನು ಪೂರೈಸುವುದಕ್ಕೆ ಸಾಧ್ಯವಾಯಿತು ಎಂದು ಮುಖ್ಯಮಂತ್ರಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಲಾಕ್ ಡೌನ್ ನ ಸಂದರ್ಭದಲ್ಲಿ ನಾನು ಆ ಎಲ್ಲಾ ವಲಸೆ ಕಾರ್ಮಿಕರ ಜೊತೆ ಸಂಪರ್ಕದಲ್ಲಿ ಇರುವುದಕ್ಕೆ ನಾನು ಪ್ರಯತ್ನಿಸಿದ್ದೆ. ಅವರ ಮುಂದಿನ ಭವಿಷ್ಯದ ಬಗ್ಗೆ ಎಂದಿಗೂ ನಾನು ಅವರನ್ನು ಮಾತನಾಡಿಸುತ್ತಿದ್ದೆ.  ಜನರು ಎಷ್ಟು ಕಷ್ಟದಲ್ಲಿದ್ದಾರೆ ಎನ್ನುವುದು ನನಗೆ ಆ ಸಂದರ್ಭದಲ್ಲಿ ನನಗೆ ತಿಳಿಯಿತು.

Advertisement

ನಿರುದ್ಯೋಗ ಸಮಸ್ಯೆ ತಾರಕಕ್ಕೇರಿರುವ ಸಂದರ್ಭದಲ್ಲಿ, ಏನು ಪರಿಹಾರ ಕಂಡುಕೊಳ್ಳಬಹುದು ಎಂಬುವುದರ ಬಗ್ಗೆ ನಾನು ಯೋಚನೆ ಮಾಡಿದೆ. ಆ ಸಂದರ್ಭದಲ್ಲಿ ಯೋಚನೆಗೆ ಬಂದಿದ್ದೇ ಈ ಆನ್ ಲೈನ್ ಜಾಬ್ ಪೋರ್ಟಲ್ ‘ಪ್ರವಾಸಿ ರೋಜ್ ಗರ್’ ಯೋಜನೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ನವ ದೆಹಲಿಯ ಉಪ ಮುಖ್ಯಮಂತ್ರಿ ಮನೀಸ್ ಸಿಸೋಡಿಯಾ ಹಾಜರಿದ್ದರು.

ಇದನ್ನೂ ಓದಿ : ಮೈಸೂರು ವಿದ್ಯಾರ್ಥಿನಿ ಪ್ರಕರಣ; ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ: ಹಾಲಪ್ಪ ಆಚಾರ್

Advertisement

Udayavani is now on Telegram. Click here to join our channel and stay updated with the latest news.

Next