ಮುಂಬೈ: ನಾವು ಮಾತನಾಡಬಾರದು ನಮ್ಮ ಕೆಲಸ ಹಾಗೂ ಸಾಧನೆ ಮಾತಾಡಬೇಕು ಎಂಬ ಮಾತಿಗೆ ನಟ ಸೋನು ಸೂದ್ ಉತ್ತಮ ಉದಾಹರಣೆಯಾಗಿದ್ದಾರೆ.
ಬೆಳ್ಳಿ ಪರದೆಯ ಮೇಲೆ ಖಳನಾಯಕನಾಗಿದ್ದರೂ ರಿಯಲ್ ಲೈಫಿನಲ್ಲಿ ಈ ನಟ ರಿಯಲ್ ಹೀರೋ ಆಗಿದ್ದಾರೆ. ಕೋವಿಡ್ ಸೋಂಕಿನಿಂದ ಭಾರತ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಈ ನಟನ ನಿಜವಾದ ಕೆಲಸ ಶುರುವಾಯಿತು. ಬಡ-ಬಗ್ಗರಿಗೆ, ಕೂಲಿ ಕಾರ್ಮಿಕರಿಗೆ ನೆರವಾದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಕಾರ್ಯ ಈ ನಟನಿಗೆ ಹೊಸದೊಂದು ಇಮೇಜ್ ತಂದು ಕೊಟ್ಟಿತು. ಭಾರತ ದೇಶದ ಪ್ರತಿಯೊಂದು ಮೂಲೆಮೂಲೆಗೂ ಸೋನು ಸೂದ್ ಅವರ ಹೆಸರು ಪಸರಿಸುವಂತೆ ಮಾಡಿತು.
ಈಗ ಸೋನು ಅವರ ಸಾಧನೆ ಮಾತನಾಡುತ್ತಿದೆ ಎಂಬುದಕ್ಕೆ ಪ್ರಸಂಗವೊಂದು ಸಾಕ್ಷಿಯಾಗಿದೆ. ಅದು ಏನು ಅಂತಿರಾ ? ಹಾಗಾದರೆ ಮುಂದೆ ಓದಿ..
ಕೆಲ ವರ್ಷಗಳ ಹಿಂದೆ ಪಂಜಾಬಿನ ‘ಸ್ಟಾರ್ ಡಸ್ಟ್’ ಹೆಸರಿನ ಮ್ಯಾಗ್ಜಿನ್ ಕವರ್ ಪೇಜ್ ಫೋಟೊ ಶೂಟ್ ಗೆ ಸೋನು ಸೂದ್ ಅವರು ತಮ್ಮ ಭಾವಚಿತ್ರಗಳನ್ನು ಕಳುಹಿಸಿಕೊಟ್ಟಿದ್ದರು. ಅವುಗಳನ್ನು ಮ್ಯಾಗ್ ಜಿನ್ ರಿಜೆಕ್ಟ್ ಮಾಡಿತ್ತು. ಆದರೆ, ಇಂದು ಅದೇ ಮ್ಯಾಗ್ ಜಿನ್ ಸೋನು ಸೂದ್ ಅವರ ಫೋಟೊವನ್ನು ಮುಖಪುಟದಲ್ಲಿ ಪ್ರಕಟಿಸಿದೆ.
Related Articles
ಈ ಘಟನೆಯನ್ನು ಸ್ವತಃ ಸೋನು ಸೂದ್ ಅವರು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಕವರ್ ಪೇಜಿನಲ್ಲಿ ತಮ್ಮ ಫೋಟೊ ಪ್ರಕಟಿಸಿದ್ದಕ್ಕೆ ಸ್ಟಾರ ಡಸ್ಟ್ ಮ್ಯಾಗ್ ಜಿನ್ ಗೆ ಧನ್ಯವಾದ ಹೇಳಿದ್ದಾರೆ.