ಹೊಸ ವಿಷಯವೆಂದರೆ, ಸಿನಿಮಾ ಚಿತ್ರೀಕರಣದಲ್ಲಿರುವಾಗಲೇ, ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ಮುಗಿದ ಬಳಿಕ ಆಡಿಯೋ ಸಿಡಿ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಈ ಚಿತ್ರತಂಡ, ಹಾಡುಗಳನ್ನು ಮೊದಲೇ ಬಿಡುಗಡೆಗೊಳಿಸಿ, ಚಿತ್ರದ ಪ್ರಚಾರ ಮಾಡುವ ಹೊಸ ಯೋಚನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಂದು ಪ್ರಕಾಶ್ ಕೋಳಿವಾಡ ಹಾಗೂ ಮಮತಾ ಇಬ್ಬರೂ ಆಡಿಯೋ ಸಿಡಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.
Advertisement
ಇನ್ನೂ ಒಂದು ವಿಶೇಷವೆಂದರೆ, ನಿರ್ಮಾಪಕ ಅರುಣ್ ಹೊಸಕೊಪ್ಪ ಅವರು, ಈ ಚಿತ್ರದ ಆಡಿಯೋ ಸಿಡಿಗೆ ನೂರು ರುಪಾಯಿ ಬೆಲೆ ನಿಗದಿಪಡಿಸಿದ್ದಾರೆ! ಆಡಿಯೋ ಸಿಡಿ ಖರೀದಿಸುವವರೇ ಇಲ್ಲದ ಸಮಯದಲ್ಲಿ, ನೂರು ರುಪಾಯಿ ಕೊಟ್ಟು ಜನ ಆಡಿಯೋ ಸಿಡಿ ಪಡೆಯುತ್ತಾರಾ? ಈ ಪ್ರಶ್ನೆಗೆ, “ನಮ್ಮ ಟೀಮ್ ಹಾಗು ಆಪ್ತವಲಯದವರು ಕೊಂಡರೆ ಸಾಕು, ಮೇಲಾಗಿ ಮಾರ್ಕೆಟಿಂಗ್ ಮಾಡಿ ಎಷ್ಟಾಗುತ್ತೋ ಅಷ್ಟು ಸಿಡಿ ಸೇಲ್ ಮಾಡುವ ಮೂಲಕ ಪ್ರಚಾರ ಮಾಡುತ್ತೇವೆ ಅಂತ ಹೇಳಿ ನಿರೂಪಣೆ ಮಾಡೋಕೆ ನಿಂತರು.
ಕಲಾವಿದರಿಗೆ ಸಿನಿಮಾದಿಂದ ಬಂದ ಲಾಭದ ಶೇ.25 ರಷ್ಟು ಹಣವನ್ನು ಕೊಡಲು ತೀರ್ಮಾನಿಸಿದ್ದೇವೆ’ ಎಂದರು ಟೆನ್ನಿಸ್. ಈ ಸಿನಿಮಾಗೆ ಇಮಿ¤ಯಾಜ್ ಸುಲ್ತಾನ್ ಸಂಗೀತ ನೀಡಿದ್ದಾರೆ. ಗಾಯಕರಾಗಬೇಕು ಅಂತ ಅವರು ಈ ಇಂಡಸ್ಟ್ರಿಗೆ ಬಂದರೆ, ಅವರನ್ನು ಟೆನ್ನಿಸ್ ಕೃಷ್ಣ ಸಂಗೀತ ನಿರ್ದೇಶಕರಾಗುವ ಅವಕಾಶ ಮಾಡಿಕೊಟ್ಟರಂತೆ. ಅವರಿಲ್ಲಿ ಐದು ಹಾಡುಗಳನ್ನು ಕೊಟ್ಟಿದ್ದಾರೆ. ಬಹುತೇಕ ಹೊಸ ಗಾಯಕರಿಗೆ ಹಾಡುವ
ಅವಕಾಶ ಕೊಟ್ಟಿದ್ದಾಗಿ ಹೇಳಿಕೊಂಡರು ಇಮಿ¤ಯಾಜ್ ಸುಲ್ತಾನ್. ಅಂದು ಹಿರಿಯ ಕಲಾವಿದ ಉಮೇಶ್, ಇನ್ನೊಬ್ಬ ನಿರ್ಮಾಪಕ ಅಚ್ಯುತ್ ಗೌಡ, ಬ್ಯಾಂಕ್ ಜನಾರ್ದನ್, ರೇಖಾ ದಾಸ್ ಮಾತನಾಡಿದರು. ಉಳಿದಂತೆ ಚಿತ್ರದಲ್ಲಿ ಅಂಬರೀಷ್ ಸಾರಂಗಿ, ನವೀನ್, ಅಶ್ವಿನಿ, ಹೇಮಾಶ್ರೀ, ತನ್ಮಯಿ, ವಿನಯ್ ಚಂದ್ರು ಇತರರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ಕ್ಯಾಮೆರಾ ಹಿಡಿದರೆ, ಕಿಶೋರ್ ಸಂಭಾಷಣೆ ಬರೆದಿದ್ದಾರೆ.