Advertisement
‘ಈ ಮಸೂದೆ, 2010ರ ಮಾ.9ರಂದೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈಗ ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ. ಮಹಿಳಾ ಮೀಸಲು ಮಸೂದೆ ಅಂಗೀಕಾರಕ್ಕೆ ಇದು ಉತ್ತಮ ಅವಕಾಶ. ಈ ನಿಟ್ಟಿನಲ್ಲಿ ದಯವಿಟ್ಟು ಪ್ರಯತ್ನಿಸಿ. ಆಡಳಿತಾರೂಢ ಪಕ್ಷ ಬಿಜೆಪಿಗೆ ಮಹಿಳಾ ಮಸೂದೆ ಬಗ್ಗೆ ಇರುವುದು ಕೇವಲ ತೋರಿಕೆಯ ಒಲವಲ್ಲ ಎಂಬುದನ್ನು ಸಾಬೀತುಪಡಿಸಿ’ ಎಂದು ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೇ, ತಮ್ಮ ಪಕ್ಷ ಲೋಕಸಭೆಯಲ್ಲಿ ಇದನ್ನು ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದೂ ಹೇಳಿದ್ದಾರೆ. ಜೊತೆಗೆ ಪಂಚಾಯತ್ ಮತ್ತು ಪುರಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಮೊದಲ ಬಾರಿಗೆ ನಿರ್ಧರಿಸಿದ ಕುರಿತೂ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಈ ಪತ್ರ ಸೆ.20ರ ದಿನಾಂಕ ಹೊಂದಿದೆ. Advertisement
ಮೀಸಲಿಗಾಗಿ ಮೋದಿಗೆ ಸೋನಿಯಾ ಪತ್ರ
11:30 AM Sep 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.