Advertisement

ಸೋನಿಯಾ ಗಾಂಧಿಗೆ 72; ನಿವಾಸಕ್ಕೆ ಗಣ್ಯರು, ನೂರಾರು ಕಾರ್ಯಕರ್ತರು

12:08 PM Dec 09, 2018 | Team Udayavani |

ಹೊಸದಿಲ್ಲಿ: ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾನುವಾರ 72 ನೇ ಜನ್ಮದಿನಾಚಾರಣೆ ಆಚರಿಸುತ್ತಿದ್ದಾರೆ.

Advertisement

ದೆಹಲಿಯಲ್ಲಿರುವ ಸೋನಿಯಾ ಅವರ ನಿವಾಸಕ್ಕೆ  ಕಾಂಗ್ರೆಸ್‌ನ ಪ್ರಮುಖ ನಾಯಕರು ಮತ್ತು  ಗಣ್ಯರು ಆಗಮಿಸಿ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.

ನೂರಾರು ಕಾಂಗ್ರೆಸ್‌ ನಾಯಕರು ನಿವಾಸದ ಹೊರಗೆ ಜಮಾವಣೆಗೊಂಡಿದ್ದು ಸೋನಿಯಾ ಅವರ ಪರ ಜೈಕಾರಗಳನ್ನು ಕೂಗುತ್ತಿದ್ದಾರೆ. 

ಪ್ರಧಾನಿ ಮೋದಿ ಅವರು ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದು, ಸೋನಿಯಾ ಜಿ ಅವರಿಗೆ ಶುಭಾಶಯಗಳು. ನಾನು ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ. ಎಂದು ಬರೆದಿದ್ದಾರೆ. 

Advertisement

ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಮತ್ತು ಕನಿಮೋಳಿ ಅವರು ಸೋನಿಯಾ ಅವರ ನಿವಾಸಕ್ಕೆ ಆಗಮಿಸಿ ಶುಭ ಕೋರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next