ಮೈಸೂರು: ನಮ್ಮವರೇ ನಮ್ಮ ಕಾಲು ಎಳೆಯುವುದು, ಮೂಲೆ ಗುಂಪು ಮಾಡುವುದನ್ನು ಬಿಡಬೇಕು ಎಂದು ಮಾಜಿ ಸಚಿವ ವಿ.ಸೋಮಣ್ಣ ಸ್ವಪಕ್ಷೀಯರ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು.
ಅಖೀಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಬರುವವರೆಗೆ ನಾನು ಸೋತೇ ಇರಲಿಲ್ಲ. ಬಿಜೆಪಿಗೆ ಬಂದಾಗಿನಿಂದ 4-5 ಬಾರಿ ಸೋತಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ. ನಾನು ಏನಾಗಿಬಿಡುತ್ತೇನೋ ಅನ್ನೋ ಭಯದಲ್ಲಿ ಸೋಲಿಸಿದರು ಎಂದು ಹೇಳುವ ಮೂಲಕ ತಮ್ಮ ಸೋಲಿನ ಕಹಿ ಅನುಭವವನ್ನು ವೇದಿಕೆಯಲ್ಲಿದ್ದ ಸಂಸದ ವಿ. ಶ್ರೀನಿವಾಸದ ಪ್ರಸಾದ್ ಬಳಿ ನೇರವಾಗಿ ಹಂಚಿಕೊಂಡರು.
ಬಳಿಕ ಮಾತನಾಡಿದ ಸಂಸದ ವಿ. ಶ್ರೀನಿವಾಸ ಪ್ರಸಾದ್, ವೀರಶೈವ ಧರ್ಮ ಜಾಗತಿಕ ಧರ್ಮವಾಗಿದ್ದು, ಇಂತಹ ಧರ್ಮದಲ್ಲಿ ಹುಟ್ಟಿ ಪಂಚಮಶಾಲಿಗಳು ಕೋರ್ಟ್ ಮೆಟ್ಟಿಲು ಹತ್ತಿದ್ದನ್ನು ನೋಡಿದರೆ ನಾಚಿಕೆಯಾಗುತ್ತದೆ. ಜಾತಿಯನ್ನು ತೊಡೆಯಲು ಬಂದ ಧರ್ಮವೇ ಕೋರ್ಟ್ ಮೆಟ್ಟಿಲೇರಿದರೆ ಹೇಗೆ ಎಂದು ಹೇಳುವ ಮೂಲಕ ಪಂಚಮಸಾಲಿಗಳು ಮೀಸಲಾತಿ ಕೇಳುತ್ತಿರುವುದನ್ನು ನೇರವಾಗಿ ಖಂಡಿಸಿದರು.
ಸೋಮಣ್ಣಗೆ ತಿರುಗೇಟು
ಈಗ ಸೋಲಿನ ಚರ್ಚೆ ಮಾಡುವುದು ಬೇಡ. ನಮ್ಮ ಮುಂದೆ ಲೋಕಸಭಾ ಚುನಾವಣೆ ಇದೆ. ಹಿಂದಿನ ಚುನಾವಣೆಯ ಫಲಿತಾಂಶವನ್ನು ಪೋÓr…ಮಾರ್ಟಮ್ ಮಾಡುವುದು ಬೇಡ. ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷದ ನಾಯಕರನ್ನು ಆಯ್ಕೆ ಮಾಡಬೇಕಿದೆ. ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೋ ಅದರ ಮೇಲೆ ನಾವು ಕೆಲಸ ಮಾಡಬೇಕು ಎಂದು ಹೇಳಿದರು.