ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕೆಲ ಪ್ರವಾಸಿಗರ ಮಿತಿಮೀರಿದ ವರ್ತನೆಯಿಂದ ವಾಹನ ಸವಾರರು ಪರದಾಟ ಪಡುವಂತಾಯಿತು.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ಜಲಪಾತಗಳ ಮುಂದೆ ವಾಹನಗಳನ್ನು ನಿಲ್ಲಿಸಿಕೊಂಡು, ಜೋರಾಗಿ ಹಾಡು ಹಾಕುತ್ತಾ ಕೆಲ ಯುವಕರು ನೃತ್ಯವಾಡುತ್ತಿದ್ದರು. ಮಳೆಯನ್ನು ಲೆಕ್ಕಿಸದೇ ರಸ್ತೆ ಮಧ್ಯೆ, ಅಂಗಿ ಬಿಚ್ಚಿ ಕೆಲವು ಯುವಕರು ಡ್ಯಾನ್ಸ್ ಮಾಡುತ್ತಿದ್ದರು. ಯುವಕರ ಈ ಹುಚ್ಚಾಟದಿಂದ ಇತರೆ ಪ್ರವಾಸಿಗರೂ ಕಿರಿಕಿರಿ ಅನುಭವಿಸುವಂತಾಯಿತು.
ಇದನ್ನೂ ಓದಿ:ವಿಡಿಯೋ: ಗಾಯಗೊಂಡ ಆಟಗಾರನನ್ನು ಔಟ್ ಮಾಡದೆ ಕ್ರೀಡಾ ಸ್ಪೂರ್ತಿ ಮೆರೆದ ಜೋ ರೂಟ್ ಪಡೆ
ಈ ಯುವಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಮೋಜು ಮಸ್ತಿ ಮಾಡುತ್ತಿದ್ದರು. ಮೂಡಿಗೆರೆಯಿಂದ ಮಂಗಳೂರಿಗೆ ತೆರಳುವ ವಾಹನ ಸವಾರರು ಇವರಿಂದಾಗಿ ಪರದಾಟ ಪಡುವಂತಾಯಿತು.
ಅಪಾಯಕಾರಿ ಸೆಲ್ಫಿ: ಬಂಡೆಯ ಮೇಲೆ ಹತ್ತಿ ಪ್ರವಾಸಿಗರು ಸೆಲ್ಫಿ ಕ್ಲಿಕಿಸುವಲ್ಲಿ ನಿರತರಾಗಿದ್ದರು. ಇವರು ಅಪಾಯಕಾರಿ ಸ್ಥಳಗಳಾಗಿದ್ದರೂ, ಕೆಲವು ಪ್ರವಾಸಿಗರು ಅದನ್ನು ಲೆಕ್ಕಿಸದೆ ಸೆಲ್ಫಿ, ಫೋಟೋ ಪಡೆಯುತ್ತಿದ್ದರು.