Advertisement
ವಿಶೇಷ ಅಧಿವೇಶನದ ವೇಳೆ ಹಲವಾರು ಅಂಶಗಳ ಬಗ್ಗೆ ಪ್ರಸ್ತಾಪಿಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ, ಕೋಮುವಾದ, ಮಣಿಪುರ ಹಿಂಸೆ ಮತ್ತು ಗಡಿ ಸಂಘರ್ಷದ ಬಗ್ಗೆ ಚರ್ಚೆ ನಡೆಸಬೇಕಾಗಿದೆ ಎಂದು ಪತ್ರದಲ್ಲಿ ಸೋನಿಯಾ ಗಾಂಧಿ ಅವರು ಉಲ್ಲೇಖೀಸಿದ್ದಾರೆ.
Related Articles
ಸಂಸತ್ ಅಧಿವೇಶನ ವಿಚಾರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿನಾ ಕಾರಣ ರಾಜಕೀಯ ಮಾಡುತ್ತಿ ದ್ದಾರೆ. ಹೀಗೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಎಲ್ಲಾ ಅಂಶಗಳನ್ನೂ ಪರಿಗಣಿಸಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ಪ್ರಜಾಪ್ರಭುತ್ವದ ದೇಗುಲ, ಸಂಸತ್‌ನಲ್ಲಿ ನಡೆಯಲಿ ರುವ ಅಧಿವೇಶನದಲ್ಲಿ ಸೋನಿಯಾ ರಾಜಕೀಯ ಮಾಡುತ್ತಿದ್ದಾರೆ. ಸಂಸತ್ ಅಧಿವೇಶನ ಕರೆಯುವು ದಕ್ಕಿಂತ ಮೊದಲು ರಾಜಕೀಯ ಪಕ್ಷಗಳ ಜತೆಗೆ ಚರ್ಚೆ ನಡೆಸುವ ಪದ್ಧತಿ ಇಲ್ಲ ಎಂದಿದ್ದಾರೆ.
Advertisement