ಶಿಡ್ಲಘಟ್ಟ: ತಾಲೂಕಿನ ಗುಡಿಹಳ್ಳಿಯ ಶ್ರೀಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ತಹಶೀಲ್ದಾರ್ ಬಿ.ಎಸ್.ರಾಜೀವ್ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ನಾಡಿನ ಸುಭಿಕ್ಷೆಗಾಗಿ ಹಾಗೂ ಜನರ ಕಷ್ಟಗಳ ನಿವಾರಣೆಗೆ ದೇವತಾ ಆರಾಧನೆ ಮಹೋತ್ಸವಗಳನ್ನು ಶತಮಾನಗಳ ಹಿಂದಿನಿಂದಲೂ ಆಚರಣೆಯಲ್ಲಿವೆ ಎಂದರು.
ತಾಲೂಕಿನಲ್ಲೇ ಪ್ರಥಮವಾಗಿ ಗುಡಿಹಳ್ಳಿ ಕೆರೆಗೆ ಶುದ್ಧೀಕರಣಗೊಂಡ ನೀರು ಹರಿಯಲಾರಂಭವಾಗಿದೆ. ಈಗಾಗಲೇ ಅರ್ಧ ಕೆರೆ ತುಂಬಿದ್ದು ಒಂದೆರೆಡು ತಿಂಗಳಲ್ಲಿ ಕೆರೆ ಭರ್ತಿ ಯಾಗಿ ನಗರದ ಅಮ್ಮನ ಕೆರೆಗೆ ನೀರು ಹರಿಯಲಿದೆಎಂದರು. ರೈತ ಸಂಘ ಹಾಗೂ ಹಸಿರುಸೇನೆ(ಕೋಡಿಹಳ್ಳಿಚಂದ್ರಶೇಖರ್ ಬಣ) ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ರೈತ ಸಂಘ ಸತತ ಹೋರಾಟ ನಡೆಸಿದ ಪರಿಣಾಮವಾಗಿ ತಾಲೂಕಿನ ಕೆರೆಗಳಿಗೆ ನೀರು ಹರಿಯಲು ಆರಂಭಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳೊಂದಿಗೆ ನಡೆಸಿದಸಮಾಲೋಚನೆ ಪರಿಣಾಮ ಇದೀಗ ತಾಲೂಕಿಗೆಬೆಂಗಳೂರಿನ ವೃಷಭಾವತಿ ಕಣಿವೆ ನೀರು ಹರಿಸಲು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆಂದರು. ಈ ವೇಳೆ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಪ್ರಶಾಂತ್, ಮುಖಂಡರಾದ ಚನ್ನಕೃಷ್ಣಪ್ಪ, ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ಅಧ್ಯಕ್ಷ ಮುನಿವೆಂಕಟಸ್ವಾಮಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುಡಿಹಳ್ಳಿ ಚಂದ್ರನಾಥ್, ಬಚ್ಚರಾಯಪ್ಪ, ರೈತ ಸಂಘದ ಕೆಂಪಣ್ಣ, ರಾಮಕೃಷ್ಣಪ್ಪ, ಜಿ.ಎನ್.ನಾರಾಯಣಪ್ಪ, ಮಂಜುನಾಥ್, ಕೆಪಿಸಿಸಿ ಮಾಜಿ ಸದಸ್ಯನಾರಾಯಣಸ್ವಾಮಿ(ಬಂಗಾರಪ್ಪ), ಸುನೀಲ್, ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ(ಪುಟ್ಟು), ಕೋಲಾರ ರಮೇಶ್ ಮತ್ತಿತರರಿದ್ದರು.