Advertisement

Kannada Cinema; ‘ಅಕ್ಕಮಹಾದೇವಿ’ ಚಿತ್ರಕ್ಕೆ ಸಾಂಗ್‌ ರೆಕಾರ್ಡಿಂಗ್‌

04:26 PM Mar 30, 2024 | Team Udayavani |

ಶ್ರೀ ಜಗನ್ಮಾತೆ ಅಕ್ಕಮಹಾದೇವಿ ಎಂಬ ಸಿನಿಮಾವೊಂದು ತಯಾರಾಗುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಧ್ವನಿಮುದ್ರಣ ಕಾರ್ಯ ಹಂಸಲೇಖ ಸ್ಟುಡಿಯೋದಲ್ಲಿ ನಡೆಯಿತು. ಭರತ್‌ ಸಿನಿ ಕ್ರಿಯೇಷನ್ಸ್‌ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

Advertisement

ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿ ಕಥೆಯನ್ನು ರಚಿಸಿ, ನಿರ್ಮಾಪಕರಾಗಿ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ ವಿಷ್ಣುಕಾಂತ್‌.ಬಿ.ಜೆ. ಈ ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ, ಆರ್‌.ಪಳನಿ ಸೇನಾಪತಿ ಸಂಗೀತವಿದೆ.

ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ವಿಷ್ಣುಕಾಂತ್‌, ಸುರûಾ, ಭವ್ಯ, ಬಿರಾದರ್‌, ಎಂ.ಪಾಟೀಲ್‌ ಮುಂತಾದವರು ನಟಿಸುತ್ತಿದ್ದಾರೆ. ಶಿವಮೊಗ್ಗ, ಬೀದರ್‌, ಮಂಗಳೂರು, ಶ್ರೀಶೈಲ, ಹಿಮಾಲಯ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next