Advertisement

ಬನಾರಸ್‌ ಹಾಡಿಗೆ ಸೋನಾಲ್‌ ಹೆಜ್ಜೆ

02:39 PM Sep 16, 2020 | Suhan S |

ಕೋವಿಡ್ ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ, ನಿಧಾನವಾಗಿ ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗುತ್ತಿದ್ದು, ಒಬ್ಬೊಬ್ಬರಾಗಿಯೇ ನಾಯಕ ನಟಿಯರು ಶೂಟಿಂಗ್‌ ಸ್ಪಾಟ್‌ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೋವಿಡ್ ಆತಂಕದಿಂದ ಕಳೆದ ಮಾರ್ಚ್‌ ತಿಂಗಳಿನಿಂದ, ಚಿತ್ರೀಕರಣದಿಂದ ಬ್ರೇಕ್‌ ತೆಗೆದುಕೊಂಡಿದ್ದ ನಟಿ ಸೋನಾಲ್‌ ಮಾಂತೆರೋ ಈಗ ಭರ್ಜರಿಯಾಗಿ ಸ್ಟೆಪ್ಸ್‌ ಹಾಕುವ ಮೂಲಕ ಮತ್ತೆ ಶೂಟಿಂಗ್‌ ಶುರು ಮಾಡಿದ್ದಾರೆ.

Advertisement

ಹೌದು, ಸದ್ಯ ಸೋನಾಲ್‌ ಮಾಂತೆರೋ “ಬನಾರಸ್‌’ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ಸ್ಥಗಿತಗೊಂಡಿದ್ದ ಈ ಚಿತ್ರದ ಚಿತ್ರೀಕರಣ ಈಗ ಮತ್ತೆ ಶುರುವಾಗಿದ್ದು, ಚಿತ್ರದ ನಾಯಕಿ ಸೋನಾಲ್‌ ಕೂಡ ಈಗ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈಗಾಗಲೇ “ಬನಾರಸ್‌’ ಚಿತ್ರದ ಬಹುತೇಕ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಚಿತ್ರತಂಡ ಬಾಕಿಯಿರುವ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಮುಂದಾಗಿದೆ.

ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿರುವ “ಬೆಳಕಿನ ಕವಿತೆ…’ ಎಂಬ ಸಾಲಿನಿಂದ ಶುರುವಾಗುವ ಈ ಹಾಡಿಗೆ ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಒದಗಿಸಿದ್ದು, ಎ. ಹರ್ಷ ನೃತ್ಯ ಸಂಯೋಜಿಸುತ್ತಿದ್ದಾರೆ. ಈ ಚಿತ್ರಕ್ಕೆ ಅದೈತ್‌ ಗುರುಮೂರ್ತಿ ಛಾಯಾಗ್ರಹಣವಿದೆ.

ಇನ್ನು “ಬನಾರಸ್‌’ ಚಿತ್ರದಲ್ಲಿ ಸೋನಲ್‌ ಮೊಂತೆರೋ ಜಾಹಿದ್‌ ಖಾನ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರಿಷಭ್‌ ಶೆಟ್ಟಿ ಅಭಿನಯದ “ಬೆಲ್‌ಬಾಟಂ’ ಚಿತ್ರವನ್ನು ನಿರ್ದೇಶಿಸಿದ್ದ ಜಯತೀರ್ಥ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.­

Advertisement

Udayavani is now on Telegram. Click here to join our channel and stay updated with the latest news.

Next