Advertisement

ಆ್ಯಸಿಡಿಟಿ ಸಮಸ್ಯೆಗೆ ಪರಿಹಾರ

10:25 PM Jan 20, 2020 | mahesh |

ಹೊಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಆಮ್ಲದ ಉತ್ಪಾದನೆಯಿಂದ ಆ್ಯಸಿಡಿಟಿ(ಪಿತ್ತ) ಕಾಣಿಸಿಕೊಳ್ಳುತ್ತದೆ. ನಾವು ಸೇವಿಸಿದ ಆಹಾರವು ಹೊಟ್ಟೆಯಲ್ಲಿ ಆಮ್ಲಿಯವಾಗಿ ಪರಿವರ್ತನೆ ಹೊಂದಿ ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಆಮ್ಲದ ಪ್ರಮಾಣ ಹೆಚ್ಚಾದರೆ ಆ್ಯಸಿಡಿಟಿಗೆ ಕಾರಣವಾಗುತ್ತದೆ. ಪಿತ್ತ ಹೆಚ್ಚಾದಾಗ ಎದೆಯಲ್ಲಿ ಉರಿ, ಉದ್ವೇಗ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಅನ್ನನಾಳದ ಕೋಶದ ವೈಫ‌ಲ್ಯದಿಂದ ಆಮ್ಲವು ಅನ್ನನಾಳಕ್ಕೆ ಹೋಗದಂತೆ ತಡೆ ಉಂಟಾಗುವುದರಿಂದ ಆ್ಯಸಿಡಿಟಿ ಹೆಚ್ಚಾಗುತ್ತದೆ. ಆ್ಯಸಿಡಿಟಿಗೆ ನಾವು ಸೇವಿ ಸುವ ಆಹಾರವೇ ಮುಖ್ಯ ಕಾರಣ.

Advertisement

ಮನೆ ಔಷಧಗಳು
ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ, ಸೋಸಿ ಕುಡಿಯಬೇಕು ಅಥವಾ ಸ್ವಲ್ಪ ಪ್ರಮಾಣದ ಹುರಿದ ಜೀರಿಗೆಯನ್ನು ಅರೆದು ಒಂದು ಲೋಟ ನೀರಿಗೆ ಬೆರೆಸಿ ಊಟವಾದ ಬಳಿಕ ಕುಡಿದರೂ ಸಮಸ್ಯೆಯಿಂದ ಪರಿಹಾರವಾಗುತ್ತದೆ.

ಬಾಳೆಹಣ್ಣು
ಅತಿಯಾದ ಆ್ಯಸಿಡಿಟಿಯಿಂದ ನೀವು ಬಳಲುತ್ತಿದ್ದಲ್ಲಿ, ಚೆನ್ನಾಗಿ ಕಲಿತ ಬಾಳೆ ಹಣ್ಣು ಸೇವಿಸಿ. ಅಂಟಾಸಿಡ್‌ ಗುಣಗಳಿಂದ ತುಂಬಿರುವ ಬಾಳೆಹಣ್ಣು ನೈಸರ್ಗಿಕವಾಗಿ ಪಿತ್ತ ಶಮನ ಮಾಡುವ ಗುಣಗಳನ್ನು ಹೊಂದಿದೆ.

ಪುದೀನಾ
ಕೆಲ ಪುದೀನಾ ಎಲೆಗಳನ್ನು ಸಣ್ಣದಾಗಿ ಹೆಚ್ಚಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ಆರಿಸಿದ ಅನಂತರ ಕುಡಿಯಬೇಕು. ಪಿತ್ತ ನಿವಾರಣೆಯಲ್ಲಿ ಪುದೀನಾ ಪ್ರಮುಖ ಪಾತ್ರ ವಹಿಸುತ್ತದೆ. ಪುದೀನಾ ಅಜೀರ್ಣವನ್ನು ನಿವಾರಿಸಿ, ದೇಹಕ್ಕೆ ತಂಪು ನೀಡುತ್ತದೆ.

ಮಜ್ಜಿಗೆ
ಪಿತ್ತವನ್ನು ಶೀಘ್ರವಾಗಿ ನಿವಾರಣೆ ಮಾಡುವ ಗುಣ ಮಜ್ಜಿಗೆಗೆ ಇದೆ. ಸ್ವಲ್ಪ ಕರಿಮೆಣಸಿನ ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಕುಡಿಯುವುದು ಪಿತ್ತ ನಿವಾರಣೆಗೆ ಪರಿಣಾಮಕಾರಿಯಾಗಿದೆ.

Advertisement

ಲವಂಗ
ಬಾಯಲ್ಲಿ ಲವಂಗವನ್ನಿಟ್ಟುಕೊಂಡು ಅದು ರಸ ಬಿಡುವವರೆಗೂ ಚೆನ್ನಾಗಿ ಜಗಿಯಬೇಕು. ಇದರಿಂದಲೂ ಪಿತ್ತವನ್ನುನಿವಾರಿಸಬಹುದು. ಸಮಪ್ರಮಾಣದಲ್ಲಿ ಲವಂಗ ಹಾಗೂ ಏಲಕ್ಕಿ ಪುಡಿ ಮಿಕ್ಸ್‌ ಮಾಡಿ ಸೇವಿಸುವುದು ಸಹ ಒಳ್ಳೆಯದು.

ಶುಂಠಿ
ಶುಂಠಿ ಚೂರುಗಳನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಬಳಿಕ ಸೇವಿಸಿ. ಒಂದಿಷ್ಟು ಶುಂಠಿಯನ್ನು ಚೆನ್ನಾಗಿ ಅರೆದು ಇದರ ರಸ ತೆಗೆದು ಸೇವಿಸುವುದು ಕೂಡ ಪರಿಣಾಮಕಾರಿಯಾಗಿದೆ.

ದಾಲ್ಚಿನ್ನಿ
ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಒಂದು ಚಮಚ ದಾಲಿcನ್ನಿ ಹುಡಿ ಹಾಕಿ. ದಾಲ್ಚಿನ್ನಿ ತನ್ನ ರಸ ಬಿಟ್ಟ ಅನಂತರ ಈ ನೀರನ್ನು ಕುಡಿಯಬೇಕು. ಇದು ಪಿತ್ತಶಮನ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next