Advertisement

“ಅಡಚಣೆ’ಯಲ್ಲೂ ಆಸ್ವಾಧಿಸುವ ಹಾಡುಗಳು

05:41 AM Mar 17, 2019 | |

ನಿರ್ದೇಶಕ “ಜೋಗಿ’ ಪ್ರೇಮ್‌ ಅವರ ಜೊತೆ ಹಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಭರತ್‌ ಎಸ್‌. ನಾವುಂದ “ಅಡಚಣೆಗಾಗಿ ಕ್ಷಮಿಸಿ’ ಎನ್ನುವ ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗಾಂಧಿನಗರಕ್ಕೆ ಪರಿಚಯವಾಗುತ್ತಿದ್ದಾರೆ. ಸದ್ಯ “ಅಡಚಣೆಗಾಗಿ ಕ್ಷಮಿಸಿ’ ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ಇದೇ ವೇಳೆ ಚಿತ್ರದ ಆಡಿಯೋ ಮತ್ತು ಟ್ರೇಲರ್‌ನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿದೆ.

Advertisement

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಮನೋರಂಜನ್‌ ರವಿಚಂದ್ರನ್‌, ನಟಿ ಪಾರುಲ್‌ ಯಾದವ್‌ ಹಾಗೂ ಸಾ.ರಾ ಗೋವಿಂದು ಹಾಜರಿದ್ದು “ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಆಡಿಯೋ ಹಾಗೂ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. “ಅಡಚಣೆಗಾಗಿ ಕ್ಷಮಿಸಿ’ ಚಿತ್ರದಲ್ಲಿ 9 ಮುಖ್ಯ ಪಾತ್ರಗಳಿದ್ದು, ಈ ಪಾತ್ರಗಳ ಸುತ್ತ ಚಿತ್ರದ ಕಥೆ ನಡೆಯಲಿದೆ.

ಚಿತ್ರದಲ್ಲಿ ಪ್ರದೀಪ್‌ ವರ್ಮ ನಾಯಕ ನಟನಾಗಿದ್ದು, ಜೊತೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ಮೇಘಾ, ಅರ್ಪಿತ ಗೌಡ ಹಾಗೂ ಪ್ರೀತಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರೀಧರ್‌, ಶಿವಮಂಜು, ಪ್ರೀತೂ ಪೂಜಾ, ವಿದ್ಯಾ ಕುಲಕರ್ಣಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಅಡಚಣೆಗಾಗಿ ಕ್ಷಮಿಸಿ’ ಸೈಕಾಲಜಿಕಲ್, ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರವಾಗಿದ್ದು, ಚಿತ್ರದಲ್ಲಿ ನಾಯಕ ಪ್ರದೀಪ್‌ ವರ್ಮ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

“ಶ್ರೀ ಭೂಮಿಕಾ ಪ್ರೊಡಕ್ಷನ್‌’ ಮತ್ತು “ಎಸ್‌ಬಿಎನ್‌ ಟಾಕೀಸ್‌’ ಬ್ಯಾನರ್‌ನಡಿ ಸದ್ಗುಣ ಮೂರ್ತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನು ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೂ ಮುಂಚೆ ನಾರ್ವೆಯಲ್ಲಿ ಪ್ರೀಮಿಯರ್‌ ಶೋನಲ್ಲಿ ಪ್ರದರ್ಶನಗೊಂಡು ನೋಡುಗರಿಂದ ಪ್ರಶಂಸೆ ಪಡೆದುಕೊಂಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇದೇ ಮಾರ್ಚ್‌ 22 ರಂದು ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next