Advertisement

ತಾಯಿಯೊಂದಿಗೆ ವಿಮಾನಯಾನ ಮಾಡಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮಗ

06:28 PM Jul 25, 2023 | Team Udayavani |

ಕುಷ್ಟಗಿ: ಕುಷ್ಟಗಿ ಪುರಸಭೆ ಸದಸ್ಯ ತಮ್ಮ 42ನೇ ಹುಟ್ಟು ಹಬ್ಬವನ್ನು ಹೆತ್ತ ತಾಯಿಯೊಂದಿಗೆ ವಿಮಾನಯಾನ ಮಾಡುವ ಮೂಲಕ ಆಚರಿಸಿಕೊಂಡರು.

Advertisement

ಪುರಸಭೆ ಸದಸ್ಯ ಕಲ್ಲೇಶ ತಾಳದ್, ತಾಯಿ ನಾಗಮ್ಮ ಅವರೊಂದಿಗೆ ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಹತ್ತಿ ಇಂಡಿಗೋ ವಿಮಾನದಲ್ಲಿ 8.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದರು.

ವಿಮಾನಯಾನದ ಸಂದರ್ಭದಲ್ಲಿ ಗಗನಸಖಿಯರು ಹಾಗೂ ಪ್ರಯಾಣಿಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.  ಹೆತ್ತ ತಾಯಿಯ ವಿಮಾನಯಾನದ ಆಸೆ ಈಡೀರಿಸಿದ ಪುತ್ರನ ಕಾರ್ಯಕ್ಕೆ ಅಲ್ಲಿದ್ದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದರು.

ಇದೇ ವೇಳೆ ಉದಯವಾಣಿಯೊಂದಿಗೆ ಮಾತನಾಡಿದ ಕಲ್ಲೇಶ ತಾಳದ್ ಅವರು,  ನನ್ನ ತಾಯಿ ಬಸ್ ಪ್ರಯಾಣ, ರೈಲ್ವೆ ಪ್ರಯಾಣ, ನೌಕಾಯಾನ ಮಾಡಿದ್ದಾರೆ. ಆದರೆ ವಿಮಾನಯಾನ ಮಾಡಿರಲಿಲ್ಲ. ನನ್ನ ಹುಟ್ಟು ಹಬ್ಬವನ್ನು ಸ್ಮರಣೀಯಗೊಳಿಸಲು ವಿಮಾನಯಾನದಲ್ಲಿ ಹೆತ್ತವ್ವಳೊಂದಿಗೆ ಮಾಡಿರುವುದು ನನ್ನ ಸೌಭಾಗ್ಯವೆನಿಸಿದ್ದು, ವಿಮಾನಯಾನದ ವೇಳೆ ನನ್ನ ತಾಯಿ ಖುಷಿ ಅನುಭವಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next