Advertisement

ವಿಜಯನಗರ ಸಾಮ್ರಾಜ್ಯ ಪತನಕ್ಕೆ ಸಜ್ಜಾದ ಸಿಂಗ್‌

03:27 PM Feb 11, 2021 | Team Udayavani |

ಬಳ್ಳಾರಿ: ಶ್ರೀಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯವನ್ನು ಆಂಧ್ರಪ್ರದೇಶದವರೆಗೆ ವಿಸ್ತರಣೆ ಮಾಡಿದ್ದರೆ ಸಚಿವ ಆನಂದ ಸಿಂಗ್‌ ಚಿಕ್ಕದಾಗಿಸಿ ವಿಜಯನಗರ ಸಾಮ್ರಾಜ್ಯವನ್ನು ಪತನ ಮಾಡಲು ಹೊರಟಿದ್ದಾರೆ ಎಂದು ಶಾಸಕ ಜಿ. ಸೋಮಶೇಖರರೆಡ್ಡಿ ಜಿಲ್ಲೆ ವಿಭಜನೆಗೆ ಬಗ್ಗೆ ಮತ್ತೂಮ್ಮೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಅಖಂಡವಾಗಿದ್ದ ಬಳ್ಳಾರಿ ಜಿಲ್ಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ವಿಭಜಿಸಿ ಕಡಿಮೆ ಮಾಡುವ ಮೂಲಕ ವಿಜಯನಗರ ಸಾಮ್ರಾಜ್ಯವನ್ನು ಪತನಗೊಳಿಸುತ್ತಿದ್ದಾರೆ. ಕೇವಲ ಐದಾರು ತಾಲೂಕುಗಳಿಗೆ ಸೀಮಿತಗೊಳಿಸಿದ್ದಾರೆ. ಸಾಮ್ರಾಜ್ಯವನ್ನು ವಿಸ್ತರಿಸಬೇಕೆ ಹೊರತು ಅದನ್ನು ಸಣ್ಣದಾಗಿ ಮಾಡಬಾರದು. ಮುಂದಿನ ದಿನಗಳಲ್ಲಿ ಹಂಪಿ ಗ್ರಾಮವೊಂದನ್ನೇ ಜಿಲ್ಲೆ ಮಾಡು ಅಂತಲೂ ಕೇಳಬಹುದೇನೋ. ವಿಜಯನಗರ ಸಾಮ್ರಾಜ್ಯ ಈಗಾಗಲೇ ಒಮ್ಮೆ ಪತನವಾಗಿದೆ. ಇದೀಗ ಆನಂದ ಸಿಂಗ್‌ ಎರಡನೇ ಬಾರಿಗೆ ಪತನ ಮಾಡಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಆನಂದ ಸಿಂಗ್‌ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಯಬಾರದು.

ಇದನ್ನು ನಾನು, ನಮ್ಮ ಕಾರ್ಯಕರ್ತರು ಒಪ್ಪುವುದಿಲ್ಲ. ಹಾಗಂತ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮುಖ್ಯಮಂತ್ರಿಗಳು ಕೊಟ್ಟರೆ ನಿಭಾಯಿಸುವೆ. ಒಂದು ವೇಳೆ ಸಚಿವ ಬಿ. ಶ್ರೀರಾಮುಲು ಅವರಿಗೆ ಉಸ್ತುವಾರಿ ನೀಡಿದರೂ ಓಕೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next