ಬಳ್ಳಾರಿ: ಜೆಡಿಎಸ್ ಜೊತೆಗೆ ಮೈತ್ರಿಗೆ ಹೈಕಮಾಂಡ್ ನಿರ್ಧಾರ ಮಾಡಿದೆ. ಮೈಸೂರು, ಬೆಂಗಳೂರು ಭಾಗದಲ್ಲಿ ಪರಿಣಾಮ ಬೀರಲಿದೆ. ನಮ್ಮ ಭಾಗದಲ್ಲಿ ಸ್ವಲ್ಪ ಕಡಿಮೆ ಇಂಪ್ಯಾಕ್ಟ್ ಆಗಬಹುದು. ಹಗರಿಬೊಮ್ಮನ ಹಳ್ಳಿ ಜೆಡಿಎಸ್ ಶಾಸಕ ನಮಗೆ ಬೆಂಬಲ ಕೊಡುತ್ತಾರೆ. ರಾಜ್ಯದಲ್ಲಿ ಎಲ್ಲಾ ಕಡೆ ಜೆಡಿಎಸ್ ಕಾರ್ಯಕರ್ತರಿದ್ದಾರೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ಹೆದರಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನವರು 26 ಪಕ್ಷ ಸೇರಿ ಇಂಡಿಯಾ ಕೂಡ ಮಾಡಿಕೊಂಡಿದ್ದಾರೆ. ಹಾಗಾದರೆ ಅವರು ಹೆದರಿದ ರೀತಿಯಾ ಎಂದು ಪ್ರಶ್ನಿಸಿದರು.
ಸೋಲಲಿ ಗೆಲ್ಲಲ್ಲಿ ಬಿಜೆಪಿ ಪಕ್ಷ ಸಂಘಟನೆ ನಿರಂತರ ಮಾಡಲಿದೆ. ಲೋಕಸಭೆ ಚುನಾವಣೆ ವಿಚಾರ ಯಾರಿಗೆ ಹೈಕಮಾಂಡ್ ಸೂಚನೆ ನೀಡುತ್ತಾರೋ ಅವರನ್ನು ಗೆಲ್ಲಿಸುತ್ತೇವೆ ಎಂದರು.
ಸನಾತನ ಧರ್ಮ ಇಲ್ಲ ಎನ್ನುವವರೇ ಇಲ್ಲ ಎಂದರ್ಥ. ಸನಾತನ ಧರ್ಮ ಇಲ್ಲ ಎನ್ನುವವರು ನಮ್ಮ ದೇಶದವರಲ್ಲ. ಈ ಭೂಮಿಯಲ್ಲಿ ಹುಟ್ಟಿದವರೆಲ್ಲರೂ ಸನಾತನ ಧರ್ಮದವರೇ. ಇಲ್ಲಿ ಹುಟ್ಟಿದವರು ಸನಾತನ ಧರ್ಮ ಪಾಲಿಸಬೇಕು ಎಂದರು.
ಬಳ್ಳಾರಿ ದುರ್ಗಮ್ಮ ದೇಗುಲದ ಬಳಿ ‘ನನ್ನ ದೇಶ ನನ್ನ ಮಣ್ಣು’ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ‘ದೇಶದ ಪವಿತ್ರ ಮಣ್ಣನ್ನು ದೆಹಲಿಗೆ ಕಳುಹಿಸಲಿದ್ದೇವೆ. ದೇಶದ ಎಲ್ಲ ಕಡೆಯ ಮಣ್ಣು ಪಡೆದು ಪ್ರಗತಿ ಪಥ ರಸ್ತೆಯಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ ಎಂದರು.