ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹಗಲು ಹೊತ್ತಿನಲ್ಲಿ ಪ್ರಖರ ಬಿಸಿಲು ಮತ್ತು ಸೆಕೆ ಹಾಗೂ ಸಂಜೆ/ ರಾತ್ರಿ ವೇಳೆ ಮಳೆ ಬರುತ್ತಿದ್ದು, ವಿಚಿತ್ರ ಹವಾಮಾನ ಪರಿಸ್ಥಿತಿ ಇದೆ.
ಬಿಸಿಲಿನ ಪ್ರಖರತೆಯಿಂದಾಗಿ ವಾತಾವರಣದಲ್ಲಿ ಕೆಲವೆಡೆ ಒತ್ತಡ ಸೃಷ್ಟಿಯಾಗಿ ಆ ಪ್ರದೇಶಕ್ಕೆ ವಿವಿಧ ಭಾಗಗಳಿಂದ ಗಾಳಿ ಬೀಸಿದಾಗ ಅಲ್ಲಿ ಮಳೆಯಾಗುತ್ತಿದೆ.
ಕರಾವಳಿಯಾದ್ಯಂತ ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ಒಂದು ವಾರ ಕಾಲ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಾಗಾಗಿ ಮುಂದಿನ ಸುಮಾರು ಒಂದು ವಾರ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಮತ್ತು ಮಲೆ ನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬರಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ; ಬೋಟ್‌ನಲ್ಲಿದ್ದವರ ರಕ್ಷಣೆ
ಸೋಮವಾರ ಮಂಗಳೂರಿನಲ್ಲಿ ಉಷ್ಣಾಂಶ ಕನಿಷ್ಠ 25 ಡಿಗ್ರಿ ಹಾಗೂ ಗರಿಷ್ಠ 34.2 ಡಿಗ್ರಿ ಸೆಲ್ಸಿಯಸ್ ಇತ್ತು. ಕನಿಷ್ಠ ಉಷ್ಣಾಂಶವು ವಾಡಿಕೆಗಿಂತ 1 ಡಿಗ್ರಿ ಸೆ. ಹೆಚ್ಚಳವಾಗಿತ್ತು.