ಮುಂಬಯಿ: ಭಾರತ ನಿರ್ಮಿತ ಐಎನ್‌ಎಸ್ ವಿಶಾಖಪಟ್ಟಣಂ ಯುದ್ಧನೌಕೆಯನ್ನು ರವಿವಾರ ದಂದು ನೌಕಾಪಡೆಗೆ ನಿಯೋಜಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು, ಚೀನದ ಹೆಸರೆತ್ತದೆಯೇ ಆ ರಾಷ್ಟ್ರವನ್ನು ಬೇಜವಾಬ್ದಾರಿ ರಾಷ್ಟ್ರ ಎಂದು ಕರೆದಿದ್ದಾರೆ.
ಮುಂಬಯಿಯ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “ಅಂತಾರಾಷ್ಟ್ರೀಯ ಕಡಲ ಸಂಬಂಧದ ಬಗ್ಗೆ UNCLOS 1982 ಎಂಬ ಕಾನೂನಿದೆ. ಆದರೆ ಕೆಲವು ಬೇಜವಬ್ದಾರಿ ರಾಷ್ಟ್ರಗಳು ಈ ಕಾನೂನಿಗೆ ತಮ್ಮದೇ ವ್ಯಾಖ್ಯಾನ ನೀಡುತ್ತಿವೆ.
ನಮ್ಮ ದೇಶವು ಅಂತಾರಾಷ್ಟ್ರೀಯ ನಿಯ ಮಗಳ ಪ್ರಕಾರವೇ ಇಂಡೋ-ಫೆಸಿಫಿಕ್ ಪ್ರದೇಶವನ್ನು ರೂಪಿಸುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಬೂಸ್ಟರ್ ಡೋಸ್ ಲಸಿಕೆಯ ಅವಶ್ಯಕತೆಯಿಲ್ಲ : ಐಸಿಎಂಆರ್
ಚೀನದಲ್ಲಿ ಇತ್ತೀಚೆಗೆ ಹೊಸ ಕಡಲ ನಿಯಮ ಜಾರಿಗೊಳಿಸಲಾಗಿದ್ದು, ದಕ್ಷಿಣ ಚೀನದ ಸಮುದ್ರ ಭಾಗದಲ್ಲಿ ನೌಕಾದಳ ನಿಯೋ ಜನೆಯನ್ನೂ ಹೆಚ್ಚು ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಸಿಂಗ್ ಅವರು ಈ ಮಾತನ್ನು ಹೇಳಿದ್ದಾರೆ.