Advertisement

ದ್ವಿಚಕ್ರ ವಾಹನ ದುರಸ್ತಿಗಾರರ ಸಮಸ್ಯೆ ಪರಿಹರಿಸಿ

03:37 PM May 09, 2022 | Team Udayavani |

ಚಿಕ್ಕಮಗಳೂರು: ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಸಂಘದಿಂದ ಅನೇಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ಅಧ್ಯಕ್ಷ ಅಬೂಬಕ್ಕರ್‌ ಹೇಳಿದರು.

Advertisement

ಭಾನುವಾರ ನಗರದ ಮಲ್ಲಂದೂರು ರಸ್ತೆಯ ಸಂಘದ ಕಚೇರಿಯಲ್ಲಿ ನಡೆದ ಕೋರ್‌ ಕಮಿಟಿ ಸಭೆ ಹಾಗೂ ವಿಶ್ವ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ವರ್ಕ್ ಶಾಪ್‌ಗಳಿವೆ. ಇತ್ತೀಚಿನ ದಿನಗಳಲ್ಲಿ ಗ್ಯಾರೇಜ್‌ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮೆಕ್ಯಾನಿಕ್‌ ಕೆಲಸ ನಿರ್ವಹಿಸಲು ಮುಂದಾಗುತ್ತಿಲ್ಲ ಎಂದರು. ಉತ್ತಮ ಮೆಕ್ಯಾನಿಕ್‌ ಮನಸ್ಸು ಮಾಡಿದರೆ 100 ವರ್ಷಗಳ ಹಳೇ ವಾಹನವನ್ನು ಉತ್ತಮ ಸ್ಥಿತಿಗೆ ತರಬಲ್ಲ ಎಂದ ಅವರು, ಕಾಯಕದಲ್ಲಿ ನಿಷ್ಟೆ, ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿದೆ ಎಂದರು.

ಕಾರ್ಯದರ್ಶಿ ಜಯದೇವ್‌ ಮಾತನಾಡಿ, ಸಂಘವು ಇಂದಿಗೆ ಎಂಟು ವರ್ಷಗಳನ್ನು ಪೂರೈಸಿದೆ. ಮೆಕ್ಯಾನಿಕ್‌ ಕೆಲಸದಲ್ಲಿರುವ ಯುವಕರಿಗೆ ಇನ್ಶೂರೆನ್ಸ್‌ ಸೌಲಭ್ಯ ಕಲ್ಪಿಸಿದೆ. ಶಿವಮೊಗ್ಗದಲ್ಲಿ ಮೋಟಾರ್‌ ದುರಸ್ತಿ ತರಬೇತಿ ನಡೆಸಲಾಗುತ್ತಿದ್ದು ಆಸಕ್ತಿಯುಳ್ಳ ಯುವಕರು ಭಾಗವಹಿಸಬಹುದು. ಮೋಟಾರ್‌ ಬೈಕ್‌ಗಳ ನಿರ್ವಹಣೆ ಹಾಗೂ ಡಿಜಿಟಲ್‌ ಆ್ಯಪ್‌ ಮೂಲಕ ಸಮಸ್ಯೆ ಕಂಡುಹಿಡಿಯುವ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಾಲಕೃಷ್ಣ ಮಾತನಾಡಿ, ಯಾವುದೇ ಕೆಲಸವಾದರೂ ನಾವೆಲ್ಲರೂ ಪೂರ್ತಿಯಾಗಿ ಕಲಿತಿರುವುದಿಲ್ಲ. ಕಲಿಯಬೇಕಾದದ್ದು ಸಾಕಷ್ಟಿದ್ದು ಅದನ್ನು ಅರಿತು ಬಾಳಬೇಕು. ಜಾತಿ, ಬೇಧ ಇಲ್ಲದೇ ವೃತ್ತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

Advertisement

ಸಂಘದ ಉಪಾಧ್ಯಕ್ಷ ಕಾಂತರಾಜ್‌, ಉಸ್ತುವಾರಿ ಕಾರ್ಯದರ್ಶಿ ಅಸ್ಲಂ, ಖಜಾಂಚಿ ಸುರೇಶ್‌, ಎನ್.ಆರ್. ಪುರ ತಾಲೂಕು ಅಧ್ಯಕ್ಷ ಅಹ್ಮದ್‌ ಪಾಷ, ಕಡೂರು ಅಧ್ಯಕ್ಷ ತಮ್ಮಯ್ಯ, ಬೀರೂರು ಅಧ್ಯಕ್ಷ ಮಹೇಶ್‌, ತರೀಕೆರೆ ಅಧ್ಯಕ್ಷ ಲಕ್ಷ್ಮಣ್‌, ಅಜ್ಜಂಪುರ ಅಧ್ಯಕ್ಷ ಪತ್ತದಾದು, ಕೊಪ್ಪ ಅಧ್ಯಕ್ಷ ಶೇಖರ್‌, ಶೃಂಗೇರಿ ಅಧ್ಯಕ್ಷ ಶೌಕತ್‌, ಸೋಮಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next