ಸೊಲ್ಲಾಪುರ: ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ಅಕ್ಕಲಕೋಟ ಮತ್ತು ಮಹಾರಾಷ್ಟ್ರ ಬಹುಜನ ಮಧ್ಯವರ್ತಿ ಶಿವಜನ್ಮೋತ್ಸವ ಯುವಕ ಮಂಡಳ ಅಕ್ಕಲಕೋಟ ಸಹಯೋಗದಲ್ಲಿ ಫೆ. 19ರಿಂದ 22ರ ವರೆಗೆ ಅಕ್ಕಲಕೋಟ ನಗರದ ಫತ್ತೆಸಿಂಹ ಚೌಕ್‌ನಲ್ಲಿ ಶಿವಜಯಂತಿ ನಿಮಿತ್ತ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿವಜನ್ಮೋತ್ಸವ ಯುವಕ ಮಂಡಳಿ ಅಧ್ಯಕ್ಷ ಮನೋಜ್ ನಿಕಮ್ ಹೇಳಿದರು.
ಅಕ್ಕಲಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸಲೆ, ಸುರೇಶ್ಚಂದ್ರ ಸೂರ್ಯವಂಶಿ, ಅಮೋಲರಾಜೆ ಭೋಸಲೆ, ಮಹೇಶ ಇಂಗಳೆ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಶಿವಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿವರ್ಷದಂತೆ ಮಹಾರಾಷ್ಟ್ರ ಬಹುಜನ ಮಧ್ಯವರ್ತಿ ಶಿವಜನ್ಮೋತ್ಸವ ಯುವಕ ಮಂಡಳಿ ವತಿಯಿಂದ ಫೆ. 19ರಂದು, ಬೃಹತ್ ಸಿಂಹಾಸನಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ, ಲೆಜಿಮ್ ತಂಡದಿಂದ ಅದ್ಧೂರಿ ಪ್ರದರ್ಶನ ಮೂಲಕ ಶಿವಜಯಂತಿ ಮೆರವಣಿಗೆ ನಡೆಯಲಿದೆ. ಪಟ್ಟಣದ ಖಂಡೋಬಾ ಮಂದಿರದಿಂದ ಮುಖ್ಯ ರಸ್ತೆಗಳ ಮೂಲಕ ಫತ್ತೆಸಿಂಹ ಚೌಕ್ ವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸಲೆ ಮೆರವಣಿಗೆ ಉದ್ಘಾಟಿಸುವರು ಎಂದು ಹೇಳಿದರು.
ಸೊಲ್ಲಾಪುರ ನಗರಸೇವಕ ಅಮೋಲ ಶಿಂಧೆ, ಚೇತನ ನರೂಟೆ, ಮಾಜಿ ಶಿಕ್ಷಣ ಸಭಾಪತಿ ಸಂಕೇತ ಪಿಸೆ, ಮಂಡಳಿಯ ಖಜಾಂಚಿ ಲಾಲಾ ರಾಠೊಡ, ಆರ್‌ಎಸ್‌ಪಿ ಜಿಲ್ಲಾಧ್ಯಕ್ಷ ಸುನೀಲ ಬಂಡಗರ್, ನಗರಸೇವಕ ಮಿಲನ್ ಕಲ್ಯಾಣಶೆಟ್ಟಿ, ಸದ್ದಾಂ ಶೆರಿಕರ್, ಆರ್‌ಪಿಐ ತಾಲೂಕು ಅಧ್ಯಕ್ಷ ಅವಿನಾಶ ಮಡಿಖಾಂಬೆ, ವಡ್ಡರ್ ಸಮಾಜದ ತಾಲ್ಲೂಕು ಅಧ್ಯಕ್ಷ ಅಂಕುಶ್ ಚೌಗುಲೆ, ಬಂಜಾರಾ ಸಮುದಾಯದ ಮುಖಂಡ ಋತುರಾಜ (ಬಂಟಿ) ರಾಠೊಡ, ಸಂದೀಪ ಮಡಿಖಾಂಬೆ, ಆರ್‌ಪಿಐ (ಎ) ಮುಸ್ಲಿಂ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಸೊಹೇಲ್ ಬಾಗವಾನ್ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಅಂದು ಸಂಜೆ 7 ಗಂಟೆಗೆ ನಗರಾಧ್ಯಕ್ಷೆ ಶೋಭಾ ಖೇಡಗಿ, ತಾ.ಪಂ ಅಧ್ಯಕ್ಷೆ ಸುನಂದಾ ಗಾಯಕವಾಡ ಸಮ್ಮುಖದಲ್ಲಿ ಹಿರಕಣಿ ಮಹಿಳಾ ಬಹು ಉದ್ದೇಶಿತ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ಅಲಕಾತಾಯಿ ಭೋಸಲೆ ಹಸ್ತದಿಂದ ಬೃಹತ್ ಸಿಂಹಾಸನಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದೆ. ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ ಅಧ್ಯಕ್ಷತೆ ವಹಿಸುವರು. ತಹಶೀಲ್ದಾರ್ ಅಂಜಲಿ ಮರೋಡ್, ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಡಾ| ಸಂತೋಷ ಗಾಯಕವಾಡ, ಮುಖ್ಯಾಧಿ ಕಾರಿ ಆಶಾ ರಾವುತ್, ಶ್ರೀ ವಟವೃಕ್ಷ ಸ್ವಾಮಿ ಮಹಾರಾಜ್ ದೇವಸ್ಥಾನದ ಅಧ್ಯಕ್ಷ ಮಹೇಶ ಇಂಗಳೆ, ಎನ್‌ಸಿಪಿ ನಾಯಕ ದಿಲೀಪ ಸಿದ್ಧೆ, ಉತ್ತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಕಲ್ಲಪ್ಪ ಪೂಜಾರಿ, ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿಜಯ ಜಾಧವ, ಸುರೇಶ ಸೂರ್ಯವಂಶಿ, ಫತ್ತೆಸಿಂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಾಬಾಸಾಹೇಬ್ ನಿಂಬಾಳಕರ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಫೆ. 20ರಂದು ಸಂಜೆ 6 ಗಂಟೆಗೆ ಮಾಜಿ ಸಚಿವ ಸಿದ್ಧರಾಮ ಮ್ಹೇತ್ರೆ ಹಸ್ತಯಿಂದ ಸುಮಾರು 50 ವಿವಿಧ ಸಂಘ-ಸಂಸ್ಥೆಗಳಿಗೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿ.ಪಂ ಮಾಜಿ ಕೃಷಿ ಸಭಾಪತಿ ಮಲ್ಲಿಕಾರ್ಜುನ ಪಾಟೀಲ, ನಗರಸೇವಕ ಬಸಲಿಂಗಪ್ಪ ಖೇಡಗಿ, ಅಶ್ಪಾಕ್ ಬಳ್ಳೋರಗಿ, ಉತ್ತಮ ಗಾಯಕವಾಡ, ಬಾಳಾಸಾಹೇಬ ಮೋರೆ, ಆನಂದ ತಾನವಡೆ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.
ಫೆ. 21ರಂದು ಸಂಜೆ 6 ಗಂಟೆಗೆ ಶಹಾಜಿ ಪ್ರಾಥಮಿಕ ಶಾಲೆಯಲ್ಲಿ “ಯುಗ ಪ್ರವರ್ತಕ ರಾಜಾ ಶಿವಛತ್ರಪತಿ’ ವಿಷಯ ಕುರಿತು ಸುರೇಶ ಪವಾರ ಉಪನ್ಯಾಸ ನೀಡುವರು. ಶಿವಸೇನಾ ತಾಲೂಕು ಅಧ್ಯಕ್ಷ ಸಂಜಯ ದೇಶಮುಖ, ಉಪನಗರಾಧ್ಯಕ್ಷ ಯಶವಂತ ಧೋಂಗಡೆ, ವಕೀಲ ವಿಜಯ ಹಾರ್ಡಿಕರ್, ವಕೀಲ ಸಂತೋಷ ಖೋಬರೆ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಲಿದೆ. ಫೆ. 22ರಂದು ಸಂಜೆ 6 ಗಂಟೆಗೆ ಶಹಾಜಿ ಪ್ರಾಥಮಿಕ ಶಾಲೆಯಲ್ಲಿ “ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ’ ಕುರಿತು ಪಾಣಿಪತಕಾರ್ ಮತ್ತು ಇತಿಹಾಸಕಾರ ವಿಶ್ವಾಸರಾವ್ ಪಾಟೀಲ (ಐಎಎಸ್, ಮುಂಬೈ) ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು.
ಶಾಸಕ ಸಚಿನ್ ಕಲ್ಯಾಣಶೆಟ್ಟಿ, ಸೊಲ್ಲಾಪುರ ಮಾಜಿ ನಗರಸೇವಕ ಕಿರಣ ಪವಾರ, ಮಾಜಿ ಉಪ ಮೇಯರ್ ದಿಲೀಪ ಕೊಲ್ಹೆ, ಎನ್‌ಸಿಪಿ ಶಹರ ಅಧ್ಯಕ್ಷ ಸಂತೋಷ ಪವಾರ, ರಾಜನ್ ಜಾಧವ, ಮಾವೂಲಿ ಪವಾರ, ಅರುಣ ರೋಡಗೆ, ಮಹೇಶ ಹಿಂಡೋಳೆ, ಶ್ರೀಕಾಂತ ಘಾಡಗೆ, ಅಭಿನಂದನ ಗಾಂಧಿ , ವಿಶಾಲ ದೋಶಿ, ಸಂಜಯ ಶಿಂಧೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.