Advertisement

“ರಾಮನ ಹೆಸರಲ್ಲಿ ಅವ್ಯವಹಾರವಾಗಿಲ್ಲ’ : ಉತ್ತರ ಪ್ರದೇಶ ಡಿಸಿಎಂ ದಿನೇಶ್‌ ಶರ್ಮಾ ಸ್ಪಷ್ಟನೆ

09:18 PM Jun 14, 2021 | Team Udayavani |

ಲಕ್ನೋ: “ವಿಪಕ್ಷಗಳಲ್ಲಿರುವ ಕೆಲವರು ರಾಮಜನ್ಮಭೂಮಿ ಹೆಸರಿಗೆ ಕಳಂಕ ತರುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ” ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಕಿಡಿಕಾರಿದ್ದಾರೆ.

Advertisement

ರಾಮಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವತಿಯಿಂದ ಭೂ ಹಗರಣವಾಗಿದೆ ಎಂದು ಆರೋಪಗಳನ್ನು ಅಲ್ಲಗಳೆದ ಅವರು, “”ವಿಪಕ್ಷಗಳಲ್ಲಿರುವ ಕೆಲವರು ರಾಮ ಜನ್ಮಭೂಮಿ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದು, ಅವರಿಗೆ ಯಾವುದೇ ಅವಕಾಶವನ್ನು ಕಲ್ಪಿಸುವುದಿಲ್ಲ. ಮೊದಲು, ಶ್ರೀರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದರು.

ಆನಂತರ, ರಾಮ ಸೇತು ಅಸ್ತಿತ್ವದಲ್ಲೇ ಇಲ್ಲ ಎಂದರು. ಈಗ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಕಡೆ ಬೆರಳು ತೋರಿಸುತ್ತಿದ್ದಾರೆ” ಎಂದಿದ್ದಾರೆ. ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಮಂದಿರ ನಿರ್ಮಾಣ ಸುಗಮವಾಗಿ ಸಾಗುತ್ತಿರುವ ಈ ಸಂದರ್ಭದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡಲಾಗುತ್ತಿದೆ ಎಂದು ಅವರು ಗುಡುಗಿದ್ದಾರೆ.

ಇದನ್ನೂ ಓದಿ: ಡಿಮ್ಯಾಟ್‌ ಖಾತೆಗಳ ಸ್ಥಗಿತವಿಲ್ಲ: ಅದಾನಿ ಗ್ರೂಪ್‌ ಸ್ಪಷ್ಟನೆ

ವಿಪಕ್ಷಗಳ ಆರೋಪವೇನು?
ಅಯೋಧ್ಯೆಯಲ್ಲಿ ಎರಡು ರಿಯಲ್‌ ಎಸ್ಟೇಟ್‌ ಸಂಸ್ಥೆಗಳು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವತಿಯಿಂದ 1.208 ಹೆಕ್ಟೇರ್‌ ಭೂಮಿಯನ್ನು 2 ಕೋಟಿ ರೂ.ಗಳಿಗೆ ಪಡೆದು, ಕೇವಲ 10 ನಿಮಿಷಗಳಲ್ಲಿ ಅದನ್ನು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ಗೆ 18.2 ಕೋಟಿ ರೂ.ಗಳಿಗೆ ಮಾರಾಟ ಮಾಡಿವೆ ಎಂದು ಸಮಾಜವಾದಿ ಪಾರ್ಟಿಯ ನಾಯಕ ಪವನ್‌ ಪಾಂಡೆ ಭಾನುವಾರ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ, ಆಮ್‌ ಆದ್ಮಿ ಪಾರ್ಟಿ, ಕಾಂಗ್ರೆಸ್‌, ಶಿವಸೇನೆ ಮತ್ತಿತರ ಪಕ್ಷಗಳು ಪ್ರತಿಕ್ರಿಯಿಸಿ, ಇದೊಂದು ಹಗರಣವಾಗಿದ್ದು ಈ ಕುರಿತಂತೆ ತನಿಖೆಯಾಗಲೇಬೇಕೆಂದು ಆಗ್ರಹಿಸಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next