Advertisement

ಜಾನಪದ ಕಾರ್ಯಕ್ರಮ ಕೆಲವರ ಸೊತ್ತಲ್ಲ

03:48 PM Apr 15, 2017 | Team Udayavani |

ಚಿತ್ತಾಪುರ: ಸರ್ಕಾರದ ಜಾನಪದ ಕಾರ್ಯಕ್ರಮಗಳು ಕೆಲವರ ಸೊತ್ತಾಗಬಾರದು ಎಂದು ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್‌ ಪಾಟೀಲ ಹೇಳಿದರು. ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಗಣೇಶಾಂಜನೇಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್‌ ಹಾಗೂ  ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಝೇಂಕಾರ ಹಾಗೂ ವಚನ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಜಾನಪದ ಕಲಾವಿದರಿದ್ದಾರೆ. ಅವರಿಗೆ ಸರ್ಕಾರದ ಕಾರ್ಯಕ್ರಮಗಳು ಸಿಗುವಂತಾಗಬೇಕು. ಆದರೆ ಈಗ ಸರ್ಕಾರಿ ಕಾರ್ಯಕ್ರಮಗಳು ಕೆಲವರ ಸೊತ್ತಾಗುತ್ತಿವೆ. ಇದರಿಂದ ಮೂಲ ಜಾನಪದ ಕಲಾವಿದರು ಬೆಳಕಿಗೆ ಬಾರದೇ ವಂಚಿತಗೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. 

ಕನ್ನಡ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಮಾತನಾಡಿ, ಗ್ರಾಮೀಣ ಭಾಗದ ಮೂಲ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸಿ ಸನ್ಮಾನಿಸುವುದು ಜಿಲ್ಲಾದ್ಯಂತ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅದಕ್ಕೆ  ಜನರು ಕಲಾವಿದರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಕಜಾಪ ತಾಲೂಕು ಅಧ್ಯಕ್ಷ ಚನ್ನವೀರ ಕಣಗಿ, ವಲಯ ಅಧ್ಯಕ್ಷ ಭೀಮರಾಯ ಆಡಕಿ, ಹೊಂಗಿರಣ ಹಿರಿಯ  ನಾಗರಿಕ ಸಂಘದ ಅಧ್ಯಕ್ಷ ಮಹ್ಮದ್‌ ಇಬ್ರಾಹಿಂ, ಗ್ರಾಪಂ ಸದಸ್ಯ ದೇವಿಂದ್ರಪ್ಪ ಜೈನ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗಣೇಶಾಂಜನೇಯ ದೇವಸ್ಥಾನದ ಅಧ್ಯಕ್ಷ ಸಿದ್ದಣ್ಣ ಕಾವಲದಾರ ಅಧ್ಯಕ್ಷತೆ ವಹಿಸಿದ್ದರು.

ಜಾನಪದ ಝೇಂಕಾರದಲ್ಲಿ ಕಲಾವಿದರಾದ ವೀರಣ್ಣ ಮಾಸ್ತರ ಅಲ್ಲೂರ ವಚನ ಗಾಯನ ಹಾಡಿದರು. ನೈನೋದ್ದಿನ್‌ ಮಂಗಲಗಿ, ಕಾಶಿನಾಥ ನೀಲಹಳ್ಳಿ, ಶಂಕರ ಶಾಸ್ತ್ರಿ, ತಮ್ಮರಾಯ  ಕಾಮೊನೋರ್‌, ಶಾಂತಕುಮಾರ ಭಂಕಲಗಿ, ದೇವಿಂದ್ರಪ್ಪ ಹಕ್ಕಿ, ಮುಕ್ತಂಸಾಬ್‌ ಮುಲ್ಲಾ, ಮಹಾದೇವಿ, ಚಂದಮ್ಮ ಅವರಿಂದ ವಿವಿಧ ಜಾನಪದ ಕಲಾ ಪ್ರದರ್ಶನ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next