Advertisement
ಕಳೆದ ವಿತ್ತ ವರ್ಷದ ಲೆಕ್ಕಾಚಾರ ಮುಗಿಸಿ ಸುಸ್ತಾಗಿ ಉಸ್ಸಪ್ಪ ಅಂತ ಕುಳಿತರೆ ಈ ವಿತ್ತ ವರ್ಷದ ಕರ ಉಳಿತಾಯಕ್ಕೆ ಹೂಡಿಕೆಯ ವಿವರ ಈ ಕೂಡಲೇ ಕೊಡಿ ಅಂತ ನಿಮ್ಮ ಅಕೌಂಟ್ಸ್ ಸೆಕ್ಷನ್ನಿನಿಂದ ಒಂದು ಸಕ್ಯುìಲರ್ ಬಂದಿರುತ್ತದೆ. ಇದೆಂತದಪ್ಪಾ ಪೀಡೆ ಅಂತ ಅದನ್ನು ಕಡೆಗಣಿಸುವಂತಿಲ್ಲ. ಅಕೌಂಟ್ಸ್ ಸೆಕ್ಷನ್ನಿನ ಮೇಡಮ್ಮುಗಳು ಎಷ್ಟೇ ಸ್ವೀಟಾಗಿ ಮಾತನಾಡಿದರೂ ಟಿಡಿಎಸ್ ವಿಷಯ ಬರುವಾಗ ಅಷ್ಟೇ ನಿರ್ದಾಕ್ಷಿಣ್ಯವಾಗಿ ಕತ್ತರಿ ಹಾಕುವುದು ನಮಗೆಲ್ಲರಿಗೂ ಅನುಭವ ಕಲಿಸಿದ ಪಾಠ. ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ನೀವು ಒತ್ತಾಯಪೂರ್ವಕ ಕರಾಸಕ್ತರಾಗಿ ಈ ವರ್ಷ ಏನಪ್ಪಾ ಉಳಿತಾಯ ಮಾಡುವುದು ಎಂದು ತಲೆ ಕೆರೆಯುತ್ತೀರಿ. ಮೊತ್ತ ಮೊದಲಾಗಿ ಈ ವರ್ಷಕ್ಕೆ ಅನ್ವಯವಾಗುವ ಬಜೆಟ್ 2018ರ ಕರ ಕಾನೂನು ಯಾವುದು ಎನ್ನುವುದನ್ನು ಮನನ ಮಾಡೋಣ. ಆಮೇಲೆ ಮುಂದುವರಿಯುತ್ತಾ ಅವನ್ನು ಯಾವ ರೀತಿಯಲ್ಲಿ ನಮ್ಮ ಲಾಭಕ್ಕೋಸ್ಕರ ಈ ವಿತ್ತ ವರ್ಷ 2018-19ರಲ್ಲಿ ಬಳಸಿಕೊಳ್ಳುವುದು ಎಂಬುದನ್ನು ನೋಡೋಣ:
ಸಂಬಳ ಪಡೆಯುವ ಉದ್ಯೋಗಿಗಳಿಗೆ ಹಾಗೂ ಪೆನ್ಶನ್ ಪಡೆಯುವ ನಿವೃತ್ತರು ಇನ್ನು ಮುಂದೆ ತಮ್ಮ ಸಂಬಳ/ಪೆನ್ಶನ್ ಮೊತ್ತದಿಂದ ನೇರವಾಗಿ ರೂ. 40,000ವನ್ನು ಸ್ಟಾಂಡರ್ಡ್ ಡಿಡಕ್ಷನ್ ಹೆಸರಿನಲ್ಲಿ ಕಳೆಯಬಹುದಾಗಿದೆ. ಆದರೆ ಈ ಬದಲಾವಣೆಯು ಮೇಲ್ನೋಟಕ್ಕೆ ಕಂಡಷ್ಟು ಆಕರ್ಷಕವಲ್ಲ.ಏಕೆಂದರೆ ಇದರೊಂದಿಗೆ ಈ ಮೊದಲು ಉದ್ಯೋಗಿಗಳಿಗೆ ಪ್ರಯಾಣ ವೆಚ್ಚದ ಮೇಲೆ ಸಿಗುತ್ತಿದ್ದ ವಾರ್ಷಿಕ ರೂ. 19200 ಹಾಗೂ ಬಿಲ್ ತೋರಿಸಿ ವೈದ್ಯಕೀಯ ವೆಚ್ಚಕ್ಕೆ ಸಿಗುತ್ತಿದ್ದ ವಾರ್ಷಿಕ ರೂ. 15000 (ಒಟ್ಟು 34,200ರ ವಿನಾಯಿತಿ) ಇನ್ನು ಮುಂದೆ ಇಲ್ಲವಾಗುತ್ತದೆ. ಅಂದರೆ ಈ ಮೊದಲು ರೂ. 34,200ರ ರಿಯಾಯಿತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದವರಿಗೆ ಈಗಿನ ಒಟ್ಟಾರೆ ವಿನಾಯಿತಿ ರೂ. 5,800ಮಾತ್ರ! (40000-34200). ಅಂತಿಮ ಲಾಭವು ಈ ಮೊತ್ತದ ಮೇಲೆ ಅವರು ಸ್ಲಾಬ್ ಅನುಸಾರ ಕಟ್ಟಬೇಕಾದ ತೆರಿಗೆಯ ಮೊತ್ತದಷ್ಟು ಮಾತ್ರ ಅಂದರೆ ರೂ. 5,800ರ ಶೇ.5, ಶೇ.20 ಯಾ ಶೇ. 30 ಮಾತ್ರ. ಆದರೆ ಹಲವಾರು ಸಂಸ್ಥೆಗಳಲ್ಲಿ ಪ್ರಯಾಣ ಭತ್ತೆ ಮತ್ತು ವೈದ್ಯಕೀಯ ಭತ್ತೆ ನೀಡುತ್ತಿರಲಿಲ್ಲ. ಅಲ್ಲದೆ ಹಲವಾರು ಜನರಿಗೆ ವೈದ್ಯಕೀಯದ ಖರ್ಚು ಬರುತ್ತಲೇ ಇರಲಿಲ್ಲ ಅಥವಾ ಭಾಗಶಃ ಬರುತ್ತಿತ್ತು. ಇನ್ನು ಮುಂದೆ ಎಲ್ಲಾ ಸಂದರ್ಭಗಳಲ್ಲಿಯೂ ಎಲ್ಲಾ
ಉದ್ಯೋಗಿಗಳಿಗೂ ಪರ್ಯಾಯವಾಗಿ ಈ ರೂ. 40,000ದ ಲಾಭ ಸಿಕ್ಕಿಯೇ ಸಿಗುತ್ತದೆ. ಅಂಥವರಿಗೆ ಇದು ಸಂತಸದ ವಿಷಯವೇ ಸರಿ. ಪೆನ್ಶನ್ ಪಡೆಯುವವರಿಗೂ ಇದು ಲಾಭಕರ.
Related Articles
ಈ ಬಾರಿ ಆದಾಯ ತೆರಿಗೆಯ ಸ್ಲಾಬ್ ಮತ್ತು ದರಗಳಲ್ಲಿ ಯಾವುದೇ ವ್ಯತ್ಯಾಸ ಮಾಡದಿದ್ದರೂ ಎಲ್ಲರಿಗೂ ಅನ್ವಯ ಆಗುವಂತೆ ಶೈಕ್ಷಣಿಕ ಸೆಸ್‌ನಲ್ಲಿ ಶೇ.1ಹೆಚ್ಚಳ ಮಾಡಿದ್ದಾರೆ. ಈವರೆಗೆ ಶೇ.3 ಇದ್ದ ಎಜುಕೇಶನ್ ಸೆಸ್ ಇನ್ನು ಮುಂದೆ ಶೇ.4 ಆಗಲಿದೆ. ಸೆಸ್ ಅಂದರೆ ತೆರಿಗೆಯ ಮೇಲೆ ಕಟ್ಟುವ ತೆರಿಗೆ. ತೆರಿಗೆ ಮೊತ್ತದ ಮೇಲೆ ಹೆಚ್ಚುವರಿ ಶೇ.4 ಸೆಸ್ ಸೇರಿಸಿ ಒಟ್ಟು ತೆರಿಗೆ ಕಟ್ಟಬೇಕು. (ತೆರಿಗೆ ರೂ. 100 ಇದ್ದರೆ ಸೆಸ್ ಸೇರಿಸಿ ರೂ. 104 ಕಟ್ಟಬೇಕು. ಶೂನ್ಯ ತೆರಿಗೆಯವರಿಗೆ ಸೆಸ್ ಬರುವುದಿಲ್ಲ) ಆದಾಯ ಜಾಸ್ತಿ ಆದಂತೆಲ್ಲಾ ಈ ಸೆಸ್ ಮೊತ್ತ ಮೇಲೆ ಹೇಳಿದ ಸ್ಟಾಂಡರ್ಡ್ ಡಿಡಕ್ಷನ್ ಲಾಭವನ್ನು ಕಮ್ಮಿ ಮಾಡುತ್ತಾ ಹೋಗುತ್ತದೆ.
Advertisement
3.ಶೇರುಗಳ ಮೇಲಿನ ಶೇ.10 ತೆರಿಗೆ ಶೇರು ಮತ್ತು ಶೇರು ಪ್ರಾಧಾನ್ಯ ಮ್ಯೂಚುವಲ್ ಫಂಡುಗಳು (ಕನಿಷ್ಠ ಶೇ.65 ಶೇರುಗಳಲ್ಲಿ ಹೂಡಿಕೆಯುಳ್ಳವು) STT (Securities Transaction Tax) ತೆತ್ತು ಮಾರಾಟವಾದಲ್ಲಿ ಅಲ್ಪಕಾಲಾವಧಿಗೆ ಲಾಭಾಂಶದ ಮೇಲೆ ಶೇ.15ಹಾಗೂ ದೀರ್ಘ ಕಾಲಾವಧಿಗೆ ಶೂನ್ಯ ತೆರಿಗೆ ಈ ವರೆಗೆ ಇತ್ತು. ಹೂಡಿಕೆ ಮಾಡಿದ ದಿನದಿಂದ ಮಾರಾಟದ ದಿನದವರೆಗೆ 1 ವರ್ಷ ಅವಧಿಯು ಅಲ್ಪ ಹಾಗೂ 1 ವರ್ಷ ಮೀರಿದ ಅವಧಿಯು ದೀರ್ಘ ಕಾಲಾವಧಿ ಎಂದು ಪರಿಗಣಿಸಲಾಗುತ್ತದೆ. ಈ ಬಜೆಟ್ಟಿನಲ್ಲಿ 1 ವರ್ಷ ಮೀರಿದ ದೀರ್ಘ ಕಾಲಾವಧಿಯ ಹೂಡಿಕೆಯಲ್ಲಿ ಉಂಟಾದ ಲಾಭಾಂಶದ ಮೇಲೆ ವಾರ್ಷಿಕ ರೂ. 1ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಅದನ್ನು ಮೀರಿದ ಲಾಭಾಂಶದ ಮೇಲೆ ಶೇ.10 ತೆರಿಗೆ ಇದೆ. ಈ ಶೇ.10 ತೆರಿಗೆಯ ಲೆಕ್ಕಾಚಾರದಲ್ಲಿ ಯಾವುದೇ indexation benefit ನೀಡಲಾಗುವುದಿಲ್ಲ ಹಾಗೂ STT ಸಹಿತ ಇನ್ನಾವುದೇ ವ್ಯಾವಹಾರಿಕಾ ವೆಚ್ಚ ಅಥವಾ ಅಭಿವೃದ್ಧಿ ವೆಚ್ಚಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಅಷ್ಟೇ ಅಲ್ಲದೆ, ಶೇರು ಪ್ರಾಧಾನ್ಯ ಮ್ಯೂಚುವಲ್ ಫಂಡುಗಳು ನೀಡುವ ಡಿವಿಡೆಂಡುಗಳ ಮೇಲೆ ಯಾವುದೇ DDT (Dividend Distribution Tax) ) ಇರಲಿಲ್ಲ. ಈ ಮುಂದೆ ಶೇ.10% DDT ಮೂಲದಲ್ಲಿಯೇ ಕಡಿತವಾಗಿ ಉಳಿದ ಡಿವಿಡೆಂಡ್ ಮಾತ್ರ ನಿಮ್ಮ ಕೈಸೇರಲಿದೆ. ಶೇರುಗಲಿಗಳು ಇದನ್ನು ಮನದಲ್ಲಿ ಇಟ್ಟುಕೊಳ್ಳಬೇಕು.
ಈ ಹೊಸ ಶೇ.10 ತೆರಿಗೆ ಏಪ್ರಿಲ್ 1, 2018ರ ನಂತರ ಮಾರಾಟವಾದ ಶೇರು/ಶೇರು ಪ್ರಾಧಾನ್ಯ ಮ್ಯೂಚುವಲ್ ಫಂಡುಗಳಿಗೆ ಮಾತ್ರ ಅನ್ವಯ. ಎರಡನೆಯದಾಗಿ, ಲಾಭಾಂಶ ನಿರ್ಣಯಕ್ಕೆ ಜನವರಿ 31, 2018ರ ಮಾರುಕಟ್ಟೆ ಬೆಲೆ ಅಥವಾ ಮೂಲ ಹೂಡಿಕಾ ಬೆಲೆ-ಎರಡರಲ್ಲಿ ಯಾವುದು ಜಾಸ್ತಿಯೋ ಅದನ್ನು ಹೂಡಿಕೆ ಎಂದು ಪರಿಗಣಿಸಲಾಗುವುದು. ಈ ಜನವರಿ 31ರ ಪ್ರಮೇಯ ಲಾಭಾಂಶ ನಿರ್ಣಯಕ್ಕೆ ಮಾತ್ರ. ಒಂದು ವರ್ಷದ ಹೂಡಿಕಾ ಅವಧಿಯ ನಿರ್ಣಯಕ್ಕೆ ನಿಜವಾದ ಹೂಡಿಕೆ ಮತ್ತು ಮಾರಾಟದ ತಾರೀಕುಗಳನ್ನೇ ತೆಗೆದುಕೊಳ್ಳಬೇಕು. 4. ಕರಮುಕ್ತ NPS ಹಿಂಪಡೆತ
ಈವರೆಗೆ ಎನ್.ಪಿ.ಎಸ್. ಖಾತೆಯಿಂದ ಅಂತಿಮವಾಗಿ ಹಿಂಪಡೆಯುವ ಶೇ.40 ಮೊತ್ತದ ಮೇಲೆ ನೀಡಲಾಗಿದ್ದ ಕರ ವಿನಾಯಿತಿಯು ಕೇವಲ ನೌಕರ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಇನ್ನು ಮುಂದೆ ಈ ಕರ ವಿನಾಯಿತಿಯು ಎಲ್ಲಾ ಸಾರ್ವಜನಿಕರಿಗೂ ಅನ್ವಯವಾಗುತ್ತದೆ. ಇದೊಂದು ಉತ್ತಮ ಹೆಜ್ಜೆ.
5.54EC ಬಾಂಡುಗಳ ಅವಧಿ ಮತ್ತು ಲಕ್ಷ್ಯ
ಒಂದು ಕ್ಯಾಪಿಟಲ್ ಅಸೆಟ್ ಅನ್ನು ಮಾರಿದಾಗ ಬರುವ ಕ್ಯಾಪಿಟಲ್ ಗೈನ್ಸ್ ಲಾಭಾಂಶವನ್ನು ಮಾರಿದ ದಿನಾಂಕದಿಂದ 6 ತಿಂಗಳ ಒಳಗಾಗಿ NHAI ಅಥವಾ REC ಬಾಂಡುಗಳಲ್ಲಿ 3 ವರ್ಷಗಳ ಅವಧಿಗೆ ಹೂಡಿದರೆ ಅಂತಹ ಲಾಭದ ಮೇಲೆ ಕ್ಯಾಪಿಟಲ್ ಗೈನ್ಸ್ ಕರ ವಿನಾಯಿತಿ ಸಿಗುವುದು ಎಲ್ಲರಿಗೂ ಗೊತ್ತಿರುವ ಅಂಶ. ಆದರೆ ಈಗ ಅಂದರೆ 1 ಏಪ್ರಿಲ್ 2018ರ ನಂತರ ಆ ಬಾಂಡುಗಳ ಹೂಡಿಕಾ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಏರಿಸಲಾಗಿದೆ ಹಾಗೂ ಈ ಸೌಲಭ್ಯವನ್ನು ಭೂಮಿ ಮತ್ತು ಕಟ್ಟಡದ ಮಾರಾಟಕ್ಕೆ ಮಾತ್ರವೇ ಸೀಮಿತಪಡಿಸಲಾಗಿದೆ. ಚಿನ್ನ ಶೇರು ಇತ್ಯಾದಿ ಕಾಪಿಟಲ್ ಆಸ್ತಿಗಳಿಗೆ ಇರುವುದಿಲ್ಲ. 6. ಹಿರಿಯ ನಾಗರಿಕರಿಗೆ
ಹಿರಿಯ ನಾಗರಿಕರಿಗೆ ಈ ಬಜೆಟ್ಟಿನಲ್ಲಿ ಸಾಕಷ್ಟು ರಿಯಾಯಿತಿ ನೀಡಲಾಗಿದೆ. ಇಡೀ ಬಜೆಟ್ಟಿನ ನಾಲ್ಕು ಪ್ರಮುಖ ನಿಗಾ ಕ್ಷೇತ್ರಗಳಲ್ಲಿ ಹಿರಿಯ ನಾಗರಿಕರ ರಿಯಾಯಿತಿಯೂ ಒಂದು. ಮೆಡಿಕಲ್ ಇನ್ಶೂರೆನ್ಸ್ (ಸೆಕ್ಷನ್ 80D)
ಇದು ಆರೋಗ್ಯ ವಿಮೆಗೆ ನೀಡುವ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. 60 ದಾಟಿದ ಹಿರಿಯ ನಾಗರಿಕರಿಗೆ ಈ ಮಿತಿ ರೂ. 30,000 ಆಗಿದೆ. ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000ದ ಒಳಮಿತಿಯನ್ನು ಇದು ಹೊಂದಿರುತ್ತದೆ. (80 ವರ್ಷ ದಾಟಿದ ಅತಿ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಈ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು). ಈ ಬಜೆಟ್ಟಿನಲ್ಲಿ ಹಿರಿಯ ನಾಗರಿಕರ ಮಿತಿಯನ್ನು ವಾರ್ಷಿಕ ರೂ. 30,000 ದಿಂದ ರೂ. 50,000ಕ್ಕೆ ಏರಿಸಲಾಗಿದೆ. ಕಟ್ಟಿದ ಪ್ರೀಮಿಯಂ ಒಂದಕ್ಕಿಂತ ಜಾಸ್ತಿ ವರ್ಷಗಳಿಗೆ ಅನ್ವಯಿಸುವುದಿದ್ದಲ್ಲಿ ಪ್ರತಿ ವರ್ಷಕ್ಕೆ ಪ್ರೊರೇಟಾ ಪ್ರಕಾರ ಮಾತ್ರವೇ ಈ ಸೌಲಭ್ಯ ದೊರಕುತ್ತದೆ. ಗಂಭೀರ ಖಾಯಿಲೆಗಳ ಚಿಕಿತ್ಸೆ (ಸೆಕ್ಷನ್ 80DDB)
ಸ್ವಂತ ಹಾಗೂ ಅವಲಂಭಿತರ ಕ್ಯಾನ್ಸರ್, ನ್ಯುರೋ, ಏಡ್ಸ್, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸ ಬಹುದು. 60 ದಾಟದ ಜನರಿಗೆ ಇದರ ಮೇಲಿನ ಮಿತಿ ರೂ. 40,000. ಆದರೆ 60 ದಾಟಿದ ವರಿಷ್ಠರಿಗೆ ಈ ಮಿತಿ ರೂ. 60,000 ಹಾಗೂ 80 ದಾಟಿದ ಅತಿ ವರಿಷ್ಠರಿಗೆ ಇದು ರೂ. 80,000. ಸದ್ರಿ ಬಜೆಟ್ಟಿನಲ್ಲಿ 60 ದಾಟಿದ ಎಲ್ಲಾ ನಾಗರಿಕರಿಗೆ ಈ ಮಿತಿಯನ್ನು ರೂ. 1,00,000 ಲಕ್ಷಕ್ಕೆ ಏರಿಸಲಾಗಿದೆ. ಎಫ್ಡಿ/ಆರ್‌ಡಿ ಬಡ್ಡಿಗೆ ಕರವಿನಾಯಿತಿ
ಹಲವು ವರ್ಷಗಳಿಂದ ನಿವೃತ್ತ ಹಿರಿಯ ನಾಗರಿಕರ ಬೇಡಿಕೆ ಇದಾಗಿತ್ತು. ಇಳಿ ವಯಸ್ಸಿನಲ್ಲಿ ಹೆಚ್ಚಿನವರು ಹೂಡಿಕೆಗೆ ಎಫ್ಡಿಗಳನ್ನು ಮಾತ್ರವೇ ನಂಬಿರುತ್ತಾರೆ, ಹೆಚ್ಚು ರಿಸ್ಕ್ ತೆಗೆದುಕೊಳ್ಳಲಿಕ್ಕೆ ಹೋಗುವುದಿಲ್ಲ. ಆದರೆ ಎಫ್ಡಿ ಮೇಲಿನ ಬಡ್ಡಿಯ ಪ್ರತಿ ಪೈಸೆಯೂ ಕರಾರ್ಹವಾಗಿತ್ತು – ಯಾವುದೇ ರಿಯಾಯಿತಿ ಇಲ್ಲದೆ. ಸೆಕ್ಷನ್ 80ಖಖಅಅನುಸಾರ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸಿº ಖಾತೆಯಲ್ಲಿ ಬರುವ ಬಡ್ಡಿಗೆ ರೂ. 10,000ದ ವರೆಗೆ ಬಡ್ಡಿಯ ಮೊತ್ತದಲ್ಲಿ ಕರ ವಿನಾಯಿತಿ ಇದೆ. ಆದರೆ ಈ ಬಜೆಟ್ಟಿನಲಿ ಕೇವಲ ಹಿರಿಯ ನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್ 80ಖಖಆ ಅನುಸಾರ ರೂ. 50,000ದವರೆಗೆ ಬ್ಯಾಂಕ್ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. ಹಿರಿಯ ನಾಗರಿಕರಿಗೆ ಇನ್ನು ಮುಂದೆ 80ಖಖಅಅನ್ವಯವಾಗುವುದಿಲ್ಲ. ಈ ರೂ.50,000ದಲ್ಲಿ ಎಸ್‌ಬಿ ಬಡ್ಡಿಯ ಜೊತೆಗೆ ಎಫ್ಡಿ ಮತ್ತು ಆರ್‌ಡಿ ಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ. ಅಲ್ಲದೆ ಈ ತರಗತಿಯ ಬಡ್ಡಿ ಆದಾಯದ ಮೇಲೆ ರೂ.50,000ವರೆಗೆ ಟಿಡಿಎಸ್ ಕಡಿತವೂ ಇರುವುದಿಲ್ಲ. ಇದರೊಂದಿಗೆ ಹಿರಿಯ ನಾಗರಿಕರ ಬಹುದಿನದ ಹಂಬಲ ಕೊಂಚ ಮಟ್ಟಿಗಾದರೂ ನಿವಾರಣೆಯಾಯಿತು ಅಂದುಕೊಳ್ಳಬಹುದು. ಪ್ರಧಾನಮಂತ್ರಿ ವಯ ವಂದನ ಯೋಜನಾ (PMVVY)
ಹಿರಿಯ ನಾಗರಿಕರಿಗಾಗಿ ಹಿಂದೊಮ್ಮೆ ವರಿಷ್ಠಾ ಪೆನ್ಶನ್ ಯೋಜನಾ ಎಂಬ ಹೆಸರಿನಲ್ಲಿ ಜನ್ಮವೆತ್ತಿದ ಈ ಯೋಜನೆಗೆ ಕಳೆದ ವರ್ಷ “ಪ್ರಧಾನಮಂತ್ರಿ ವಯ ವಂದನ ಯೋಜನಾ’ ಎಂಬ ಹೊಸ ಹೆಸರಿನಲ್ಲಿ ಪುನರ್ಜನ್ಮ ನೀಡಿದ ಸರಕಾರ ಇದೀಗ ಆ ಯೋಜನೆಯನ್ನು 2020 ಇಸವಿಯವರೆಗೆ ಜಾರಿಯಲ್ಲಿಡುತ್ತಿದೆ. ಶೇ.8 ಬಡ್ಡಿ ನೀಡುವ ಈ ಯೋಜನೆಯು ಎಲ್ಲೆ„ಸಿಯ ಮೂಲಕ ಬಿಕರಿಯಾಗುತ್ತಿದೆ. ಈವರೆಗೆ ಇದ್ದ ತಲಾ ರೂ. 7.5 ಲಕ್ಷದ ಹೂಡಿಕಾ ಮಿತಿಯನ್ನು ತಲಾ ರೂ. 15 ಲಕ್ಷಕ್ಕೆ ಏರಿಸಲಾಗಿದೆ. 60 ದಾಟಿದ ಎಲ್ಲಾ ಹಿರಿಯ ನಾಗರಿಕರು ಈ ಯೋಜನೆಯ ಫಾಯಿದಾ ತೆಗೆದುಕೊಳ್ಳಬಹುದು.