Advertisement
ಪ್ರಕರಣ ಸಂಬಂಧ ಮಾ.22ರಂದು ಆಕೆಯನ್ನು ಬಂಧಿಸಿ 4 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಸೋಮವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಆಕೆಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಸೋನುಗೌಡಳ ವಿಚಾರಣೆಯಲ್ಲಿ ಬಾಲಕಿಯ ಪೋಷಕರಿಗೆ 50 ಸಾವಿರ ರೂ. ಕೊಟ್ಟಿರುವುದು ಪತ್ತೆಯಾಗಿದೆ. ಮತ್ತೂಂದೆಡೆ ಮಗುವಿನ ಪಾಲಕರ ಊರಾದ ರಾಯಚೂರಿಗೆ ತೆರಳಿ ಸ್ಥಳ ಮಹಜರು ನಡೆಸಲಾಗಿತ್ತು. ಆಗ ಮಗುವಿನ ಪಾಲಕರು 50 ಸಾವಿರ ರೂ. ಅನ್ನು ಸೋನು ಗೌಡಳಿಂದ ಪಡೆದುಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೂಮ್ಮೆ ಪಾಲಕರಿಗೆ ನೋಟಿಸ್ ನೀಡಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಮಗುವಿನ ಜತೆ ರೀಲ್ಸ್
ರಾಯಚೂರು ಮೂಲದ ದಂಪತಿಯ 8 ವರ್ಷದ ಬಾಲಕಿ ಜತೆ ಸೋನು ರೀಲ್ಸ್ ಮಾಡುತ್ತಿದ್ದಳು. ಬಳಿಕ ಬಾಲಕಿಯನ್ನು ತನಗೇ ಕೊಡಬೇಕೆಂದು ಹಠ ಹಿಡಿದು, 10 ಲಕ್ಷ ರೂ. ಆಮಿಷ ಒಡ್ಡಿದ್ದಳು ಎನ್ನಲಾಗಿದೆ. ಆದರೆ ಬಾಲಕಿ ಹೆತ್ತವರು ಒಪ್ಪಿರಲಿಲ್ಲ. ಆದರೆ ಮಾ. 1ರಂದು ರಾಯಚೂರಿನ ಬಾಲಕಿಯ ಮನೆಗೆ ಹೋಗಿದ್ದ ಸೋನು ಗೌಡ, 15 ದಿನ ಈಕೆ ನನ್ನ ಬಳಿ ಇರಲಿ. ಮಗು, ಅಪ್ಪ ಅಮ್ಮ ಬೇಕು ಎಂದಾಗ ನಿಮ್ಮ ಬಳಿ ಕರೆದುಕೊಂಡು ಬರುತ್ತೇನೆ. ಮಗಳನ್ನು ನೋಡಬೇಕು ಎನಿಸಿದರೆ ನೀವೂ ಬೆಂಗಳೂರಿಗೆ ಬನ್ನಿ ಎಂದಿದ್ದಳಂತೆ. ಅದಕ್ಕೆ ಬಾಲಕಿಯ ಹೆತ್ತವರು ಒಪ್ಪಿದ್ದರು. ಮಗುವನ್ನು ಬೆಂಗಳೂರಿಗೆ ಕರೆತಂದ ಬಳಿಕ, ನಾನು ಮಗುವನ್ನು ದತ್ತು ತೆಗೆದುಕೊಂಡಿದ್ದೇನೆ ಎಂದು ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಳು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಯೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Related Articles
Advertisement