“ಪಂಚತಂತ್ರ’ ಚಿತ್ರದ ಮೂಲಕ ಪಡ್ಡೆ ಹುಡಗರ ಗಮನ ಸೆಳೆದಿರುವ ನಟಿ ಸೋನಾಲ್ ಮಾಂತೆರೋ, ಈಗ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬಿಝಿಯಾಗುತ್ತಿದ್ದಾರೆ. ಈಗಾಗಲೇ “ರಾಬರ್ಟ್’, “ಬನಾರಸ್’ ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿರುವ ಸೋನಾಲ್, ಸದ್ಯ “ಬುದ್ದಿವಂತ-2′, “ನಟ್ವರ್‌ಲಾಲ್’, “ತಲ್ವಾರ್ ಪೇಟೆ’ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಇದರ ನಡುವೆಯೇ ಸೋನಾಲ್, ಸದ್ದಿಲ್ಲದೆ ಮತ್ತೂಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಶುಗರ್ ಫ್ಯಾಕ್ಟರಿ’. ಡಾರ್ಲಿಂಗ್‌ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರ ಇತ್ತೀಚೆಗಷ್ಟೇ ಅನೌನ್ಸ್ ಆಗಿತ್ತು. ಈಗ ಚಿತ್ರತಂಡ ನಾಯಕಿಯ ಹೆಸರನ್ನು ಬಹಿರಂಗಪಡಿಸಿದ್ದು, ಚಿತ್ರದ ನಾಯಕಿಯಾಗಿ ಸೋನಾಲ್ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ತಮ್ಮ ಹೊಸಚಿತ್ರ “ಶುಗರ್ ಫ್ಯಾಕ್ಟರಿ’ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ಸೋನಾಲ್, “ಇಲ್ಲಿಯವರೆಗೆ ನನ್ನ ಸಿನಿ ಕೆರಿಯರ್‌ನಲ್ಲಿ ಮಾಡಿದ ಪಾತ್ರಗಳಿಗಿಂತ ತುಂಬ ಡಿಫರೆಂಟ್ ಆಗಿರುವಂತಕ್ಯಾರೆಕ್ಟರ್ ಈ ಸಿನಿಮಾದಲ್ಲಿ ಸಿಕ್ಕಿದೆ. ಇದರಲ್ಲಿ ನಾನು ಐ.ಟಿ ಪ್ರೊಫೇಷನ್ ಹುಡುಗಿಯಾಗಿ ಕಾಣಿಸಿಕೊಳ್ತಿದ್ದೀನಿ. ತುಂಬ ಬೋಲ್ಡ್ ಆಗಿರುವಂಥ ಕ್ಯಾರೆಕ್ಟರ್. ನೋ ಲವ್, ನೋ ಮ್ಯಾರೇಜ್, ಜಸ್ಟ್ ಎಂಜಾಯ್ ಲೈಫ್ ಅನ್ನೋ ಪಾಲಿಸಿ ಇಟ್ಟುಕೊಂಡಿರುವಂಥ ಹುಡುಗಿ ಪಾತ್ರ ಇದು. ಮೊದಲು ಸಿನಿಮಾದ ಸ್ಕ್ರಿಪ್ಟ್ ನೋಡಿದಾಗಲೇ ಈ ಪಾತ್ರ ತುಂಬ ಇಷ್ಟ ವಾಯ್ತು. ಹಾಗಾಗಿ ಸಿನಿಮಾ ಒಪ್ಪಿಕೊಂಡೆ’ ಎನ್ನುತ್ತಾರೆ. “ಸ್ಕ್ರೀನ್ ಮೇಲೆ ಈ ಪಾತ್ರದಲ್ಲಿ ನನ್ನನ್ನು ನೋಡಿದವರು ಖಂಡಿತವಾಗಿಯೂ ಒಂದುಕ್ಷಣ ಬೆರಗಾಗುತ್ತಾರೆ. ಇದು ಬೇರೆಯ ಥರದ ಮ್ಯಾನರಿಸಂ ಇರುವಂಥಕ್ಯಾರೆಕ್ಟರ್. ಇಂಥಕ್ಯಾರೆಕ್ಟರ್ ಮಾಡೋದಕ್ಕೆ ನಾನು ಎಕ್ಸೈಟ್ ಆಗಿದ್ದೇನೆ’ ಎನ್ನುತ್ತಾರೆ ಸೋನಾಲ್.
ಒಟ್ಟಾರೆ “ನೋ ಲವ್, ನೋ ಮ್ಯಾರೇಜ್, ಜಸ್ಟ್ ಎಂಜಾಯ್ ಲೈಫ್’ ಅನ್ನೋ ಸೋನಾಲ್ ಹೊಸ ಲುಕ್ ಹೇಗಿರಲಿದೆ ಅನ್ನೋದು ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಗೊತ್ತಾಗಲಿದೆ.