ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯ ದೊಂ ದಿಗೆ ಎಸ್. ಮಧುಸೂದನ್ ಅವರು ರಚಿಸಿರುವ ಮೂರುದಿನಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಗರದ ಜಿಲ್ಲಾಡ ಳಿತ ಭವನದ ಆವರಣದಲ್ಲಿ ನಡೆಯುತ್ತಿದೆ.
ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಒಳ ಆವರಣದಲ್ಲಿ ಆಯೋಜಿತವಾಗಿರುವ ಚಿತ್ರಕಲಾ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಚಾಲನೆ ನೀಡಿ, ಚಿತ್ರಕಲೆ ಮನಸ್ಸಿನ ಭಾವನೆ ಗಳನ್ನು ಹೊರಹಾಕಲು ಇರುವ ವೇದಿಕೆ ಎಂದರು.
ಜಿಲ್ಲೆಯ ಸಾಂಸ್ಕೃತಿಕ ಜನಪದ ಕಲೆಯಾದ ಗೊರವರ ಕುಣಿತ ಚಿತ್ರಕಲೆಯುಕಲಬುರಗಿಯಲ್ಲಿ ನಡೆದ ಅಖೀಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಬಡ ರೈತನ ಚಿತ್ರ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯಪ್ರದರ್ಶನಕ್ಕೂ ಆಯ್ಕೆಯಾಗಿದೆ ಎಂದು ಕಲಾವಿದ ಮಧುಸೂದನ್ ತಿಳಿಸಿದರು.
ಮುಖಂಡ ಸುರೇಶ್ ರಾಮಸಮುದ್ರ ಮಾತನಾಡಿ, ಕಲಾವಿದರಿಗೆ ಮತ್ತಷ್ಟುಉತ್ತೇ ಜನ ಅಗತ್ಯವೆಂದರು. ಈ ವೇಳೆಕಲಾವಿದರಾದ ಮಧುಸೂದನ್, ಮುಡಿಗುಂಡಮೂರ್ತಿ ಹಾಗೂ ಮಹದೇವುಅವರು ಪ್ರತ್ಯೇಕ ವಾಗಿ ಚಿತ್ರಿಸಿರುವ ಡೀಸಿಡಾ.ಎಂ.ಆರ್.ರವಿ ಅವರ ಚಿತ್ರವನ್ನು ಜಿಲ್ಲಾಧಿ ಕಾರಿಗೆ ನೀಡಿದರು. ಮಧುಸೂ ದನ್ ಅವರ ಕುಂಚದಲ್ಲಿ ಪ್ರಕೃತಿ ಸೌಂದರ್ಯ, ವನ್ಯಜೀವಿ, ಬುಡಕಟ್ಟು ಜನರ ಸಂಸ್ಕೃತಿ, ರಾಷ್ಟ್ರ ಕಂಡ ಪ್ರಬುದ್ಧ ನಾಯಕರು , ನವೋದಯ ಸಾಹಿತಿಗಳ ಚಿತ್ರಣ ನೋಡುಗರ ಕಣ್ಮನ ಸೆಳೆಯುತ್ತಿವೆ. ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಕೆ. ಸಿ.ಮಹದೇವ ಶೆಟ್ಟಿ, ಸಾಹಿತಿ ಸೋಮಶೇಖರ್ ಬಿಸಲ್ವಾಡಿ, ಕಲಾವಿದರಾದ ರಾಜಶೇಖರ್, ಅಭಿಲಾಷ್, ರಾಚಪ್ಪಾಜಿ, ಶಿವಕುಮಾರ್ ಇದ್ದರು.