Advertisement

ಪ್ರಸಿದ್ಧ ಹಿನ್ನೆಲೆ ಗಾಯಕ ಸೋನು ನಿಗಮ್‌ ಕುಟುಂಬಕ್ಕೆ ಕೋವಿಡ್ ಸೋಂಕು

09:18 PM Jan 05, 2022 | Team Udayavani |

ನವದೆಹಲಿ: ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಮನೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಕೊರೊನಾ ದೃಢ ಪಟ್ಟಿದೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದಾರೆ.

Advertisement

“ಮನೆಯಲ್ಲಿ ಕೊರೊನಾ ಪರಿಸ್ಥಿತಿಯಿದೆ. ಸದ್ಯದಲ್ಲೇ ನಿಮ್ಮೊಂದಿಗೆ ಮತ್ತೆ ಸಂಪರ್ಕ ಸಾಧಿಸಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ, ಪ್ರಸಿದ್ಧ ಹಿನ್ನೆಲೆ ಗಾಯಕ ಸೋನು ನಿಗಮ್‌ , ಅವರ ಪತ್ನಿ ಮಧುರಿಮಾ ಮತ್ತು ಪುತ್ರ ನೆವಾನ್‌ಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೊ ಹಂಚಿಕೊಂಡಿರುವ ಗಾಯಕ ತಾನು ವೈರಸ್‍ಗೆ ತುತ್ತಾಗಿದ್ದೇನೆ ಮತ್ತು ಪ್ರಸ್ತುತ ದುಬೈನಲ್ಲಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

ವೀಡಿಯೊದಲ್ಲಿ, ಗಾಯಕ ಭುವನೇಶ್ವರಕ್ಕೆ ಕಾರ್ಯಕ್ರಮದ ಶೂಟಿಂಗ್‍ಗಾಗಿ ಹೋಗಬೇಕಿತ್ತು. ಆದರೆ ಕ್ವಾರಂಟೈನ್‍ನಲ್ಲಿರುವ ಕಾರಣ ಹೋಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next