Advertisement

ಬೀದರ್ ಏರ್‌ ಫೋರ್ಸ್‌ಗೆ ಸೋಂಧಿ ಮುಖ್ಯಸ್ಥ

06:10 PM Jun 18, 2021 | Team Udayavani |

ಬೀದರ್ :  ಬೀದರ್ ವಾಯು ಸೇನಾ ನೆಲೆಯ ಮುಖ್ಯಸ್ಥರಾಗಿ ಏರ್ ಕಮಾಂಡರ್ ಸಮೀರ್ ಸೊಂಧೀ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

Advertisement

ಏರ್ ಕಮೊಂಡರ್ ನಿಖಿಲೇಶ್ ಗೌತಮ್ ಅವರು ಸೊಂಧೀ ಅವರಿಗೆ ವಿಧಿಯುಕ್ತವಾಗಿ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ಮಾತನಾಡಿದ ನಿಖಿಲೇಶ್ ಗೌತಮ್, ಕಳೆದ ವರ್ಷಗಳಲ್ಲಿ ಬೀದರ ವಾಯು ಸೇನಾ ನೆಲೆ ತುಂಬ ಶಕ್ತಿ ಶಾಲಿ ಯಾಗಿ ಬೆಳೆದು ದೇಶದ ಅತಿ ಶ್ರೇಷ್ಠ ತರಬೇತಿ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ, ಕೇಂದ್ರದ ಪ್ರತಿಯೊಬ್ಬರೂ ಕೂಡ ತಮ್ಮ ವೃತ್ತಿ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಸಮೀರ್ ಸೊಂಧೀ ಅವರು ವಾಯು ಸೇನೆಯ ಯುದ್ಧ ವಿಮಾನ ವಿಭಾಗದಲ್ಲಿ 1993ರಲ್ಲಿ ತಮ್ಮ ಸೇವೆ ಆರಂಭಿಸಿದವರು. ಅವರಿಗೆ ಮಿರಾಜ್, ಬೈಸನ್, ಜಾಗವರ್, ಕಿರಣ್ ಮುಂತಾದ ಯುದ್ಧ ವಿಮಾನಗಳಲ್ಲಿ ಸುಮಾರು 3,200 ಗಂಟೆಗಳ ಹೊತ್ತು ಹಾರಾಟ ಮಾಡಿದ ಅನುಭವ ಇದೆ. ಅವರು ಯುದ್ಧ ವಿಮಾನದ ತಂಡವೊಂದ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಾಯು ಸೇನಾ ತರಬೇತಿ ಹಾಗೂ ಶಿಕ್ಷಣ ವಿಭಾಗದಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next