Advertisement

ಸೋನಿಯಾ, ಸಿಂಗ್‌ ಎಸ್‌ಪಿಜಿ ಭದ್ರತೆ ಪರಿಶೀಲನೆ

10:40 AM May 19, 2017 | Team Udayavani |

ಹೊಸದಿಲ್ಲಿ:  ಪ್ರಧಾನಿ, ಮಾಜಿ ಪ್ರಧಾನಿ ಮತ್ತವರ ಕುಟುಂಬದವರಿಗೆ ರಕ್ಷಣೆ ನೀಡುತ್ತಿರುವ ವಿಶೇಷ ರಕ್ಷಣಾ ಪಡೆ(ಎಸ್‌ಪಿಜಿ)ಯ ಭದ್ರತಾ ಪರಿಧಿಯನ್ನು ಸರಕಾರ ಪರಿಶೀಲಿಸಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ತಿಳಿಸಿದ್ದಾರೆ. 

Advertisement

ಅದರಂತೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಮನಮೋಹನ್‌ ಸಿಂಗ್‌, ಅವರ ಪತ್ನಿ ಗುರುಚ‌ರಣ್‌ ಕೌರ್‌, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಸೋದರಿ ಪ್ರಿಯಾಂಕಾ ಗಾಂಧಿ ಮತ್ತಿತರರಿಗೆ ನೀಡಿರುವ ಎಸ್‌ಪಿಜಿ ಭದ್ರತೆಯನ್ನು ಪರಿಶೀಲಿಸಲಾಗುವುದು ಮತ್ತು ಅವರ ಭದ್ರತೆಗೇನಾದರೂ ಆತಂಕವಿದೆಯೇ ಎಂದು ನೋಡಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next