Advertisement

ಸೋಮನಾಥ ಜಾತ್ರೆಗೆ ಸೌಲಭ್ಯ ಕಲ್ಪಿಸಲು ಸಿದ್ಧ

09:52 AM Jan 04, 2019 | Team Udayavani |

ಕಕ್ಕೇರಾ: ಸೋಮನಾಥ ಜಾತ್ರಾ ಮಹೋತ್ಸವ ಜ. 13ರಿಂದ ಜ. 23ರ ವರೆಗೆ ಜರುಗಲಿದ್ದು, ಜಾತ್ರೆಗೆ ಬೇಕಾಗುವ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ತಹಶೀಲ್ದಾರ್‌ ಸುರೇಶ ಅಂಕಲಗಿ ಹೇಳಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಜಾತ್ರಾ ಮಹೋತ್ಸವ ನಿಮಿತ್ತ ಪೂರ್ವಸಿದ್ಧತಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನೀರಿನ ಸೌಕರ್ಯ ಮತ್ತು ವಿದ್ಯುತ್‌ ವ್ಯವಸ್ಥೆ ಅತೀ ಅಗತ್ಯ ಇದೆ. ಅಲ್ಲದೇ ಸ್ವತ್ಛತೆಗಾಗಿ ಅಲ್ಲಲ್ಲಿ ಬ್ಲಿಚಿಂಗ್‌ ಪೌಡರ ಸಿಂಪರಣೆ ಮಾಡಬೇಕು. ಆರೋಗ್ಯ ಸೇವೆ ಮತ್ತು ದೂಳು ಹರಡದಂತೆ ಟ್ಯಾಂಕರ್‌ ಮೂಲಕ ನೀರು ಸಿಂಪಡಿಸಬೇಕು ಎಂದು ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮನಾಥ ದೇವಾಲಯ ಆವರಣ ಭೂಮಿಯು ದೇವರು ಮತ್ತು ಸೇವೆ ನಿರ್ವಹಿಸುವವರಿಗೆ ಬಳುವಳಿ ಇದೆ. ಇಲ್ಲಿ ಮನೆ ನಿರ್ಮಿಸುವುದು ಅಥವಾ ಮಾರಾಟ ಮಾಡುವುದಾಗಲಿ ನಿಲ್ಲಿಸಬೇಕು. ಹಾಗೇ ಜಾಗವು ಸರ್ವೇ ಮಾಡಿಸಬೇಕು. ಸೋಮನಾಥ ರಥ ಸುರಕ್ಷತೆಗಾಗಿ ಕೋಣೆ ನಿರ್ಮಿಸುವುದಲ್ಲದೆ ಜಾನುವಾರು ಜಾತ್ರೆಯಲ್ಲಿ ಅಪಾರ ಪ್ರಮಾಣದ ಜಾನುವಾರ ಸೇರುವುದರಿಂದ ಉತ್ತಮ ತಳಿಯ ರಾಸುಗಳನ್ನು ಗುರುತಿಸಿ ಎಪಿಎಂಸಿ ವತಿಯಿಂದ ಸೂಕ್ತ ಬಹುಮಾನ ನೀಡುವಂತೆ ಪುರಸಭೆ ಸದಸ್ಯ ಭೀಮನಗೌಡ ಹಳ್ಳಿ ಹಾಗೂ ಸಾರ್ವಜನಿಕರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ, ಪರಮಣ್ಣ ಪೂಜಾರಿ, ಅಯ್ಯಣ್ಣ ಪೂಜಾರಿ, ಎಪಿಎಂಸಿ ಸದಸ್ಯ ಬಸವರಾಜ ಆರೇಶಂಕರ, ಉದ್ಯಮಿ ರಾಮಯ್ಯ ಶೆಟ್ಟಿ, ಸೋಮನಿಂಗಪ್ಪ ದೇಸಾಯಿ, ಗುಂಡಪ್ಪ ಸೊಲ್ಲಾಪುರ, ಪುರಸಭೆ ಸದಸ್ಯರಾದ ಸೋಮಣ್ಣ ನಾಯಕ ಹವಾಲ್ದಾರ, ಆದಯ್ಯ ಗುರಿಕಾರ, ಚಂದ್ರಶೇಖರ ವಜ್ಜಲ್‌, ಮುದ್ದಣ್ಣ ಅಮ್ಮಾಪುರ ಸೇರಿದಂತೆ ವಿವಿಧ ಮುಖಂಡರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next