Advertisement

ಆಹಾರ ಶೈಲಿಯೇ ಆರೋಗ್ಯ ಸಮಸ್ಯೆಗೆ ಕಾರಣ…ಹೊಟ್ಟೆ ಸಮಸ್ಯೆಗೆ ಇಲ್ಲಿದೆ ಪರಿಹಾರ

03:50 PM Oct 28, 2022 | Team Udayavani |

ಹೊಟ್ಟೆ ಭಾರ, ಹಸಿವಾಗದೇ ಇರುವುದು, ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿಕೊಳ್ಳುವುದು…ಇದು ಹಲವರನ್ನು ಕಾಡುವ ಸಮಸ್ಯೆ. ನಮ್ಮ ಆಹಾರಶೈಲಿಯೇ ಈ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣ. ಹಾಗೆಯೇ, ಅಡುಗೆಮನೆಯಲ್ಲಿ ಸಿಗುವ ಕೆಲವು ಆಹಾರ ಪದಾರ್ಥಗಳಿಂದಲೇ ಈ ಸಮಸ್ಯೆಗಳನ್ನು ತಕ್ಕಮಟ್ಟಿಗೆ ಬಗೆಹರಿಸಿಕೊಳ್ಳಬಹುದು.

Advertisement

-ಶುಂಠಿ
ಹೊಟ್ಟೆಯಲ್ಲಿ ವಾಯು ಉತ್ಪಾದನೆಯನ್ನು ತಡೆಯುವ ಕಿಣ್ವ (ಎನ್‌ಝೈಮ್‌)ಗಳನ್ನು ಶುಂಠಿಯು ಉತ್ಪಾದಿಸುತ್ತದೆ. ಕುದಿಯುವ ನೀರಿಗೆ ಶುಂಠಿಯನ್ನು ಜಜ್ಜಿ ಹಾಕಿ, ಸ್ವಲ್ಪ ಲಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ ಪ್ರತಿನಿತ್ಯ ಕುಡಿದರೆ ಗ್ಯಾಸ್‌ ಸಮಸ್ಯೆ ನಿವಾರಣೆಯಾಗುತ್ತದೆ.

-ಓಂ ಕಾಳು (ಅಜ್ವೆ„ನ್‌)
ಓಂ ಕಾಳನ್ನು ಸೇವಿಸುವುದರಿಂದ, ಸರಾಗ ಜೀರ್ಣಕ್ರಿಯೆಗೆ ಸಹಕರಿಸುವ ಕಿಣ್ವಗಳ ಉತ್ಪತ್ತಿ ಹೆಚ್ಚುತ್ತದೆ. ಅರ್ಧ ಚಮಚ ಓಮದ ಕಾಳನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ.

– ಪುದೀನಾ
ಪುದೀನಾ ಸೊಪ್ಪನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ, ಅಡುಗೆಯಲ್ಲಿ ಬಳಸುವುದರಿಂದ ಹೊಟ್ಟೆಯ ಬಹುತೇಕ ಸಮಸ್ಯೆಗಳು ದೂರಾಗುತ್ತವೆ.

-ಮಜ್ಜಿಗೆ
“ಹುಚ್ಚಿಯಾದರೂ ತಾಯಿ, ನೀರಾದರೂ ಮಜ್ಜಿಗೆ’ ಅಂತ ಗಾದೆಯೇ ಇದೆ. ಅಂದರೆ, ಮಜ್ಜಿಗೆ ಎಷ್ಟೇ ನೀರಾಗಿದ್ದರೂ ಅದರಲ್ಲಿ ಬಹಳಷ್ಟು ಸತ್ವಗಳು ಅಡಗಿವೆ. ಆಹಾರದ ಮೂಲಕ ದೇಹದ ಒಳಗೆ ಕಲ್ಮಶ/ ವಿಷ ಸೇರಿದ್ದರೆ ಮಜ್ಜಿಗೆ ಕುಡಿದರೆ ಸರಿ ಹೋಗುತ್ತದೆ ಎನ್ನುತ್ತಾರೆ. ಅದಕ್ಕಾಗಿಯೇ, ಊಟದ ಕೊನೆಯಲ್ಲಿ ಮಜ್ಜಿಗೆ ಸೇವಿಸುವುದನ್ನು ಹಿಂದಿನವರು ರೂಢಿಸಿಕೊಂಡಿದ್ದರು. ಮಜ್ಜಿಗೆಗೆ ಚಿಟಿಕೆ ಇಂಗು ಸೇರಿಸಿ ಕುಡಿದರೆ, ಹೊಟ್ಟೆಯ ಗ್ಯಾಸ್‌ ಸಮಸ್ಯೆ ದೂರಾಗುತ್ತದೆ.

Advertisement

-ಜೀರಿಗೆ
ಹೊಟ್ಟೆಯುಬ್ಬರ, ಗ್ಯಾಸ್‌, ಹಸಿವಾಗದಿರುವುದು, ಅಜೀರ್ಣ ಸಮಸ್ಯೆಗಳಿಗೆ ಜೀರಿಗೆ ರಾಮಬಾಣ. ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲ ಉತ್ಪಾದನೆಯಾಗದಂತೆ ತಡೆದು ಆ್ಯಸಿಡಿಟಿಯನ್ನು ತಗ್ಗಿಸುತ್ತದೆ. ಪ್ರತಿನಿತ್ಯ ಅಥವಾ ಹೊಟ್ಟೆಯ ಸಮಸ್ಯೆ ಎದುರಾದಾಗ ಜೀರಿಗೆಯನ್ನು ನೀರಿನಲ್ಲಿ ಕುದಿಸಿ, ತಣ್ಣಗಾಗಿಸಿ ಕುಡಿಯಿರಿ.

-ಯೋಗರ್ಟ್‌ / ಮೊಸರು
ಅಂಗಡಿಗಳಲ್ಲಿ ಸಿಗುವ ಯೋಗರ್ಟ್‌ ಅನ್ನು (ಮೊಸರು ಕೂಡಾ ಒಳ್ಳೆಯದು) ಸೇವಿಸುವುದರಿಂದ ಅಥವಾ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಅಜೀರ್ಣದ ಸಮಸ್ಯೆಯನ್ನು ತಡೆಗಟ್ಟಬಹುದು.

-ಪಪ್ಪಾಯ ಹಣ್ಣು
ಪಪ್ಪಾಯಿಯಲ್ಲಿ ಇರುವ “ಪಪೈನ್‌’ ಎಂಬ ಕಿಣ್ವವು, ಜೀರ್ಣಾಂಗ ವ್ಯವಸ್ಥೆಯ ಎಲ್ಲಾ ತ್ಯಾಜ್ಯವನ್ನು ಹೊರ ತೆಗೆದು, ಜೀರ್ಣಕ್ರಿಯೆಯನ್ನು ಸುಲಭಗೊಳಿಸಬಲ್ಲದು. ದಿನನಿತ್ಯ ಎರಡು ಹೋಳು ಪಪ್ಪಾಯ ತಿನ್ನಿರಿ ಅಥವಾ ಸಕ್ಕರೆ ಬೆರೆಸದೆ ಜ್ಯೂಸ್‌ ಮಾಡಿ ಕುಡಿಯಿರಿ.

-ಲಿಂಬೆ ರಸ, ಸೋಡಾ
ಲಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ.

-ನೆಲ್ಲಿಕಾಯಿ
ನೆಲ್ಲಿಕಾಯಿ ತಿನ್ನುವುದರಿಂದ, ಅಂಗಡಿಯಲ್ಲಿ ಸಿಗುವ ನೆಲ್ಲಿಕಾಯಿ ಚೂರ್ಣ, ಸಂಸ್ಕರಿಸಿದ ರಸ ಕುಡಿಯುವುದರಿಂದ ಹೊಟ್ಟೆ ಭಾರ, ವಾಯು ಸಮಸ್ಯೆ ಕಡಿಮೆಯಾಗುತ್ತದೆ. ದೇಹದ ಕಲ್ಮಶಗಳನ್ನು ಹೊರ ಹಾಕಲೂ ಇದು ಸಹಕಾರಿ.

Advertisement

Udayavani is now on Telegram. Click here to join our channel and stay updated with the latest news.

Next