ನಟಿ ಸೋನು ಗೌಡ ನಾಯಕಿಯಾಗಿ ಅಭಿನಯಿಸಿರುವ “ಮರೀಚಿ’ ಸಿನಿಮಾ ಈ ವಾರ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಎರಡನೇ ಬಾರಿಗೆ ನಾಯಕ ನಟ ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಂಡಿರುವ ಸೋನು ಗೌಡ ಅವರಿಗೆ “ಮರೀಚಿ’ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಮತ್ತು ಭರವಸೆ ಇಟ್ಟುಕೊಂಡಿದ್ದಾರೆ.
“ಮರೀಚಿ’ ಸಿನಿಮಾದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಸೋನು ಗೌಡ ಸಿನಿಮಾದ ಒಂದಷ್ಟು ವಿಶೇಷತೆಗಳು ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ. “ತುಂಬ ವರ್ಷಗಳ ನಂತರ ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ಅಭಿನಯಿಸಿರುವುದಕ್ಕೆ ತುಂಬ ಖುಷಿಯಾಗುತ್ತದೆ. ಈ ಹಿಂದೆ ನಾನು ಮತ್ತು ವಿಜಯ ರಾಘವೇಂದ್ರ ಒಟ್ಟಿಗೆ ಅಭಿನಯಿಸಿದ್ದ “ಹ್ಯಾಪಿ ನ್ಯೂ ಇಯರ್’ ನಿಮಾದಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ಸಿನಿಮಾ ನೋಡಿದವರು ನಮ್ಮ ಕಾಂಬಿನೇಶನ್ ಮೆಚ್ಚಿಕೊಂಡಿದ್ದರು. ಈಗ “ಮರೀಚಿ’ ಸಿನಿಮಾದಲ್ಲಿ ಮತ್ತೂಮ್ಮೆ ಇಬ್ಬರೂ ಒಟ್ಟಿಗೆ ಆಡಿಯನ್ಸ್ ಮುಂದೆ ಬರುತ್ತಿದ್ದೇವೆ. ಮೊದಲ ಸಿನಿಮಾದಲ್ಲಿ ಇಬ್ಬರಿಗೂ ಸಾಫ್ಟ್ ಪಾತ್ರವಿತ್ತು. ಈ ಸಿನಿಮಾದಲ್ಲಿ ನಾನು ಸ್ವಲ್ಪ ರಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ಈ ಸಿನಿಮಾದಲ್ಲೂ ನಮ್ಮಿಬ್ಬರ ಕಾಂಬಿನೇಶನ್ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂಬುದು ಸೋನು ಮಾತು.
“”ಮರೀಚಿ’ ಔಟ್ ಆ್ಯಂಡ್ ಔಟ್ ಮೆಡಿಕಲ್ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಬೆjಕ್ಟ್ ಸಿನಿಮಾ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ನನ್ನ ಪಾತ್ರಕ್ಕೆ ತುಂಬ ಪ್ರಾಮುಖ್ಯತೆಯಿದೆ. ಸೈಕೋ ಕಿಲ್ಲರ್ ಒಬ್ಬನ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. ತುಂಬ ಬ್ರಿಲಿಯೆಂಟ್ ಸ್ಕ್ರೀನ್ ಪ್ಲೇ ಸಿನಿಮಾದಲ್ಲಿದೆ. ನನ್ನ ಪಾತ್ರ ನೋಡುಗರ ಮನಮುಟ್ಟುವಂತಿದೆ. ಸಿನಿಮಾ ಟೀಮ್ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ. ಸಿನಿಮಾದ ಎಮೋಶನ್ಸ್ ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಎಲ್ಲರಿಗೂ ಕಾಡುವಂಥ ಸಿನಿಮಾವಾಗಲಿದೆ’ ಎಂಬುದು ಸೋನು ಭರವಸೆ.
“ಬಹುತೇಕ ಕಾರ್ಪೋರೆಟ್ ಹಿನ್ನೆಲೆಯಿಂದ ಬಂದವರೇ ಈ ಸಿನಿಮಾ ಮಾಡಿದ್ದಾರೆ. ಹಾಗಾಗಿ “ಮರೀಚಿ’ ಸಿನಿಮಾ ಕೂಡ ಕಾರ್ಪೋರೆಟ್ ಶೈಲಿಯಲ್ಲೇ ಬಂದಿದೆ. ತುಂಬ ಶಿಸ್ತುಬದ್ಧವಾಗಿ ಇಡೀ ಸಿನಿಮಾದ ಕೆಲಸ ಮುಗಿದಿದೆ. ನನ್ನ ಪ್ರಕಾರ “ಮರೀಚಿ’ ಒಂದೊಳ್ಳೆ ಎಕ್ಸ್ ಪೆರಿಮೆಂಟ್ ಮತ್ತು ಸ್ಮಾರ್ಟ್ ಸಿನಿಮಾ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಒಂದೇ ವಾರದಲ್ಲಿ ಒಂದು ಮಿಲಿಯನ್ ವೀವ್ಸ್ ಕಂಡಿದೆ. ಹೀಗಾಗಿ ಥಿಯೇಟರ್‌ನಲ್ಲೂ “ಮರೀಚಿ’ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎನ್ನುತ್ತಾರೆ ಸೋನು.
ಜಿ. ಎಸ್. ಕಾರ್ತಿಕ ಸುಧನ್